ಖ್ಯಾತ ಯೂಟ್ಯೂಬರ್ ಸಾವು: ಸೂಪರ್‌ಬೈಕ್‌ನಲ್ಲಿ 300 ಕಿ.ಮೀ ಸ್ಪೀಡ್‌ನಲ್ಲಿ ಹೋಗುವ ಪ್ರಯತ್ನದಲ್ಲಿ ಡಿವೈಡರ್ ಡಿಕ್ಕಿ

ಹಲವು ಯೂಟ್ಯೂಬರ್ ಗಳು ಜನರನ್ನು ಸೆಳೆಯಲು ವಿಭಿನ್ನವಾದ ವೀಡಿಯೊಗಳನ್ನು ಮಾಡಲು ಪ್ರಯತ್ನಿಸುತ್ತಾರೆ. ಇದರಿಂದ ಹಲವು ಜನರು ಅಪಘಾತಗಳಾಗಿ ಸಾವನ್ನಪ್ಪಿದ್ದಾರೆ. ಇದೇ ರೀತಿ ಜನಪ್ರಿಯ ಯೂಟ್ಯೂಬರ್ ಅಗಸ್ತ್ಯ ಚೌಹಾಣ್ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಯಮುನಾ ಎಕ್ಸ್‌ಪ್ರೆಸ್‌ವೇಯಲ್ಲಿ ಗಂಟೆಗೆ 300 ಕಿ.ಮೀ ವೇಗದಲ್ಲಿ ತಲುಪುವ ಪ್ರಯತ್ನದಲ್ಲಿ ಭೀಕರ ಅಪಘಾತ ಸಂಭವಿಸಿದೆ.

ಜನಪ್ರಿಯ ಯೂಟ್ಯೂಬರ್ ಅಗಸ್ತ್ಯ ಚೌಹಾಣ್ ಅಪಘಾತ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾನೆ. ಅಗಸ್ತ್ಯ ಒಬ್ಬ ವೃತ್ತಿಪರ ಬೈಕರ್ ಎಂದು ಅನೇಕ ವರದಿಗಳು ಹೇಳುತ್ತವೆ ಅವರು ದೀರ್ಘಕಾಲದವರೆಗೆ ಬೈಕುಗಳನ್ನು ಓಡಿಸುತ್ತಿದ್ದರು. ಬೈಕ್ ಗಳೊಂದಿಗೆ ವೀಡಿಯೊಗಳನ್ನು ಮಾಡುತ್ತಿದ್ದರು. ಯೂಟ್ಯೂಬರ್ ಅಗಸ್ತ್ಯ ಚೌಹಾಣ್ ಅವರ ಯೂಟ್ಯೂಬ್ ಚಾನೆಲ್ ಹೆಸರು 'PRO RIDER 1000' ಆಗಿದೆ. ಇದಕ್ಕೆ 1.2 ಮಿಲಿಯನ್ ಸಬ್‌ಸ್ಕ್ರೈಬರ್ಸ್ ಅನ್ನು ಹೊಂದಿದ್ದಾರೆ.

