ಯೂಟ್ಯೂಬ್ ಹಣದಿಂದ ದುಬಾರಿ ಬೆಲೆಯ ಬೈಕ್ ಖರೀದಿಸಿದ ಯೂಟ್ಯೂಬರ್

ಹೋಂಡಾ ಗೋಲ್ಡ್ ವಿಂಗ್, ಹೋಂಡಾ ಕಂಪನಿಯ ಅತಿದೊಡ್ಡ ಹಾಗೂ ದುಬಾರಿ ಬೈಕುಗಳಲ್ಲಿ ಒಂದಾಗಿದೆ. ಈ ಬೈಕ್ ಭಾರತದಲ್ಲಿ ಕಾಣುವುದು ತುಂಬಾ ಅಪರೂಪ. ಇದಕ್ಕೆ ಮುಖ್ಯ ಕಾರಣ ಈ ಬೈಕಿನ ದುಬಾರಿ ಬೆಲೆ.

ಯೂಟ್ಯೂಬ್ ಹಣದಿಂದ ದುಬಾರಿ ಬೆಲೆಯ ಬೈಕ್ ಖರೀದಿಸಿದ ಯೂಟ್ಯೂಬರ್

ಈ ಬೈಕಿನ ಬೆಲೆ ಭಾರತದಲ್ಲಿರುವ ಹಲವು ಟಾಪ್ ಎಂಡ್ ಕಾರುಗಳಿಗಿಂತ ಹೆಚ್ಚು. ಯುವಕನೊಬ್ಬ ತನ್ನ ಯೂಟ್ಯೂಬ್ ಚಾನೆಲ್ ಮೂಲಕ ಸಂಪಾದಿಸಿದ ಹಣದಿಂದ ಈ ದುಬಾರಿ ಬೆಲೆಯ ಬೈಕ್ ಅನ್ನು ಖರೀದಿಸಿರುವ ಬಗ್ಗೆ ಮಲ್ಲು ಟ್ರಾವೆಲರ್ಸ್ ಪೋಸ್ಟ್ ಮಾಡಿದೆ. ಈ ಮೂಲಕ ಯೂಟ್ಯೂಬರ್ ತನ್ನ ಬಹುಕಾಲದ ಕನಸನ್ನು ನನಸು ಮಾಡಿಕೊಂಡಿದ್ದಾನೆ.

ಯೂಟ್ಯೂಬ್ ಹಣದಿಂದ ದುಬಾರಿ ಬೆಲೆಯ ಬೈಕ್ ಖರೀದಿಸಿದ ಯೂಟ್ಯೂಬರ್

ಯೂಟ್ಯೂಬರ್ ಖರೀದಿಸಿರುವ ಹೋಂಡಾ ಗೋಲ್ಡ್ ವಿಂಗ್ ಬೈಕ್ ಸೆಕೆಂಡ್ ಹ್ಯಾಂಡ್ ಬೈಕ್ ಆಗಿದ್ದು, ಅದನ್ನು ಆತ ಒಡಿಶಾ ನಿವಾಸಿಯೊಬ್ಬರಿಂದ ಖರೀದಿಸಿದ್ದಾನೆ. ಈ ಯೂಟ್ಯೂಬರ್ ಕೇರಳದಲ್ಲಿ ವಾಸಿಸುತ್ತಿದ್ದಾನೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಯೂಟ್ಯೂಬ್ ಹಣದಿಂದ ದುಬಾರಿ ಬೆಲೆಯ ಬೈಕ್ ಖರೀದಿಸಿದ ಯೂಟ್ಯೂಬರ್

ಈ ಬೈಕಿನ ಹೊಸ ಮಾದರಿಯ ಬೆಲೆ ರೂ.28.5 ಲಕ್ಷಗಳಾಗಿದೆ. ಬೈಕಿನಲ್ಲಿರುವ ಅನುಕೂಲತೆ ಹಾಗೂ ಅತ್ಯಾಧುನಿಕ ತಂತ್ರಜ್ಞಾನದ ಕಾರಣಕ್ಕೆ ಈ ಬೈಕಿಗೆ ಇಷ್ಟು ದುಬಾರಿ ಬೆಲೆಯನ್ನು ನಿಗದಿಪಡಿಸಲಾಗಿದೆ.

ಯೂಟ್ಯೂಬ್ ಹಣದಿಂದ ದುಬಾರಿ ಬೆಲೆಯ ಬೈಕ್ ಖರೀದಿಸಿದ ಯೂಟ್ಯೂಬರ್

ಯೂಟ್ಯೂಬರ್ ಖರೀದಿಸಿರುವ ಈ ದುಬಾರಿ ಬೆಲೆಯ ಬೈಕ್ 14,000 ಕಿ.ಮೀಗಳಷ್ಟು ಸಂಚರಿಸಿದೆ. ಈ ಬೈಕ್ ಲಕ್ಷಾಂತರ ಕಿ.ಮೀಗಳವರೆಗೆ ಸಂಚರಿಸುವಷ್ಟು ಸಮರ್ಥವಾಗಿದೆ. ಈ ಬೈಕಿನಲ್ಲಿ ಹೋಂಡಾ ಕಂಪನಿಯು ದೊಡ್ಡ ಗಾತ್ರದ 1,832 ಸಿಸಿ ಲಿಕ್ವಿಡ್-ಕೂಲ್ಡ್, 6-ಸಿಲಿಂಡರ್ ಎಂಜಿನ್ ಅಳವಡಿಸಿದೆ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಯೂಟ್ಯೂಬ್ ಹಣದಿಂದ ದುಬಾರಿ ಬೆಲೆಯ ಬೈಕ್ ಖರೀದಿಸಿದ ಯೂಟ್ಯೂಬರ್

