Mahindra Scorpio-N: ವಿದೇಶಿ ನೆಲದಲ್ಲಿ ಸ್ವದೇಶಿ ಬಾವುಟ: ಭಾರತದಿಂದ ಅಮೆರಿಕಾಗೆ ಕಾರು ಪ್ರಯಾಣ

ಯೂಟ್ಯೂಬರ್ ಒಬ್ಬರು ತಮ್ಮ ಮಹೀಂದ್ರಾ ಸ್ಕಾರ್ಪಿಯೋ-ಎನ್ (Mahindra Scorpio-N) ಬಾನೆಟ್ ಮೇಲೆ ನಿಂತು ಅಮೆರಿಕದ ನ್ಯೂಯಾರ್ಕ್‌ನ ಪ್ರಸಿದ್ಧ ಟೈಮ್ಸ್ ಸ್ಕ್ವೇರ್‌ನಲ್ಲಿ ಭಾರತದ ಧ್ವಜವನ್ನು ಬೀಸುತ್ತಿರುವ ವೀಡಿಯೊ ಸಖತ್ ವೈರಲ್ ಆಗಿದೆ. ಇನ್ಸ್ಟಾಗ್ರಾಮ್‌ನಲ್ಲಿ ಬರೋಬ್ಬರಿ 1.4 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿರುವ ಈ ವೀಡಿಯೊವನ್ನು ಯುನೈಟೆಡ್ ವಾಂಡರ್ ತನ್ನ ಪೇಜ್‌ನಲ್ಲಿ ಹಂಚಿಕೊಂಡಿದೆ.

ಈ ಕಿರು ವಿಡಿಯೋದಲ್ಲಿ, ತಮ್ಮ ಮಹೀಂದ್ರಾ ಸ್ಕಾರ್ಪಿಯೋ-ಎನ್ ನೊಂದಿಗೆ ಪೋಸ್ ನೀಡುವುದನ್ನು ಕಾಣಬಹುದು, ಭಾರತದ ಧ್ವಜವನ್ನು ಹಾರಿಸುತ್ತಾ ವೀಡಿಯೊಗೆ ಸ್ಪೂರ್ತಿದಾಯಕ ಹಿನ್ನೆಲೆ ಸಂಗೀತವನ್ನು ನೀಡಲಾಗಿದೆ. ಅಮೆರಿಕದ ನ್ಯೂಯಾರ್ಕ್‌ಲ್ಲಿರುವ ಅತ್ಯಂತ ಜನಪ್ರಿಯ ಟೈಮ್ಸ್ ಸ್ಕ್ವೇರ್ನಲ್ಲಿ ಅವರು ಹೆಮ್ಮೆಯಿಂದ ಭಾರತೀಯ ರಾಷ್ಟ್ರಧ್ವಜವನ್ನು ಬೀಸುತ್ತಿರುವುದು ಎಲ್ಲರ ಗಮನಸೆಳೆದಿದೆ.

youtuber-reached-america-in-a-mahindra-scorpio-n-indian-flag-in-times-square

ಇದೇ ಯೂಟ್ಯೂಬರ್ ಕೆಲವು ವಾರಗಳ ಹಿಂದೆ ಮಹೀಂದ್ರಾ ಸ್ಕಾರ್ಪಿಯೋ - ಎನ್ ಎಸ್‌ಯುವಿಯಲ್ಲಿ ಹಾರ್ವರ್ಡ್ ವಿಶ್ವವಿದ್ಯಾಲಯಕ್ಕೆ (harvard university) ತಲುಪಿ ವೀಡಿಯೊವನ್ನು ಹಂಚಿಕೊಂಡಿದ್ದರು. ಈ ವಿಶ್ವವಿದ್ಯಾಲಯವನ್ನು ತಲುಪುವುದರ ಹಿಂದೆಯೂ ಒಂದು ಕಥೆಯಿದೆ. ಇದೇ ವಿಶ್ವ ವಿದ್ಯಾಲಯದಿಂದ ಭಾರತದ ಪ್ರಮುಖ ಉದ್ಯಮಿಯೊಬ್ಬರು ಪದವಿ ಪಡೆದಿದ್ದಾರೆ.

