ಮರಳಿನಲ್ಲಿ ಸಿಲುಕಿ ಹೊರ ಬರಲು ಪರದಾಡಿದ ಲ್ಯಾಂಡ್ ರೋವರ್ ಇವೊಕ್ ಎಸ್‌ಯುವಿ

ಲ್ಯಾಂಡ್ ರೋವರ್ ಕಂಪನಿಯು ಯುಟಿಲಿಟಿ ವಾಹನಗಳ ಉತ್ಪಾದನೆಗೆ ಹೆಸರುವಾಸಿಯಾಗಿದೆ. ಲ್ಯಾಂಡ್ ರೋವರ್ ರೇಂಜ್ ರೋವರ್ ಎಸ್‌ಯುವಿಗಳು ಆಫ್ ರೋಡ್ ಸಾಮರ್ಥ್ಯಕ್ಕೆ ಹೆಸರುವಾಸಿಯಾಗಿವೆ.

ಮರಳಿನಲ್ಲಿ ಸಿಲುಕಿ ಹೊರ ಬರಲು ಪರದಾಡಿದ ಲ್ಯಾಂಡ್ ರೋವರ್ ಇವೊಕ್ ಎಸ್‌ಯುವಿ

ಕಂಪನಿಯು ಇತ್ತೀಚಿಗಷ್ಟೇ ತನ್ನ ಡಿಫೆಂಡರ್ ಎಸ್‌ಯುವಿಯನ್ನು ಬಿಡುಗಡೆಗೊಳಿಸಿದೆ. ರೇಂಜ್ ರೋವರ್ ಇವೊಕ್, ಲ್ಯಾಂಡ್ ರೋವರ್‌ ಕಂಪನಿಯ ಎಂಟ್ರಿ ಲೆವೆಲ್ ಎಸ್‌ಯುವಿಯಾಗಿದೆ. ಕಂಪನಿಯ ಇತರ ಎಸ್‌ಯುವಿಗಳಂತೆ ಇವೊಕ್ ಸಹ ಆಫ್ ರೋಡ್ ಸಾಮರ್ಥ್ಯಕ್ಕೆ ಹೆಸರುವಾಸಿಯಾಗಿದೆ.

ಮರಳಿನಲ್ಲಿ ಸಿಲುಕಿ ಹೊರ ಬರಲು ಪರದಾಡಿದ ಲ್ಯಾಂಡ್ ರೋವರ್ ಇವೊಕ್ ಎಸ್‌ಯುವಿ

ಇತ್ತೀಚಿಗೆ ಇರ್ಫಾನ್ ಎಂಬ ಯೂಟ್ಯೂಬರ್ ಒಬ್ಬರು ತಮ್ಮ ರೇಂಜ್ ರೋವರ್ ಇವೊಕ್ ಎಸ್‌ಯುವಿಯನ್ನು ಮೊದಲ ಬಾರಿಗೆ ಬೀಚ್‌ಗೆ ಕೊಂಡೊಯ್ದಿದ್ದರು.ಬೀಚ್'ನಲ್ಲಿ ಅವರು ತಮ್ಮ ಸ್ನೇಹಿತನ ಮಾರ್ಗದರ್ಶನದಿಂದ ಮರಳಿನ ಮೇಲೆ ತಮ್ಮ ಎಸ್‌ಯುವಿಯನ್ನು ಚಾಲನೆ ಮಾಡುತ್ತಾರೆ.

ಮರಳಿನಲ್ಲಿ ಸಿಲುಕಿ ಹೊರ ಬರಲು ಪರದಾಡಿದ ಲ್ಯಾಂಡ್ ರೋವರ್ ಇವೊಕ್ ಎಸ್‌ಯುವಿ

ಮೊದಲ ಬಾರಿಗೆ ಅವರು ಮರಳಿನ ಮೇಲೆ ಸ್ಯಾಂಡ್ ಮೋಡ್'ನಲ್ಲಿ ಚಾಲನೆ ಮಾಡುತ್ತಾರೆ. ಎಸ್‌ಯುವಿಯು ಮರಳಿನಲ್ಲಿ ಸಿಲುಕದೇ ಮುಂದೆ ಸಾಗುತ್ತದೆ. ಇದರಿಂದ ಇರ್ಫಾನ್'ರವರಿಗೆ ಮರಳಿನ ಮೇಲೆ ಎಸ್‌ಯುವಿ ಚಾಲನೆ ಮಾಡಬಹುದು ಎಂಬ ಆತ್ಮ ವಿಶ್ವಾಸ ಮೂಡುತ್ತದೆ.

