ಅಪಾಯಕಾರಿ ಸ್ಟಂಟ್ ಮಾಡಿದ ಕಾರಣಕ್ಕೆ ದಂಡ ತೆತ್ತ ಯೂಟ್ಯೂಬರ್

ಇತ್ತೀಚೆಗೆ ಯೂಟ್ಯೂಬ್‌ನಲ್ಲಿ ವೀಡಿಯೊವೊಂದು ವೈರಲ್ ಆಗಿದೆ. ಈ ವೀಡಿಯೊದಲ್ಲಿ ಯುವಕನೊಬ್ಬ ಅತಿ ವೇಗದಲ್ಲಿ ಕಾರಿನಲ್ಲಿ ಸುತ್ತಾಡುತ್ತಿರುವುದನ್ನು ತೋರಿಸಲಾಗಿದೆ. ಡ್ರೋನ್ ಹಾಗೂ ಇತರ ವೀಡಿಯೊ ಕ್ಯಾಮೆರಾಗಳನ್ನು ಯುವಕನ ಈ ಸಾಹಸವನ್ನು ಚಿತ್ರೀಕರಣ ಮಾಡಲಾಗಿದೆ. ಸಿನಿಮಾದ ಸ್ಟಂಟ್ ಮಾದರಿಯಲ್ಲಿ ಈ ದೃಶ್ಯವನ್ನು ಯುಟ್ಯೂಬ್‌ನಲ್ಲಿ ಹೆಚ್ಚು ವೀಕ್ಷಕರನ್ನು ಆಕರ್ಷಿಸಿ ಹಣ ಗಳಿಸುವ ಸಲುವಾಗಿಯೇ ಚಿತ್ರೀಕರಿಸಲಾಗಿದೆ.

ಅಪಾಯಕಾರಿ ಸ್ಟಂಟ್ ಮಾಡಿದ ಕಾರಣಕ್ಕೆ ದಂಡ ತೆತ್ತ ಯೂಟ್ಯೂಬರ್

ಈ ರೀತಿಯ ಸಾಹಸ ಮಾಡುವುದು ನಿಜಕ್ಕೂ ಅಪಾಯಕಾರಿ. ಅಪಾಯಕಾರಿ ಸಾಹಸಗಳನ್ನು ಮಾಡಿದ ಯುವಕನ ವಿರುದ್ಧ ಕೇರಳ ಸಾರಿಗೆ ಇಲಾಖೆ ಅಧಿಕಾರಿಗಳು ಹಾಗೂ ಮೋಟಾರು ವಾಹನ ಇಲಾಖೆ ಅಧಿಕಾರಿಗಳು ಈ ಯುವಕನ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದಾರೆ. ಈ ರೀತಿ ಸಾರ್ವಜನಿಕವಾಗಿ ವಾಹನಗಳಲ್ಲಿ ಸ್ಟಂಟ್ ಮಾಡುವುದು ಕಾನೂನು ಬಾಹಿರ.

ಅಪಾಯಕಾರಿ ಸ್ಟಂಟ್ ಮಾಡಿದ ಕಾರಣಕ್ಕೆ ದಂಡ ತೆತ್ತ ಯೂಟ್ಯೂಬರ್

ಈ ಘಟನೆಯು ಕೇರಳದ ಮಲಂಪುಳ ಅಣೆಕಟ್ಟು ಪ್ರದೇಶದಲ್ಲಿ ನಡೆದಿದೆ ಎಂದು ವರದಿಯಾಗಿದೆ. ವ್ಲೋಗರ್ ಒಬ್ಬ ತನ್ನ Mahindra Thar ಎಸ್‌ಯು‌ವಿ ಮೂಲಕ ಈ ರೀತಿ ಸ್ಟಂಟ್ ಮಾಡಿದ್ದಾನೆ. ಈ ವೀಡಿಯೊದಲ್ಲಿ ಕೆಲವು ವ್ಲಾಗರ್‌ಗಳು Mahindra Thar ಎಸ್‌ಯು‌ವಿಯ ಆಫ್ ರೋಡ್ ಸಾಮರ್ಥ್ಯವನ್ನು ಪ್ರದರ್ಶಿಸಲು ಪ್ರಯತ್ನಿಸುತ್ತಿದ್ದಾರೆ.

