ಬಡವರ ಮಕ್ಕಳು ಬೆಳಿಬೇಕ್ ಕಣ್ರಯ್ಯ: ದುಬಾರಿ ಸ್ವದೇಶಿ ಕಾರು ಖರೀದಿಸಿದ ಕನ್ನಡದ ಖ್ಯಾತ ಯುಟ್ಯೂಬರ್
ಕಾರುಗಳ ಬಗ್ಗೆ ಕ್ರೇಜ್ ಇಲ್ಲದವರು ಯಾರಿಲ್ಲ. ಸ್ವಂತದ್ದೊಂದು ಕಾರು ಬೇಕು, ಅದರಲ್ಲಿ ಕುಳಿತು ಒಮ್ಮೆಯಾದರೂ ದೂರದೂರಿಗೆ ಹೋಗಬೇಕು ಎಂಬ ಕನಸು ಹಲವರಲ್ಲಿರುತ್ತದೆ. ಇದಕ್ಕಾಗಿ ತಮ್ಮ ಡ್ರೀಮ್ ಕಾರನ್ನು ಖರೀದಿಸುತ್ತಾರೆ. ಇದೇ ರೀತಿ ಯುಟ್ಯೂಬರ್ ಹೊಂದಿರುವ ಸ್ಯಾಮ್ ಸಮೀರ್ (Sam sameer) ತಮ್ಮ ಡ್ರೀಮ್ ಕಾರ್ ಆದ ಮಹೀಂದ್ರಾ XUV700 (Mahindra XUV700) ಎಸ್‍ಯುವಿಯನ್ನು ಖರೀದಿಸಿದ್ದಾರೆ. ಇದು ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗುವ ಎಸ್‍ಯುವಿಗಳಲ್ಲಿ ಒಂದಾಗಿದೆ. ಈ ಎಸ್‍ಯುವಿಯನ್ನು ಖರೀದಿಸಿದ ಸ್ಯಾಮ್ ಸಮೀರ್ ಅವರು ಕನ್ನಡದ ಖ್ಯಾತ ಯುಟ್ಯೂಬರ್ ಆಗಿದ್ದಾರೆ.
ಸ್ಯಾಮ್ ಸಮೀರ್ ಅವರು ದಿನಕ್ಕೊಂದು ಯುಟ್ಯೂಬ್ ವಿಡಿಯೋವನ್ನು ಮತ್ತು ಇನ್‌ಸ್ಟಾಗ್ರಾಂಮಲ್ಲಿ ರೀಲ್ ಅಪ್ಲೋಡ್ ಮಾಡುತ್ತಾರೆ. ಇವರ ಎಲ್ಲಾ ವೀಡಿಯೋಗಳಿಗೆ ಉತ್ತಮ ವ್ಯೂಸ್ ಸಿಗುತ್ತದೆ. ಇವರ ಯುಟ್ಯೂಬ್ ಚಾನೆಲ್ಗೆ 2 ಲಕ್ಷ 63 ಸಾವಿರ ಸಬ್‌ಸ್ಕ್ರೈಬರ್ ಹೊಂದಿದ್ರೆ, ಇನ್‌ಸ್ಟಾಗ್ರಾಂನಲ್ಲಿ 6 ಲಕ್ಷ 22 ಸಾವಿರ ಫಾಲೋವರ್ಸ್ ಅನ್ನು ಹೊಂದಿದ್ದಾರೆ.

ಸ್ಯಾಮ್ ಸಮೀರ್ ಅವರು ಖರೀದಿಸಿದ ಮಹೀಂದ್ರಾ XUV700 ಎಸ್‍ಯುವಿಯ ಆನ್ ರೋಡ್ ಬೆಲೆಯು ಸುಮಾರು 17.55 ಲಕ್ಷದಿಂದ ಪ್ರಾರಂಭವಾದರೆ, ಇದರ ಟಾಪ್ ಎಂಡ್ ವೆರಿಯೆಂಟ್ ಬೆಲೆಯು ರೂ. 34 ಲಕ್ಷವಾಗಿದೆ. ಈ ಮಹೀಂದ್ರಾ ಎಕ್ಸ್‌ಯುವಿ700 ಎಸ್‌ಯುವಿ 2 ಪವರ್‌ಟ್ರೇನ್ ಆಯ್ಕೆಯಲ್ಲಿ ದೊರೆಯುತ್ತದೆ. ಇದರ 2-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್, 200 ಪಿಎಸ್ ಗರಿಷ್ಠ ಪವರ್ ಹಾಗೂ 380 ಎನ್ಎಂ ಪೀಕ್ ಟಾರ್ಕ್ ಹೊರಹಾಕುವ ಸಾಮರ್ಥ್ಯವನ್ನು ಹೊಂದಿದೆ.