ಮರಳಿನಲ್ಲಿ ಸಿಲುಕಿ ಹೊರ ಬರಲು ಪರದಾಡಿದ ಲ್ಯಾಂಡ್ ರೋವರ್ ಇವೊಕ್ ಎಸ್‌ಯುವಿ

ಕೆಲ ದಿನಗಳ ನಂತರ ಅವರು ಮತ್ತೆ ಬೀಚ್'ನಲ್ಲಿ ತಮ್ಮ ಎಸ್‌ಯುವಿ ಚಾಲನೆ ಮಾಡಲು ಪ್ರಯತ್ನಿಸುತ್ತಾರೆ. ಆದರೆ ಈ ಬಾರಿ ಅದೃಷ್ಟ ಅವರ ಕೈ ಹಿಡಿಯಲಿಲ್ಲ. ಇರ್ಫಾನ್ ಚಾಲನೆ ಮಾಡುತ್ತಿದ್ದ ಇವೊಕ್ ಎಸ್‌ಯುವಿ ಮರಳಿನಲ್ಲಿ ಸಿಲುಕಿಕೊಂಡಿದೆ.

ಮರಳಿನಲ್ಲಿ ಸಿಲುಕಿ ಹೊರ ಬರಲು ಪರದಾಡಿದ ಲ್ಯಾಂಡ್ ರೋವರ್ ಇವೊಕ್ ಎಸ್‌ಯುವಿ

ಅವರು ಎಸ್‌ಯುವಿಯನ್ನು ಹೊರಗೆ ತರಲು ಸಾಕಷ್ಟು ಪ್ರಯತ್ನ ನಡೆಸುತ್ತಾರೆ. ಇರ್ಫಾನ್ ಹಾಗೂ ಅವರ ಸ್ನೇಹಿತ ಎಸ್‌ಯುವಿಯ ವ್ಹೀಲ್ ಮುಂದೆ ಕಲ್ಲನ್ನು ಹಾಕಿ ಮುಂದೆ ತರಲು ಪ್ರಯತ್ನಿಸುತ್ತಾರೆ. ಆದರೆ ಅವರ ಎಲ್ಲಾ ಪ್ರಯತ್ನಗಳು ವ್ಯರ್ಥವಾಗುತ್ತವೆ.

ಮರಳಿನಲ್ಲಿ ಸಿಲುಕಿ ಹೊರ ಬರಲು ಪರದಾಡಿದ ಲ್ಯಾಂಡ್ ರೋವರ್ ಇವೊಕ್ ಎಸ್‌ಯುವಿ

ಕೊನೆಗೆ ಇರ್ಫಾನ್ ಹಾಗೂ ಅವರ ಸ್ನೇಹಿತ ಸ್ಥಳೀಯರ ನೆರವು ಪಡೆಯಲು ಮುಂದಾಗುತ್ತಾರೆ. ಹಲಗೆಗಳನ್ನು ವ್ಹೀಲ್ ಮುಂದೆ ಇಟ್ಟು ಅದರ ಮೇಲೆ ಎಸ್‌ಯುವಿಯನ್ನು ಚಾಲನೆ ಮಾಡುವಂತೆ ಸ್ಥಳೀಯರು ಹೇಳುತ್ತಾರೆ.

ಮರಳಿನಲ್ಲಿ ಸಿಲುಕಿ ಹೊರ ಬರಲು ಪರದಾಡಿದ ಲ್ಯಾಂಡ್ ರೋವರ್ ಇವೊಕ್ ಎಸ್‌ಯುವಿ

ಹಲವು ಗಂಟೆಗಳ ಪ್ರಯತ್ನದ ನಂತರ ರೇಂಜ್ ರೋವರ್ ಇವೊಕ್ ಅಲ್ಲಿಂದ ಹೊರ ಬರುತ್ತದೆ. ಆದರೆ ಯಾವ ಕಾರಣಕ್ಕೆ ಇವೊಕ್ ಮರಳಿನಲ್ಲಿ ಸಿಲುಕಿತ್ತು ಎಂಬ ಪ್ರಶ್ನೆ ಇರ್ಫಾನ್'ರವರನ್ನು ಕಾಡುತ್ತದೆ.