ಈ ಎಂಜಿನ್ 5,500 ಆರ್‌ಪಿಎಂನಲ್ಲಿ 118 ಬಿಹೆಚ್‌ಪಿ ಪವರ್ ಹಾಗೂ 4,000 ಆರ್‌ಪಿಎಂನಲ್ಲಿ 167 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 5 ಸ್ಪೀಡಿನ ಮ್ಯಾನುವಲ್ ಗೇರ್ ಬಾಕ್ಸ್ ಜೋಡಿಸಲಾಗಿದೆ.

ಯೂಟ್ಯೂಬ್ ಹಣದಿಂದ ದುಬಾರಿ ಬೆಲೆಯ ಬೈಕ್ ಖರೀದಿಸಿದ ಯೂಟ್ಯೂಬರ್

ಹೋಂಡಾ ಕಂಪನಿಯು ಈ ಬೈಕಿನಲ್ಲಿ ಹಲವಾರು ಐಷಾರಾಮಿ ಹಾಗೂ ವಿಶೇಷ ಫೀಚರ್ ಗಳನ್ನು ಅಳವಡಿಸಿದೆ. ಈ ಬೈಕಿನಲ್ಲಿರುವ ಸೀಟುಗಳು ದೀರ್ಘಕಾಲದವರೆಗೆ ಪ್ರಯಾಣಿಸಿದರೂ ಆಯಾಸವನ್ನುಂಟು ಮಾಡುವುದಿಲ್ಲ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಯೂಟ್ಯೂಬ್ ಹಣದಿಂದ ದುಬಾರಿ ಬೆಲೆಯ ಬೈಕ್ ಖರೀದಿಸಿದ ಯೂಟ್ಯೂಬರ್

ಈ ಬೈಕಿನ ದೊಡ್ಡ ಗಾತ್ರವನ್ನು ಅದರ ವೇಗಕ್ಕೆ ಹಾಗೂ ಸವಾರರಿಗೆ ಅಡ್ಡಿಯಾಗದ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಈ ಬೈಕಿನಲ್ಲಿ ಗಾಳಿಗೆ ಪ್ರತಿಕ್ರಿಯಿಸುವ ಶಾರ್ಪ್ ಇಮೇಜ್ ಸಿಸ್ಟಂ ಅನ್ನು ಅಳವಡಿಸಲಾಗಿದೆ.

ಯೂಟ್ಯೂಬ್ ಹಣದಿಂದ ದುಬಾರಿ ಬೆಲೆಯ ಬೈಕ್ ಖರೀದಿಸಿದ ಯೂಟ್ಯೂಬರ್

ಈ ಬೈಕಿನಲ್ಲಿ ದೊಡ್ಡ ಗಾತ್ರದ ಇನ್ಫೋಟೇನ್‌ಮೆಂಟ್ ಸಿಸ್ಟಂ, ವಾಟರ್ ಪ್ರೂಫ್ ಸ್ಪೀಕರ್‌, ಏರ್‌ಬ್ಯಾಗ್‌, ಎಲೆಕ್ಟ್ರಿಕ್ ರಿವರ್ಸ್ ಸಿಸ್ಟಂ, ಕ್ರೂಸ್ ಕಂಟ್ರೋಲ್ ಸೇರಿದಂತೆ ಕಾರಿನಲ್ಲಿರುವಂತಹ ಹಲವಾರು ಫೀಚರ್ ಗಳನ್ನು ನೀಡಲಾಗಿದೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಯೂಟ್ಯೂಬ್ ಹಣದಿಂದ ದುಬಾರಿ ಬೆಲೆಯ ಬೈಕ್ ಖರೀದಿಸಿದ ಯೂಟ್ಯೂಬರ್

ಈ ಬೈಕ್ ಅನ್ನು ಭಾರತದಲ್ಲಿ ಏರ್‌ಬ್ಯಾಗ್ ಹಾಗೂ ನಾನ್-ಏರ್‌ಬ್ಯಾಗ್ ಮಾದರಿಗಳೊಂದಿಗೆ ಮಾರಾಟ ಮಾಡಲಾಗುತ್ತದೆ. ಈ ಬೈಕಿನ ಬೆಲೆ ಎಕ್ಸ್ ಶೋರೂಂ ದರದಂತೆ ರೂ.28.5 ಲಕ್ಷದಿಂದ ರೂ.31.5 ಲಕ್ಷಗಳಾಗಿದೆ.

Most Read Articles

Kannada
English summary
Youtuber buys Honda Goldwing bike from Youtube money. Read in Kannada.
Story first published: Thursday, November 5, 2020, 14:02 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X