ಯೂಟ್ಯೂಬ್ ವಿಡಿಯೋ ಮಾಡಿ ಕೋಟಿಗಟ್ಟಲೆ ಗಳಿಸಬಹುದು: ಬಹುಕೋಟಿಯ ಕಾರು ಖರೀದಿಸಿದ ಬ್ಲಾಗರ್
ದೇಶದಲ್ಲಿ ಅನೇಕರಿಗೆ ಯೂಟ್ಯೂಬ್ ಚಾನೆಲ್ ಉದ್ಯೋಗವಾಗಿದೆ. ಕೆಲವರ ಜೀವನವನ್ನೇ ಬದಲಾಯಿಸಿದೆ. ಇದೇ ಯೂಟ್ಯೂಬ್ ಚಾನೆಲ್‌ಗಳಿಂದ ಜನಪ್ರಿಯ ಯೂಟ್ಯೂಬರ್‌ಗಳಾಗಿ ಕೋಟ್ಯಧಿಪತಿಗಳಾಗಿದ್ದಾರೆ. ಪ್ರೇಕ್ಷಕರಲ್ಲಿ ವಿಶೇಷವಾಗಿ ಯುವಜನರಲ್ಲಿ ಯೂಟ್ಯೂಬರ್‌ಗಳು ಮತ್ತು ಇತರೆ ಕಂಟೆಂಟ್ ಕ್ರಿಯೆಟರ್ಗಳ ಮೇಲೆ ಹೆಚ್ಚಿನ ಆಸಕ್ತಿಯಿದೆ. ಸಾಮಾನ್ಯ ಸೆಲೆಬ್ರಿಟಿಗಳಿಗಿಂತ ಯೂಟ್ಯೂಬರ್‌ಗಳು ವಿಭಿನ್ನವಾಗಿ ತಮ್ಮ ವೀಕ್ಷಕರೊಂದಿಗೆ ಅನನ್ಯವಾದ ಸಂಪರ್ಕವನ್ನು ಹೊಂದಿರುತ್ತಾರೆ.
ವೈಯಕ್ತಿಕ ಅನುಭವಗಳು ಅಥವಾ ಮನರಂಜನೆ ಸೇರಿದಂತೆ ವೀಕ್ಷಕರಿಗೆ ವಿಭಿನ್ನ ವಿಷಯಗಳನ್ನು ತಿಳಿಸುವ ಕ್ರಿಯೆಟರ್ಗಳು ಇಂದು ಸೋಷಿಯಲ್ ಮೀಡಿಯಾ ಪ್ರಭಾವಶಾಲಿ ವ್ಯಕ್ತಿಗಳಾಗಿ ಮಾರ್ಪಟ್ಟಿದ್ದಾರೆ. ಇದೇ ರೀತಿ ಜನಪ್ರಿಯ ವಿಕಾಸ್ ದಯಾಳ್ ಅವರು ಎಕ್ಸ್‌ಪ್ಲೋರ್ ದಿ ಅನ್‌ಸೀನ್ 2.0 ತಮ್ಮ ಯೂಟ್ಯೂಬ್ ಚಾನೆಲ್ ಮೂಲಕ ಜನಪ್ರಿಯ ಯೂಟ್ಯೂಬರ್ ಆಗಿದ್ದಾರೆ. ಈ ಯೂಟ್ಯೂಬರ್ ಐಷಾರಾಮಿ ಟೊಯೋಟಾ ಲ್ಯಾಂಡ್ ಕ್ರೂಸರ್ LC300 (Toyota LandCruiser LC300) ಎಸ್‍ಯುವಿಯನ್ನು ಖರೀದಿಸಿದ್ದಾರೆ.