ಮರಳಿನಲ್ಲಿ ಸಿಲುಕಿ ಹೊರ ಬರಲು ಪರದಾಡಿದ ಲ್ಯಾಂಡ್ ರೋವರ್ ಇವೊಕ್ ಎಸ್‌ಯುವಿ

ಸ್ಥಳೀಯರ ಪ್ರಕಾರ ಈ ಹಿಂದೆಯೂ ಹಲವು ವಾಹನಗಳು ಮರಳಿನಲ್ಲಿ ಸಿಲುಕಿದ್ದವು. ಈ ಕಾರಣಕ್ಕೆ ಆಫ್ ರೋಡ್'ನಲ್ಲಿ ಚಲಿಸುವಾಗ ಹೆಚ್ಕು ಜನರ ಜೊತೆ ಹೋಗುವಂತೆ ಸಲಹೆ ನೀಡಲಾಗುತ್ತದೆ.

ಮರಳಿನಲ್ಲಿ ಸಿಲುಕಿ ಹೊರ ಬರಲು ಪರದಾಡಿದ ಲ್ಯಾಂಡ್ ರೋವರ್ ಇವೊಕ್ ಎಸ್‌ಯುವಿ

ಇರ್ಫಾನ್'ರವರ ಬಳಿ ಯಾವುದಾದರೂ ಬ್ಯಾಕ್ ಅಪ್ ವಾಹನವಿದ್ದಿದ್ದರೆ ಆ ವಾಹನವು ಸುಲಭವಾಗಿ ಇವೊಕ್ ಎಸ್‌ಯುವಿಯನ್ನು ಮರಳಿನಿಂದ ಹೊರತೆಗೆಯುತ್ತಿತ್ತು. ಎಸ್‌ಯುವಿಗಳು ಸಿಲುಕಿಕೊಂಡಾಗ ಹಗ್ಗ, ಹಲಗೆಗಳಂತಹ ವಸ್ತುಗಳು ನೆರವಿಗೆ ಬರುತ್ತವೆ.

ಇರ್ಫಾನ್'ರವರು ಇಂತಹ ಯಾವುದೇ ವಸ್ತುಗಳನ್ನು ತಮ್ಮೊಂದಿಗೆ ಕೊಂಡೊಯ್ದಿರಲಿಲ್ಲ. ಇರ್ಫಾನ್ ತಮ್ಮ ಎಸ್‌ಯುವಿಯನ್ನು ಮರಳಿನಲ್ಲಿ ನಿಲ್ಲಿಸಿದ್ದೇ ಇವೊಕ್ ಎಸ್‌ಯುವಿ ಮರಳಿನಲ್ಲಿ ಸಿಲುಕಲು ಪ್ರಮುಖ ಕಾರಣವಾಗಿದೆ.

ಮರಳಿನಲ್ಲಿ ಸಿಲುಕಿ ಹೊರ ಬರಲು ಪರದಾಡಿದ ಲ್ಯಾಂಡ್ ರೋವರ್ ಇವೊಕ್ ಎಸ್‌ಯುವಿ

ಬೀಚ್'ಗಳ ಮರಳು ಸಾಕಷ್ಟು ಸಡಿಲವಾಗಿರುವುದರಿಂದ ಹಾಗೂ ಎಸ್‌ಯುವಿಗಳು ತಮ್ಮ ತೂಕದಿಂದಾಗಿ ಅಂತಹ ಮೇಲ್ಮೈಗಳಲ್ಲಿ ನಿಧಾನವಾಗಿ ಒಳ ಹೋಗುವುದರಿಂದ ಮರಳಿನಲ್ಲಿ ಸಿಲುಕುತ್ತವೆ. ಈ ಕಾರಣಕ್ಕೆ ಮರಳಿನ ಮೇಲೆ ವಾಹನಗಳನ್ನು ನಿಲ್ಲಿಸದೇ ಇರುವುದು ಒಳ್ಳೆಯದು.

Most Read Articles

Kannada
English summary
Youtuber's Range Rover Evoque stucks in beach. Read in Kannada.
Story first published: Friday, July 16, 2021, 10:07 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X