ಅಪಾಯಕಾರಿ ಸ್ಟಂಟ್ ಮಾಡಿದ ಕಾರಣಕ್ಕೆ ದಂಡ ತೆತ್ತ ಯೂಟ್ಯೂಬರ್

ಆದರೆ ಈ ರೀತಿ ಉದ್ದೇಶಪೂರ್ವಕವಾಗಿ ಮಾಡಿರುವುದು ಸ್ಪಷ್ಟವಾಗಿದೆ. Mahindra Thar ಎಸ್‌ಯು‌ವಿಯನ್ನು ಚಾಲನೆ ಮಾಡುತ್ತಿದ್ದ ವ್ಯಕ್ತಿಯು ಟರ್ನ್ ಮಾಡುವಾಗ ಎಸ್‌ಯು‌ವಿಯು ಉರುಳಿದೆ. ನಂತರ ಇನ್ನೊಂದು ವಾಹನದಲ್ಲಿ ಅಪಾಯಕಾರಿಯಾಗಿ ಉರುಳಿರುವ Thar ಎಸ್‌ಯು‌ವಿಯನ್ನು ಚಿತ್ರೀಕರಿಸಲಾಗಿದೆ.

ಅಪಾಯಕಾರಿ ಸ್ಟಂಟ್ ಮಾಡಿದ ಕಾರಣಕ್ಕೆ ದಂಡ ತೆತ್ತ ಯೂಟ್ಯೂಬರ್

ಈ ವೀಡಿಯೊವನ್ನು ಚಿತ್ರೀಕರಿಸಿ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ ಲೋಡ್ ಮಾಡಲಾಗಿದೆ. ಈ ಘಟನೆಯ ಬಗ್ಗೆ ನಡೆದ ತನಿಖೆಯಲ್ಲಿ ವೀಡಿಯೊವನ್ನು ಚಿತ್ರೀಕರಿಸುವ ಸಲುವಾಗಿ ವ್ಲಾಗರ್‌ಗಳು Mahindra Thar ಎಸ್‌ಯು‌ವಿಯನ್ನು ಅತಿ ವೇಗದಲ್ಲಿ ಚಾಲನೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಅಪಾಯಕಾರಿ ಸ್ಟಂಟ್ ಮಾಡಿದ ಕಾರಣಕ್ಕೆ ದಂಡ ತೆತ್ತ ಯೂಟ್ಯೂಬರ್

ಇದರ ಜೊತೆಯಲ್ಲಿ ವೀಡಿಯೋ ರೆಕಾರ್ಡ್ ಮಾಡಲಾದ ಅಣೆಕಟ್ಟು ಪ್ರದೇಶದಲ್ಲಿ ಸಾರ್ವಜನಿಕರಿಗೆ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಕೇರಳ ಪೊಲೀಸ್, ಕೇರಳ ಆರ್‌ಟಿಒ ಹಾಗೂ ಜಲ ಸಂಪನ್ಮೂಲ ಇಲಾಖೆಗಳು ಈ ಘಟನೆಯ ಬಗ್ಗೆ ತನಿಖೆ ನಡೆಸುತ್ತಿವೆ. ಆರ್‌ಟಿ‌ಒ ಅಧಿಕಾರಿಗಳು ಯೂಟ್ಯೂಬರ್ ನನ್ನು ಪತ್ತೆ ಹಚ್ಚಿ ಅಪಾಯಕಾರಿಯಾಗಿ ವಾಹನ ಚಾಲನೆ ಮಾಡಿದ್ದಕ್ಕಾಗಿ ಹಾಗೂ ವಾಹನವನ್ನು ಮಾಡಿಫೈಗೊಳಿಸಿರುವುದಕ್ಕಾಗಿ ರೂ. 10,500 ದಂಡ ವಿಧಿಸಿದ್ದಾರೆ.