2.2-ಲೀಟರ್ ಡೀಸೆಲ್ ಎಂಜಿನ್ 185 ಪಿಎಸ್ ಪವರ್ ಮತ್ತು 450 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಈ ಈ ಕಾರು, ರೂಪಾಂತರಗಳಿಗೆ ಅನುಗುಣವಾಗಿ 6-ಸ್ಪೀಡ್ ಮ್ಯಾನುವಲ್ ಅಥವಾ 6-ಸ್ಪೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ನೊಂದಿಯೂ ಲಭ್ಯವಿದೆ. FWD (ಫ್ರಂಟ್ ವೀಲ್ ಡ್ರೈವ್) ಹಾಗೂ AWD (ಆಲ್ ವೀಲ್ ಡ್ರೈವ್) ತಂತ್ರಜ್ಞಾನವನ್ನು ಪಡೆದಿದ್ದು, 17 ಕಿ.ಮೀ ಮೈಲೇಜ್ ನೀಡುತ್ತದೆ. ಜೊತೆಗೆ 5, 6 ಹಾಗೂ 7 ಆಸನ ಆಯ್ಕೆ ವ್ಯವಸ್ಥೆಯಲ್ಲಿಯೂ ಸಿಗುತ್ತದೆ.

ವಿನ್ಯಾಸದ ದೃಷ್ಟಿಯಿಂದಲೂ ಈ ಕಾರು ಅತ್ಯುತ್ತಮವಾಗಿದ್ದು, ಎವರೆಸ್ಟ್ ವೈಟ್, ಮಿಡ್ನೈಟ್ ಬ್ಲಾಕ್, ನಪೋಲಿ ಬ್ಲಾಕ್ ಬಣ್ಣಗಳೊಂದಿಗೂ ದೊರೆಯುತ್ತದೆ. 10.25 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 10.25 ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, 6 - ವೇ ಪವರ್ ಡ್ರೈವರ್ ಸೀಟ್, 12 ಸ್ಪೀಕರ್, ಸನ್‌ರೂಫ್, ಡುಯಲ್ ಝೋನ್ ಕ್ಲೇಮೇಟ್ ಕಂಟ್ರೋಲ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿವೆ.
ಈ ಮಹೀಂದ್ರಾ ಎಕ್ಸ್‌ಯುವಿ700 ಪ್ರಯಾಣಿಕರಿಗೆ ಗರಿಷ್ಠ ರಕ್ಷಣೆಯನ್ನು ಒದಗಿಸುತ್ತದೆ. ಸುರಕ್ಷತೆಯ ದೃಷ್ಟಿಯಿಂದ 7 ಏರ್‌ಬ್ಯಾಗ್, ESP (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ), TPMS (ಪ್ರೆಶರ್ ಮಾನಿಟರಿಂಗ್ ಸಿಸ್ಟಮ್), 360 - ಡಿಗ್ರಿ ಕ್ಯಾಮೆರಾ, ADAS (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್) ಅನ್ನು ಹೊಂದಿದ್ದು, ನಿರ್ಭಿತಿಯಿಂದ ಪ್ರಯಾಣಿಸಲು ನೆರವಾಗುತ್ತದೆ.
ಈ ಎಕ್ಸ್‌ಯುವಿ700 ಎಸ್‌ಯುವಿಗೆ ಹ್ಯುಂಡೈ ಅಲ್ಕಾಜರ್, ಎಂಜಿ ಹೆಕ್ಟರ್ ಪ್ಲಸ್, ಟಾಟಾ ಸಫಾರಿ, ಟಾಟಾ ಹ್ಯಾರಿಯರ್, ಹ್ಯುಂಡೈ ಕ್ರೆಟಾ ಮಾದರಿಗಳು ಪ್ರಬಲ ಎದುರಾಳಿಯಾಗಿವೆ. ಪ್ರಸ್ತುತ ಎಕ್ಸ್‌ಯುವಿ700 ಕಾರನ್ನು ಬೇಗನೇ ಮನೆಗೆ ತರಬಹುದಾಗಿರುವುದರಿಂದ ಬಹುತೇಕರ ಆಯ್ಕೆಯ ವಾಹನವಾಗಬಹುದು. ನಿಮ್ಮ ಗಮನಕ್ಕೆ.. ಈ ಕಾಯುವಿಕೆ ಅವಧಿ ರಾಜ್ಯದಿಂದ ರಾಜ್ಯಕ್ಕೆ ಬೇರೆಯಿರಲಿದ್ದು, ಹೆಚ್ಚಿನ ಮಾಹಿತಿಗೆ ಸಮೀಪದ ಶೋರೂಂಗೆ ಭೇಟಿ ನೀಡಿರಿ.
ಡ್ರೈವ್‌ಸ್ಪಾರ್ಕ್ ಕನ್ನಡ ತಂಡ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ಒದಗಿಸುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್ ಗಳನ್ನು ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