YouTuber Agastya Chauhan

ಅಪಘಾತ ಸಂಭಬಿಸುವ 16 ಗಂಟೆಗಳ ಮೊದಲು ಅವರು ವೀಡಿಯೊವನ್ನು ಅಪ್‌ಲೋಡ್ ಮಾಡಿದ್ದಾರೆ. ಅವರು ಸವಾರಿ ಮಾಡುತ್ತಿದ್ದ ಕವಾಸಕಿ ZX-10R ಸೂಪರ್‌ಬೈಕ್ ತುಂಡಾಗಿ ಚೆಲ್ಲಾಪಿಲ್ಲಿಯಾಗಿತ್ತು. ಅಲ್ಲದೇ ಯೂಟ್ಯೂಬರ್ ಧರಿಸಿದ ಹೆಲ್ಮೆಟ್ ಕೂಡ ಹಲವಾರು ತುಂಡುಗಳಾಗಿ ಒಡೆದುಹೋಗಿದೆ, ಈ ಭೀಕರ ಅಪಘಾತದಲ್ಲಿ ಅಗಸ್ತ್ಯ ಅವರ ತಲೆಗೆ ತೀವ್ರ ಪೆಟ್ಟು ಬಿದ್ದ ಕಾರಣ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಇನ್ನು ಯಮುನಾ ಎಕ್ಸ್‌ಪ್ರೆಸ್‌ವೇಯಲ್ಲಿ ಅಗಸ್ತ್ಯ ಆಗ್ರಾದಿಂದ ದೆಹಲಿಗೆ ಪ್ರಯಾಣಿಸುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಘಟನೆಯ ನಿಖರವಾದ ಸ್ಥಳವು ಉತ್ತರ ಪ್ರದೇಶದ ತಪ್ಪಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 47 ಮೈಲ್ ಆಗಿದೆ. ಟಾಪ್ ಸ್ಪೀಡ್ ಆದ ಗಂಟೆಗೆ 300 ಕಿಮೀ ತಲುಪಲು ಪ್ರಯತ್ನಿಸುತ್ತಿರುವಾಗ ರೈಡರ್ ನಿಯಂತ್ರಣ ಕಳೆದುಕೊಂಡು ಎಕ್ಸ್‌ಪ್ರೆಸ್‌ವೇನಲ್ಲಿ ಡಿವೈಡರ್‌ಗೆ ಡಿಕ್ಕಿ ಹೊಡೆದಿದ್ದಾರೆ.

YouTuber Agastya Chauhan

ಯೂಟ್ಯೂಬರ್ ಓಡಿಸುತ್ತಿದ ಬೈಕಿನ ಬಗ್ಗೆ ಹೇಳುವುದಾದರೆ, ಇದು ಕವಾಸಕಿ ನಿಂಜಾ ZX 10R ಸ್ಪೋರ್ಟ್ಸ್ ಬೈಕ್ ಆಗಿದೆ. ಇನ್ನು ಕಂಪನಿಯು ಹೆಚ್ಚಿದ ಬೆಲೆಗೆ ಹೊಂದಿಸಲು ಅದರಲ್ಲಿ ಹೊಸ ವೈಶಿಷ್ಟ್ಯಗಳು ಮತ್ತು ಸಲಕರಣೆಗಳನ್ನು ನೀಡುತ್ತಿದೆ. ಹೊಸ 2023 ಕವಾಸಕಿ ನಿಂಜಾ ZX-10R ಕೇವಲ ಒಂದು ರೂಪಾಂತರದಲ್ಲಿ ಮಾತ್ರ ಲಭ್ಯವಿದ್ದು, ಹೊಸ ವೈಶಿಷ್ಟ್ಯಗಳೊಂದಿಗೆ ಸಂಪೂರ್ಣವಾಗಿ ಲೋಡ್ ಆಗಿದೆ.

ಇನ್ನು ಈ ಹೊಸ 2023 ಕವಾಸಕಿ ನಿಂಜಾ ZX-10R ಜಪಾನೀಸ್ ಬ್ರಾಂಡ್‌ನ ಸಿಗ್ನೇಚರ್ ಲೈಮ್ ಗ್ರೀನ್ ಬಣ್ಣದ ಆಯ್ಕೆಯಲ್ಲಿ ಮತ್ತು ಪರ್ಲ್ ರೋಬೋಟಿಕ್ ವೈಟ್‌ನಲ್ಲಿ ಲಭ್ಯವಿದೆ. ಇದಲ್ಲದೆ, ಕಂಪನಿಯು ಈ ಹೊಸ ಮಾದರಿಯ ಮೋಟಾರ್‌ಸೈಕಲ್‌ಗೆ ಹೊಸ ಗ್ರಾಫಿಕ್ಸ್ ಅನ್ನು ಸೇರಿಸಿದ್ದು, ಇದನ್ನು 'ರೇಸ್' ಸ್ಪೆಕ್ ಮಾಡೆಲ್‌ನಂತೆ ಕಾಣುವಂತೆ ಮಾಡಿದೆ. ಹೊರಭಾಗಕ್ಕೆ ಈ ಸಣ್ಣ ಬದಲಾವಣೆಗಳನ್ನು ಹೊರತುಪಡಿಸಿ, ಇದು ಹಿಂದಿನ 2022 ಮಾದರಿಗೆ ಬಹುತೇಕ ಹೋಲುತ್ತದೆ.