ಅಪಾಯಕಾರಿ ಸ್ಟಂಟ್ ಮಾಡಿದ ಕಾರಣಕ್ಕೆ ದಂಡ ತೆತ್ತ ಯೂಟ್ಯೂಬರ್

ಈ ವ್ಲಾಗರ್ ಗಳು ಮೋಟಾರು ವಾಹನ ಕಾಯ್ದೆಯ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ತಿಳಿಸಿರುವ ಕೇರಳ ಆರ್‌ಟಿಒ ಅಧಿಕಾರಿಗಳು ಈ ಘಟನೆಯ ಬಗ್ಗೆ ವಿಸ್ತೃತ ತನಿಖೆ ನಡೆಸುತ್ತಿದ್ದಾರೆ. ನಿರ್ಬಂಧಿತ ಪ್ರದೇಶದಲ್ಲಿ ವಾಹನ ಸಾಹಸ ಮಾಡಿದ ಕಾರಣಕ್ಕೆ ಕೇರಳದ ಜಲ ಸಂಪನ್ಮೂಲ ಇಲಾಖೆಯು ಕೇರಳ ಪೊಲೀಸರಿಗೆ ದೂರು ನೀಡಿದೆ.

ಅಪಾಯಕಾರಿ ಸ್ಟಂಟ್ ಮಾಡಿದ ಕಾರಣಕ್ಕೆ ದಂಡ ತೆತ್ತ ಯೂಟ್ಯೂಬರ್

ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಕರನ್ನು ಸೆಳೆಯಲು ಹಾಗೂ ಲೈಕ್ ಗಿಟ್ಟಿಸಲು ಹಲವು ವ್ಲಾಗರ್‌ಗಳು ಹಾಗೂ ಯೂಟ್ಯೂಬರ್ ಗಳು ಸುರಕ್ಷಿತವಾದ ಚಾಲನಾ ನಿಯಮಗಳನ್ನು ನಿರ್ಲಕ್ಷಿಸಿ ಅಪಾಯಕಾರಿಯಾದ ಸಾಹಸಗಳನ್ನು ಕೈಗೊಳ್ಳುತ್ತಿದ್ದಾರೆ. ಈ ಹಿಂದೆಯೂ ಸಾರ್ವಜನಿಕ ರಸ್ತೆಗಳಲ್ಲಿ ಸಾಕಷ್ಟು ಜನರು ಅಪಾಯಕಾರಿ ಸಾಹಸಗಳನ್ನು ಮಾಡುವುದನ್ನು ನೋಡಿದ್ದೇವೆ.

ಅಪಾಯಕಾರಿ ಸ್ಟಂಟ್ ಮಾಡಿದ ಕಾರಣಕ್ಕೆ ದಂಡ ತೆತ್ತ ಯೂಟ್ಯೂಬರ್

ಈ ಘಟನೆಯು ಸಾರ್ವಜನಿಕವಲ್ಲದ ಸ್ಥಳದಲ್ಲಿ ಮಾಡಲಾಗಿದ್ದರೂ ಈ ಪ್ರದೇಶವನ್ನು ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧಿಸಲಾಗಿತ್ತು ಎಂಬುದು ಗಮನಾರ್ಹ. ಈ ರೀತಿಯ ಸಾಹಸಗಳು ಜನರ ಜೀವಕ್ಕೆ ಕುತ್ತು ತರಬಲ್ಲವು. ಮಾನವ ಜೀವನಕ್ಕಿಂತ ಮೌಲ್ಯಯುತವಾದ ಯಾವುದೇ ಸ್ಟಂಟ್ ಅಥವಾ ವೀಡಿಯೊ ಇಲ್ಲ ಎಂಬುದನ್ನು ಈ ರೀತಿ ಅಪಾಯಕಾರಿ ಸ್ಟಂಟ್ ಗಳಲ್ಲಿ ಭಾಗಿಯಾಗುವವರು ಅರಿತು ಕೊಳ್ಳಬೇಕು.

