20 ವರ್ಷ ಜೀವನ ಕಳ್ಕೊಂಡ ಯೂಟ್ಯೂಬರ್... ಸುಳ್ಳು ಹೇಳಿದ್ರೂ ತನ್ನ ವಿಡಿಯೋದಿಂದ್ಲೆ ಸಿಕ್ಕಿಬಿದ್ದ

ಸೋಷಿಯಲ್ ಮೀಡಿಯಾ ಎಂಬುದು ದೊಡ್ಡ ಭೂತವಾಗಿಬಿಟ್ಟಿದೆ. ಯ್ಯೂಟ್ಯೂಬರ್‌ಗಳು ಫೆಮಸ್ ಆಗಲು ಮಾಡುವ ಒಂದು ಕೆಲಸವು ಅವರಿಗೆ ಹಣದ ಜೊತೆಗೆ ಕೆಟ್ಟ ಹೆಸರನ್ನು ಕೂಡ ತಂದುಕೊಡುತ್ತದೆ. ಕೆಲವೊಮ್ಮೆ ಅವರ ಜೀವನಕ್ಕೆ ಕುತ್ತಾಗಿಯು ಪರಿಣಮಿಸಬಹುದು ಎಂಬುದಕ್ಕೆ ಈತನ ಕಥೆಯೇ ಉದಾಹರಣೆಯಾಗಿದೆ.

ಭಾರತದಲ್ಲಿ ಯ್ಯೂಟಬರ್‌ಗಳು ಫಾಲೋವರ್ಸ್ ಹಾಗೂ ಹಣ ಗಳಿಸಲು ಮಾಡುವ ಕೆಲವು ಹುಚ್ಚಾಟಗಳನ್ನು ನಾವು ನೋಡಿದ್ದೇವೆ. ಹೊಸ ಕಾರುಗಳನ್ನು ಛಿದ್ರಗೊಳಿಸುವುದು, ಬಾಂಬ್ ಇಟ್ಟು ಸ್ಪೋಟಗೊಳಿಸುವಂತಹ ವಿಡಿಯೋಗಳನ್ನು ನಾವು ನೋಡಿ ಬೇಸರಗೊಂಡಿರುವ ಉದಾಹರಣೆಗಳು ಇವೆ. ಆದರೆ ಇದೀಗ ನಾವು ಹೇಳಲು ಹೊರಟಿರುವ ಯ್ಯೂಟ್ಯೂಬರ್ ವಿಮಾನವನ್ನೇ ಧ್ವಂಸಗೊಳಿಸಿ ತನ್ನ ಜೀವನವನ್ನೇ ಹಾಳು ಮಾಡಿಕೊಂಡಿದ್ದಾನೆ.

Yutuber Crashes Plane

ತನ್ನ ವಿಡಿಯೋದಲ್ಲಿ ಹೆಚ್ಚಿನ ವೀಕ್ಷಣೆಗಳನ್ನು ಪಡೆಯುವ ಪ್ರಯತ್ನದಲ್ಲಿ ಯೂಟ್ಯೂಬರ್ ಉದ್ದೇಶಪೂರ್ವಕವಾಗಿ ತನ್ನ ಸಿಂಗಲ್ ಎಂಜಿನ್ ವಿಮಾನವನ್ನು ಅಪಘಾತಕ್ಕೆ ಗುರಿಪಡಿಸಿದ್ದಾನೆ. 2021 ರಲ್ಲಿ ಕ್ಯಾಲಿಫೋರ್ನಿಯಾದ ಲಾಸ್ ಪ್ಯಾಡ್ರೆಸ್ ರಾಷ್ಟ್ರೀಯ ಅರಣ್ಯದಲ್ಲಿ ಅಪಘಾತಕ್ಕೀಡಾದ ತನ್ನ ವಿಮಾನದ ಅವಶೇಷಗಳನ್ನು ಉದ್ದೇಶಪೂರ್ವಕವಾಗಿ ನಾಶಪಡಿಸಿದ್ದಾನೆ. ಈ ಸಂಬಂಧ ಅಲ್ಲಿನ ನ್ಯಾಯಾಲಯವು 20 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ ಎಂದು ವರದಿಯಾಗಿದೆ.