ಟೊಯೊಟಾ ಲ್ಯಾಂಡ್ ಕ್ರೂಸರ್ ಜಾಗತಿಕವಾಗಿ ಹೆಚ್ಚು ಬೇಡಿಕೆಯಿರುವ ಎಸ್‌ಯುವಿಗಳಲ್ಲಿ ಒಂದಾಗಿದೆ. ಈ ಎಸ್‍ಯುವಿಗೆ ಭಾರತದಲ್ಲಿ ಎಕ್ಸ್ ಶೋರೂಂ ಬೆಲೆಯು ರೂ. 2.10 ಕೋಟಿಯಾಗಿದೆ. ಈ ಎಸ್‍ಯುವಿಯು ಎಷ್ಟು ಜನಪ್ರಿಯವಾಗಿದೆ ಎಂದರೆ ಅದು ಸುಮಾರು 2 ವರ್ಷಗಳ ಕಾಯುವ ಅವಧಿಯನ್ನು ಹೊಂದಿದೆ. ಅನೇಕ ಶ್ರೀಮಂತ ಉದ್ಯಮಿಗಳು ಮತ್ತು ರಾಜಕಾರಣಿಗಳು ಈ ಎಸ್‍ಯುವಿಯನ್ನು ಖರೀದಿಸಿದ್ದಾರೆ.
ಯೂಟ್ಯೂಬರ್ ಶೇರ್ ಮಾಡಿದ ವೀಡಿಯೊದಲ್ಲಿ, ಯೂಟ್ಯೂಬರ್‌ನ ಪ್ರಯಾಣವು ಹೇಗೆ ಪ್ರಾರಂಭವಾಯಿತು ಮತ್ತು ಈ ಸಾಧನೆಯ ಹಿಂದಿನ ಅವರ ಶ್ರಮವನ್ನು ತೋರಿಸಿದ್ದಾರೆ. ಕುಟುಂಬ ಸದಸ್ಯರು ಮತ್ತು ಸ್ನೇಹಿತರ ಜೊತೆ ತೆರಳಿ ತಮ್ಮ ಕನಸಿನ ಕಾರನ್ನು ವಿತರಣೆ ಪಡೆದುಕೊಂಡಿದ್ದಾರೆ. ಯೂಟ್ಯೂಬರ್ ಅವರು ಇಲ್ಲಿಯವರೆಗೆ ಖರೀದಿಸಿದ 11 ನೇ ಕಾರು ಎಂದು ವೀಡಿಯೊದಲ್ಲಿ ಹೇಳಿಕೊಂಡಿದ್ದಾರೆ.

ಯೂಟ್ಯೂಬರ್ ವಿಕಾಸ್ ದಯಾಳ್ ಖರೀದಿಸಿದ, ಈ ಟೊಯೊಟಾ ಲ್ಯಾಂಡ್ ಕ್ರೂಸರ್ ಎಲ್‌ಸಿ300 ಎಸ್‍ಯುವಿಯು ಮಾಡ್ಯುಲರ್ TNGA-F ಆರ್ಕಿಟೆಕ್ಚರ್‌ನಿಂದ ಆಧಾರವಾಗಿದೆ ಮತ್ತು ಅದರ ಒಟ್ಟಾರೆ ಕರ್ಬ್ ತೂಕವು ಸುಮಾರು 200 ಕಿಲೋಗ್ರಾಂಗಳಷ್ಟು ಕಡಿಮೆಯಾಗಿದೆ. ಹಳೆಯ ಮಾದರಿಗೆ ಹೋಲಿಸಿದರೆ, ಲ್ಯಾಂಡ್ ಕ್ರೂಸರ್ 300 ವಿನ್ಯಾಸಕ್ಕೆ ವಿಕಸನೀಯ ಪರಿಷ್ಕರಣೆಯೊಂದಿಗೆ ಬಂದಿದೆ.
ಈ ಲ್ಯಾಂಡ್ ಕ್ರೂಸರ್ ಎಸ್‍ಯುವಿಯು ನೇರವಾದ ಬಾಡಿ ಪ್ಯಾನೆಲ್‌ಗಳು ಮತ್ತು ಎತ್ತರದ ಕಂಬಗಳನ್ನು ಸ್ಕ್ವೇರ್-ಆಫ್ ವೀಲ್ ಆರ್ಚ್‌ಗಳು ಮತ್ತು ಹೊಸದಾಗಿ ವಿನ್ಯಾಸಗೊಳಿಸಲಾದ 20-ಇಂಚಿನ ಅಲಾಯ್ ವ್ಹೀಲ್ ಗಳನ್ನು ಉಳಿಸಿಕೊಂಡಿದೆ. ಈ ಎಸ್‍ಯುವಿಯ ಕ್ಯಾಬಿನ್ ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಹೊಂದಾಣಿಕೆ ಮತ್ತು ಸಂಪರ್ಕಿತ ವೈಶಿಷ್ಟ್ಯಗಳೊಂದಿಗೆ 12.3-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಅನ್ನು ಪಡೆಯುತ್ತದೆ.