ಅಪಾಯಕಾರಿ ಸ್ಟಂಟ್ ಮಾಡಿದ ಕಾರಣಕ್ಕೆ ದಂಡ ತೆತ್ತ ಯೂಟ್ಯೂಬರ್

ಹೊಸ ಎರಡನೇ ತಲೆಮಾರಿನ Mahindra Thar ಎಸ್‌ಯು‌ವಿ ರೋಡ್ ಪ್ರೆಸೆನ್ಸ್ ಹಾಗೂ ಆಫ್ ರೋಡ್ ಸಾಮರ್ಥ್ಯಗಳಿಂದಾಗಿ ದೇಶದಾದ್ಯಂತವಿರುವ ವಾಹನ ಉತ್ಸಾಹಿಗಳನ್ನು ತನ್ನತ್ತ ಆಕರ್ಷಿಸುತ್ತಿದೆ. Thar ಎಸ್‌ಯು‌ವಿಯು ಫೋರ್ ಡ್ರೈವ್ ಸಿಸ್ಟಂ ಹೊಂದಿದ್ದರೂ, ಅದನ್ನು ಕಡಿಮೆ ವೇಗದಲ್ಲಿ ಸುರಕ್ಷಿತವಾಗಿ ಚಾಲನೆ ಮಾಡಬೇಕು.

ಅಪಾಯಕಾರಿ ಸ್ಟಂಟ್ ಮಾಡಿದ ಕಾರಣಕ್ಕೆ ದಂಡ ತೆತ್ತ ಯೂಟ್ಯೂಬರ್

Thar ಎಸ್‌ಯುವಿಯನ್ನು ಬುಕ್ ಮಾಡುವ ಗ್ರಾಹಕರು ಅದರ ವಿತರಣೆ ಪಡೆಯಲು ಸುಮಾರು 10 ತಿಂಗಳಿಂದ 12 ತಿಂಗಳವರೆಗೆ ಕಾಯ ಬೇಕಾಗುತ್ತದೆ. ಈ ಮೂಲಕ Thar ಎಸ್‌ಯುವಿ ದೇಶದಲ್ಲಿ ಹೆಚ್ಚು ಮಾರಾಟವಾಗುವ ಎಸ್‌ಯುವಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. Thar ಎಸ್‌ಯುವಿಯನ್ನು ಎಎಕ್ಸ್ ಹಾಗೂ ಎಲ್ಎಕ್ಸ್ ಎಂಬ ಎರಡು ಮಾದರಿಗಳಲ್ಲಿ ಮಾರಾಟ ಮಾಡಲಾಗುತ್ತದೆ.

ಅಪಾಯಕಾರಿ ಸ್ಟಂಟ್ ಮಾಡಿದ ಕಾರಣಕ್ಕೆ ದಂಡ ತೆತ್ತ ಯೂಟ್ಯೂಬರ್

ಗ್ರಾಹಕರ ಬೇಡಿಕೆಯಂತೆ Thar ಎಸ್‌ಯುವಿಯ ಆರಂಭಿಕ ಆವೃತ್ತಿಗಳಾದ ಎಎಕ್ಸ್ ಪೆಟ್ರೋಲ್ ಸ್ಟ್ಯಾಂಡರ್ಡ್ ಸಿಕ್ಸ್ ಸೀಟರ್, ಎಎಕ್ಸ್ ಸಿಕ್ಸ್ ಸೀಟರ್ ಸಾಫ್ಟ್ ಟಾಪ್ ಹಾಗೂ ಎಎಕ್ಸ್ ಸಿಕ್ಸ್ ಸೀಟರ್ ಡೀಸೆಲ್ ಸಾಫ್ಟ್ ಟಾಪ್ ಮಾದರಿಗಳನ್ನು ಸ್ಥಗಿತಗೊಳಿಸಿರುವ Mahindraಾ ಕಂಪನಿಯು ಹೈ ಎಂಡ್ ಮಾದರಿಗಳ ಮಾರಾಟದ ಮೇಲೆ ಹೆಚ್ಚು ಗಮನಹರಿಸಿದೆ.