29 ವರ್ಷದ ಯೂಟ್ಯೂಬರ್ ಆಗಿರುವ ಟ್ರೆವರ್ ಜಾಕೋಬ್ ಈ ಕೃತ್ಯದಿಂದ ಸದ್ಯ ಪಶ್ಚ್ಯತ್ತಾಪ ಪಡುತ್ತಿದ್ದಾನೆ. ಈ ಕೃತ್ಯವನ್ನು ಪಕ್ಕಾ ಪ್ಲಾನ್‌ನೊಂದಿಗೆ ಮಾಡಿದ್ದಾನ್ನಾದರೂ ಬೇಕಂತ ಮಾಡಿಲ್ಲ ಎಂದು ನ್ಯಾಯಾಲಯದಲ್ಲಿ ಬೇರೆಯೇ ಕಥೆಯನ್ನು ಹೇಳಿದ್ದಾನೆ. ಆದ್ರೆ ಆತ ಅಪ್‌ಲೋಡ್ ಮಾಡಿರುವ ವಿಡಿಯೋವೇ ಆತನಿಗೆ ಸದ್ಯ ಕುತ್ತಾಗಿ ಪರಿಣಮಿಸಿ ಆತನನ್ನು ಜೈಲು ಸೇರುವಂತೆ ಮಾಡಿದೆ.

Yutuber Crashes Plane

ಯೂಟ್ಯೂಬರ್ ತನ್ನ ವಿಮಾನವನ್ನು ಗಾಳಿಗೆ ಬಿಟ್ಟು ಮುಂಚಿತವಾಗಿಯೇ ಪ್ಯಾರಾಚೂಟ್‌ನೊಂದಿಗೆ ಹಾರಿದ್ದ. ಅದನ್ನೇ ತನ್ನ ವಿಡಿಯೋದಲ್ಲಿ ರೆಕಾರ್ಡ್ ಮಾಡಿ ಹರಿಬಿಟ್ಟಿದ್ದಾನೆ. ತನಿಖೆ ನಡೆಸುತ್ತಿರುವಾಗ, ವಿಮಾನವು ಪವರ್ ಕಳೆದುಕೊಂಡು ಅಪಘಾತವಾಗಿದೆ ಎಂದು ಜಾಕೋಬ್ ಹೇಳಿಕೊಂಡಿದ್ದಾನೆ. ಅಲ್ಲದೇ ಅಪಘಾತದ ಬಳಿಕ ವಿಮಾನದ ಅವಶೇಷಗಳ ಜಾಗಕ್ಕೆ ತೆರಳಿ ಅವನ್ನು ನಾಶಪಡಿಸಿದ್ದ. ಆದ್ರೆ ಈ ಬಗ್ಗೆ ನನಗೆ ಗೊತ್ತೇ ಇಲ್ಲವೆಂದು ತನಿಖೆಯಲ್ಲಿ ಹೇಳಿದ್ದಾನೆ.

ವಾಯುಯಾನ ತಜ್ಞರು ಮತ್ತು ಅಧಿಕಾರಿಗಳು ಈ ವಿಷಯವನ್ನು ತನಿಖೆ ಮಾಡುವಾಗ, ಎಂಜಿನ್ ಪವರ್ ಕಳೆದುಕೊಂಡಾಗ ಎಟಿಸಿಗೆ ಯಾವುದೇ ಕರೆಗಳನ್ನು ಮಾಡಿಲ್ಲ. ಒಂದು ವೇಳೆ ಹಾಗೆ ಮಾಡಿದರೆ ತಾನು ಇಳಿಯಲು ಟ್ರಾಫಿಕ್ ಕಂಟ್ರೋಲರ್‌ ಸುರಕ್ಷಿತ ಪ್ರದೇಶವನ್ನು ಹೇಳುತ್ತಿದ್ದರು. ಇವೆಲ್ಲವನ್ನು ನೋಡಿದರೆ ಪಕ್ಕಾ ಪ್ಲಾನ್ ಮಾಡಿರುವುದು ಅಧಿಕಾರಿಗಳಿಗೆ ಗೊತ್ತಾಗಿದೆಯಾದ್ರೂ ಪ್ರೂಫ್ ಆಗಿದ್ದು ಮಾತ್ರ ತನ್ನ ಯ್ಯೂಟ್ಯೂಬ್ ವಿಡಿಯೋ.