ಹೆಚ್ಚು ಜನಪ್ರಿಯವಾಗಿರುವ ಆಫ್-ರೋಡರ್‌ನ ಸಲಕರಣೆಗಳ ಪಟ್ಟಿಯು ಎಲ್ಲಾ-ಡಿಜಿಟಲ್ ಇನ್ಸ್ ಟ್ರೂಮೆಂಟ್ ಕನ್ಸೋಲ್ ಮತ್ತು ಹಲವಾರು ಸೌಕರ್ಯ, ಅನುಕೂಲತೆ, ಮನರಂಜನೆ, ಸಹಾಯಕ ಮತ್ತು ಸುರಕ್ಷತೆ ಆಧಾರಿತ ವೈಶಿಷ್ಟ್ಯಗಳನ್ನು ಒಳಗೊಂಡಿರುತ್ತದೆ. ಇನ್ನು ಬಹಿರಂಗವಾದ ಮಾಹಿತಿಗಳ ಪ್ರಕಾರ, ಮೂರು ಇಂಟಿರಿಯರ್ ಬಣ್ಣದ ಥೀಮ್‌ಗಳನ್ನು ಒಳಗೊಂಡಿದೆ.
ಇನ್ನು ಐದು ಬಾಹ್ಯ ಬಣ್ಣಗಳನ್ನು ಹೊಂದಿದ್ದುಮ್ ಇದು ಪ್ರೆಶಿಯಸ್ ವೈಟ್ ಪರ್ಲ್, ಸೂಪರ್ ವೈಟ್, ಡಾರ್ಕ್ ರೆಡ್ ಮೈಕಾ ಮೆಟಾಲಿಕ್, ಆಟಿಟ್ಯೂಡ್ ಬ್ಲ್ಯಾಕ್ ಮತ್ತು ಡಾರ್ಕ್ ಬ್ಲೂ ಮೈಕಾ ಎಂಬ ಬಣ್ಣಗಳಾಗಿವೆ. ನ್ಯೂ ಜನರೇಷನ್ ಟೊಯೊಟಾ ಲ್ಯಾಂಡ್ ಕ್ರೂಸರ್ 300 ಎಸ್‍ಯುವಿಯು ಎರಡು ಎಂಜಿನ್ ಆಯ್ಕೆಗಳನ್ನು ಹೊಂದಿದೆ. ಇದು 3.5 ಎಲ್ ವಿ6 ಟ್ವಿನ್-ಟರ್ಬೊ ಪೆಟ್ರೋಲ್ ಮತ್ತು 3.3 ಎಲ್ ವಿ6 ಟ್ವಿನ್-ಟರ್ಬೊ ಡೀಸೆಲ್ ಎಂಜಿನ್ ಆಯ್ಕೆಗಳಾಗಿವೆ.
ಇದರಲ್ಲಿ 3.3 ಎಲ್ ವಿ6 ಟರ್ಬೊ-ಡೀಸೆಲ್ ಎಂಜಿನ್ ಟ್ವಿನ್-ಟರ್ಬೊ ಡೀಸೆಲ್ ಎಂಜಿನ್ 304 ಬಿಹೆಚ್‍ಪಿ ಪವರ್ ಮತ್ತು 700 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 10-ಸ್ಪೀಡ್ ಟ್ರಾನ್ಸ್‌ಮಿಷನ್ ಜೊತೆಗೆ ಜೋಡಿಸಲಾಗಿದೆ. ಇನ್ನು 3.5-ಲೀಟರ್ ವಿ6 ಟ್ವಿನ್-ಟರ್ಬೊ ಎಂಜಿನ್ ಅನ್ನು 409 ಬಿಹೆಚ್‍ಪಿ ಪವರ್ ಮತ್ತು 650 ಎನ್ಎಂ ಟಾರ್ಕ್ ಉತ್ಪಾದಿಸತ್ತದೆ.


Click it and Unblock the Notifications