YouTuber Agastya Chauhan

ಕವಾಸಕಿ ಎಂಜಿನಿಯರ್‌ಗಳು ಈ ಹೊಸ ಮೋಟಾರ್‌ಸೈಕಲ್‌ಗೆ ಸ್ವಲ್ಪ ಹೆಚ್ಚು ಸ್ಪರ್ಧಾತ್ಮಕ ಮತ್ತು ಸಮಕಾಲೀನವಾಗಿಸಲು ಕೆಲವು ಸೂಕ್ಷ್ಮ ಬದಲಾವಣೆಗಳನ್ನು ಮಾಡಿದ್ದಾರೆ. ಈ ಕವಾಸಕಿ ನಿಂಜಾ ZX-10R ಸೂಪರ್‌ಬೈಕ್ ಅದೇ ಟ್ವಿನ್-ಸ್ಪಾರ್ ಟೈಪ್ ಕಾಸ್ಟ್ ಅಲ್ಯೂಮಿನಿಯಂ ಫ್ರೇಮ್ ಅನ್ನು ಮುಂದುವರೆಸಿದೆ, ದೊಡ್ಡದಾದ 17-ಲೀಟರ್ ಇಂಧನ ಟ್ಯಾಂಕ್ ಮತ್ತು ಸಂಪೂರ್ಣ ಫೇರಿಂಗ್‌ನೊಂದಿಗೆ ಉತ್ತಮ ರೋಡ್‌ ಪ್ರಸೆನ್ಸ್‌ ಅನ್ನು ನೀಡಲಿದೆ.

ಈ ಫೇರಿಂಗ್ ಹಳೆಯ ಮಾದರಿಯಂತೆ ತೋರುತ್ತಿದೆಯಾದರೂ, ಇದು ಮುಂಭಾಗದ ತುದಿಯನ್ನು ಸ್ಥಿರಗೊಳಿಸಲು ಮತ್ತು ಹೆಚ್ಚಿನ ವೇಗದಲ್ಲಿ ಪ್ರಯಾಣಿಸುವಾಗ ಹೆಚ್ಚುವರಿ ಡೌನ್‌ಫೋರ್ಸ್ ಅನ್ನು ಒದಗಿಸಲು ವಿಂಗ್ಲೆಟ್‌ಗಳನ್ನು ಸಂಯೋಜಿಸಿದೆ. ಅಲ್ಲದೆ, ಹೊಸ 2023 ಕವಾಸಕಿ ನಿಂಜಾ ZX-10R ಸೂಪರ್‌ಬೈಕ್ ಈಗ ಹೊಸ 'ರ್ಯಾಮ್ ಇಂಟೇಕ್'ನೊಂದಿಗೆ ಬರುತ್ತದೆ. ಇತರ ವೈಶಿಷ್ಟ್ಯಗಳೆಂದರೆ ಟ್ವಿನ್-ಪಾಡ್ LED ಹೆಡ್‌ಲೈಟ್‌ಗಳು, ನಯವಾದ ಟೈಲ್ ಲ್ಯಾಂಪ್, ಕಡಿಮೆ ಏರ್ ಡ್ರ್ಯಾಗ್‌ಗಾಗಿ ದೊಡ್ಡ ವಿಂಡ್‌ಸ್ಕ್ರೀನ್ ಅನ್ನು ಪಡೆದುಕೊಂಡಿದೆ.

Article Published On: Thursday, May 4, 2023, 18:59 [IST]
English summary
Youtuber agastya chauhan dies on his kawasaki ninja zx 10r superbike details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+