ತಾನು ಅಪ್‌ಲೋಡ್‌ ಮಾಡಿರುವ ವಿಡಿಯೋದಲ್ಲಿ ಜಾಕೋಬ್ ತನ್ನನ್ನು ಅನುಭವಿ ಪೈಲಟ್ ಮತ್ತು ಸಹಜವಾಗಿ, ಸ್ಕೈಡೈವರ್ ಎಂದು ಹೇಳಿಕೊಂಡಿದ್ದಾನೆ. ಟೇಕ್-ಆಫ್‌ಗೆ ಮುಂಚೆಯೇ ಪ್ಯಾರಾಚೂಟ್‌ನೊಂದಿಗೆ ಸ್ವತಃ ಸಿದ್ಧಪಡಿಸಿಕೊಂಡು ವಿಮಾನವನ್ನು ಕ್ಯಾಮೆರಾಗಳೊಂದಿಗೆ ಸಜ್ಜುಗೊಳಿಸಿದ್ದ. ನಂತರ ವಿಮಾನವನ್ನು ಗಾಳಿಗೆ ಬಿಟ್ಟು ಹಾರಿ, ವಿಮಾನ ಪತನಗೊಳ್ಳುವವರೆಗೂ ಅದನ್ನು ವೀಕ್ಷಿಸಿಸಿರುವುದು ಅಪ್‌ಲೋಡ್ ಮಾಡಿದ್ದ ವಿಡಿಯೋದಲ್ಲಿ ಕಂಡುಬಂದಿದೆ.

ಅಪಘಾತ ಸ್ಥಳಕ್ಕೆ ತೆರಳಿದ್ದ: ದೃಶ್ಯಗಳಿಗಾಗಿ ತಮ್ಮ ಕ್ಯಾಮರಾಗಳನ್ನು ಮರಳಿ ಪಡೆಯಲು ಅಪಘಾತದ ಸ್ಥಳಕ್ಕೆ ಜಾಕೋಬ್ ಭೇಟಿ ನೀಡಿದ್ದ. ಅಲ್ಲಿ ವಿಮಾನವನ್ನು ಡಿಸ್ಅಸೆಂಬಲ್ ಮಾಡಿ ಬಿಡಿ ಭಾಗಗಳನ್ನು ಸಾಂತಾ ಬಾರ್ಬರಾ ಕೌಂಟಿಯ ಹ್ಯಾಂಗರ್‌ಗೆ ಕೊಂಡೊಯ್ದಿದ್ದ. ಎರಡು ದಿನಗಳ ನಂತರವೇ ಜಾಕೋಬ್ ಅಪಘಾತದ ಬಗ್ಗೆ NTSB ಗೆ ಮಾಹಿತಿ ನೀಡಿದ್ದ. ಆದ್ರೆ ಅಪಘಾತ ಸ್ಥಳದ ಬಗ್ಗೆ ತನಗೆ ತಿಳಿದಿರಲಿಲ್ಲ ಎಂದು ಹೇಳಿದ್ದ.

ಎಲ್ಲವೂ ಪ್ಲಾನ್ ಪ್ರಕಾರ ನಡೆದಿದ್ದು, ಕೊನೆಗೆ ಯೂಟ್ಯೂಬ್‌ನಲ್ಲಿ 'ಐ ಕ್ರ್ಯಾಶ್ಡ್ ಮೈ ಪ್ಲೇನ್' ಎಂಬ ಶೀರ್ಷಿಕೆಯೊಂದಿಗೆ ವೀಡಿಯೊವನ್ನು ಅಪ್‌ಲೋಡ್ ಮಾಡಿದ್ದಾನೆ. ಇದು ತನಿಖಾಧಿಕಾರಿಗಳು ಜಾಕೋಬ್‌ನ ಸುಳ್ಳನ್ನು ಬಹಿರಂಗಪಡಿಸಲು ಕಾರಣವಾಗಿದೆ. ಒಟ್ಟಾರೆ ಫಾಲೋವರ್ಸ್‌ಗಾಗಿ ಮಾಡಿದ ಈ ಕೃತ್ಯ ಸದ್ಯ ಆತನನ್ನು ಜೈಲಿಗಟ್ಟಿದೆ. ಬರೋಬ್ಬರಿ 20 ವರ್ಷ ತನ್ನ ಯವ್ವನವನ್ನು ಜೈಲಿನಲ್ಲಿ ಕಳೆಯುವಂತಾಗಿದೆ.

Article Published On: Monday, May 15, 2023, 13:52 [IST]
English summary
Youtuber crashed plane viral video
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+