ಹೌದು, ಆನಂದ್ ಮಹೀಂದ್ರಾ ಅವರು 1981 ರಲ್ಲಿ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದಿದ್ದರು, ಈ ಪ್ರತಿಷ್ಠಿತ ವಿಶ್ವವಿದ್ಯಾಲಯದ ಮುಂದೆ ನಿಲ್ಲಲು ನಾನು ಹೆಮ್ಮೆಪಡುತ್ತೇನೆ ಎಂದು ವಿಡಿಯೋದಲ್ಲಿ ಯ್ಯೂಟ್ಯೂಬರ್ ಹೇಳಿಕೊಂಡಿದ್ದಾರೆ. ಇದಕ್ಕೆ ಆನಂದ್ ಮಹೀಂದ್ರಾ ಅವರು ಕೂಡ ಪ್ರತಿಕ್ರಿಯಿಸಿ, ಸ್ವದೇಶಿ ಕಾರಿನಲ್ಲಿ ವಿದೇಶಿ ನೆಲವನ್ನು ತಲುಪಿದ್ದಕ್ಕೆ ಖುಷಿ ವ್ಯಕ್ತಪಡಿಸಿ ಪ್ರೋತ್ಸಾಹಿಸಿದ್ದರು.

youtuber-reached-america-in-a-mahindra-scorpio-n-indian-flag-in-times-square

ಮಹೀಂದ್ರಾ ಗ್ರೂಪ್‌ನ ಅಧ್ಯಕ್ಷ ಆನಂದ್ ಮಹೀಂದ್ರಾ ಅವರು ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಚಲನಚಿತ್ರ ನಿರ್ಮಾಣ ಮತ್ತು ವಾಸ್ತುಶಿಲ್ಪವನ್ನು (filmmaking and architecture) ಅಧ್ಯಯನ ಮಾಡಿದ್ದರು. ನಂತರ ಅವರು 1977 ರಲ್ಲಿ ಮ್ಯಾಗ್ನಾ ಕಮ್ ಲಾಡೆ (magna cum laude) ಪದವಿ ಪಡೆದರು. 1981ರಲ್ಲಿ ಹಾರ್ವರ್ಡ್ ಬಿಸಿನೆಸ್ ಸ್ಕೂಲ್‌ನಿಂದ ಎಂಬಿಎ ಪದವಿ ಪಡೆದರು.

ಮಹೀಂದ್ರಾ ಸ್ಕಾರ್ಪಿಯೋ - ಎನ್: ಈ ಕಾರು ಮಹೀಂದ್ರಾ ಕಂಪನಿಯ ಜನಪ್ರಿಯ ಸ್ಕಾರ್ಪಿಯೋ ಕ್ಲಾಸಿಕ್ ಮಾದರಿಯ ಅಪ್‌ಡೇಟೆಡ್ ಹಾಗೂ ಪ್ರೀಮಿಯಂ ಆವೃತ್ತಿಯಾಗಿದೆ. ಎಂಪಿವಿ/ಎಸ್‌ಯುವಿ ಎರಡೂ ವಿಭಾಗಗಳಿಗೆ ಹೊಂದಿಕೊಳ್ಳುವಂತೆ ನಿರ್ಮಿಸಲಾಗಿದೆ. ಜೂನ್ 2023 ರಲ್ಲಿ ಬಿಡುಗಡೆಯಾದಾಗಿನಿಂದ Mahindra Scorpio-N ಗ್ರಾಹಕರಿಂದ ಉತ್ತಮ ಬೇಡಿಕೆಯೊಂದಿಗೆ ಮುನ್ನುಗ್ಗುತ್ತಿದೆ.

youtuber-reached-america-in-a-mahindra-scorpio-n-indian-flag-in-times-square

ಈ ಅತ್ಯಂತ ಜನಪ್ರಿಯವಾದ ಮಹೀಂದ್ರಾ ಸ್ಕಾರ್ಪಿಯೋ-ಎನ್ ಹಲವಾರು ಪವರ್ ಟ್ರೇನ್ ಆಯ್ಕೆಗಳೊಂದಿಗೆ ಬರುತ್ತದೆ. 2.2 ಲೀಟರ್‌ನ ಎಂಹಾಕ್ ಟರ್ಬೊ ಡೀಸೆಲ್ ಎಂಜಿನ್ 130 ಬಿಹೆಚ್‌ಪಿ ಪವರ್ ಹಾಗೂ 300 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಎರಡನೇ ಎಂಜಿನ್ ಆಯ್ಕೆಯು 2 - ಲೀಟರ್ 4 - ಸಿಲಿಂಡರ್ ಎಂಫಾಲ್ಕನ್ ಪೆಟ್ರೋಲ್ ಎಂಜಿನ್ ಅನ್ನು ಸಹ ನೀಡಲಾಗುತ್ತದೆ.

ಈ ಎಂಜಿನ್ 200 ಬಿಹೆಚ್‌ಪಿ ಪವರ್ ಹಾಗೂ 370 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. 6 - ಸ್ಪೀಡ್ ಮ್ಯಾನುವಲ್ ಮತ್ತು ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಗಳನ್ನು ಸ್ಕಾರ್ಪಿಯೋ - ಎನ್ ನ ಪೆಟ್ರೋಲ್ ಮತ್ತು ಡೀಸೆಲ್ ಟ್ರಿಮ್‌ ಗಳೊಂದಿಗೆ ನೀಡಲಾಗುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Monday, March 18, 2024, 12:01 [IST]
English summary
Youtuber reached america in a mahindra scorpio n indian flag in times square
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+