ಹೊಸ ತಲೆಮಾರಿನ Thar ಎಸ್‌ಯುವಿಯನ್ನು ಖರೀದಿಸ ಬಯಸುವವರು ಮೊದಲ ಬಾರಿಗೆ ಡೀಸೆಲ್ ಆಟೋಮ್ಯಾಟಿಕ್ ಆವೃತ್ತಿಗಳಿಗೆ ಹೆಚ್ಚಿನ ಬೇಡಿಕೆ ಸಲ್ಲಿಸುತ್ತಿದ್ದು, ಬುಕ್ಕಿಂಗ್ ಮಾಡುವ ಒಟ್ಟು ಗ್ರಾಹಕರ ಪೈಕಿ 45% ನಷ್ಟು ಗ್ರಾಹಕರು ಆಟೋಮ್ಯಾಟಿಕ್ ಕಾರು ಮಾದರಿಗಳ ಖರೀದಿಗೆ ಆದ್ಯತೆ ನೀಡುತ್ತಿದ್ದಾರೆ.

Thar ಎಸ್‌ಯುವಿಯು ನಗರ ಪ್ರದೇಶಗಳಲ್ಲಿ ಸಂಚಾರಕ್ಕೆ ಅನುಕೂಲಕರವಾಗಿದೆ. ಹೆಚ್ಚು ಇಂಧನ ದಕ್ಷತೆಯ ಕಾರಣಕ್ಕೆ ಡೀಸೆಲ್ ಆಟೋಮ್ಯಾಟಿಕ್ ಮಾದರಿಗಳಿಗೆ ಹೆಚ್ಚಿನ ಬೇಡಿಕೆ ಉಂಟಾಗಿದೆ. ಆಫ್ ರೋಡ್ ಕ್ರೇಜ್ ಕೂಡಾ Thar ಎಸ್‌ಯುವಿಯ ಮಾರಾಟ ಪ್ರಮಾಣವು ಹೆಚ್ಚಳವಾಗುವುದಕ್ಕೆ ಪ್ರಮುಖ ಕಾರಣವಾಗಿದೆ.

ಅಪಾಯಕಾರಿ ಸ್ಟಂಟ್ ಮಾಡಿದ ಕಾರಣಕ್ಕೆ ದಂಡ ತೆತ್ತ ಯೂಟ್ಯೂಬರ್

Mahindra ಕಂಪನಿಯು ಇತ್ತೀಚೆಗಷ್ಟೇ ತನ್ನ Thar ಎಸ್‌ಯುವಿಯ ಬೆಲೆಯನ್ನು ಹೆಚ್ಚಿಸಿದೆ. ಕಂಪನಿಯು ಈ ಎಸ್‌ಯುವಿಯ ಬೆಲೆಯನ್ನು ರೂ. 32 ಸಾವಿರಗಳಿಂದ ರೂ. 92 ಸಾವಿರಗಳಷ್ಟು ಹೆಚ್ಚಿಸಿದೆ. ಹೊಸ ತಲೆಮಾರಿನ Thar ಎಸ್‌ಯುವಿಯು ಭಾರತದಲ್ಲಿ ವಿವಿಧ ಹೊಸ ಫೀಚರ್ ಗಳೊಂದಿಗೆ ಮಾರಾಟವಾಗುತ್ತಿದೆ.

Most Read Articles

Kannada
English summary
Youtuber fined for performing dangerous stunt video details
Story first published: Saturday, September 11, 2021, 10:21 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X