ಯ್ಯೂಟ್ಯೂಬ್ ವಿಡಿಯೋ ಮಾಡಿ 1.5 ಕೋಟಿಗೆ ಮರ್ಸಿಡಿಸ್‌-G63 AMG ಖರೀದಿ: ವಾವ್‌ ಎಂದ ಫ್ಯಾನ್ಸ್‌!

ಇದು ಸೋಷಿಯಲ್‌ ಮೀಡಿಯಾ ಕಾಲ. ಈ ಕಾಲದಲ್ಲಿ ಇನ್ನೊಬ್ಬರನ್ನು ಎಂಟರ್‌ಟೈನ್ ಮಾಡುವುದರ ಜೊತೆಗೆ ದುಡ್ಡನ್ನು ಸಂಪಾದಿಸುವುದು ಹೈಲೈಟ್‌. ಫೇಸ್‌ಬುಕ್‌, ಯ್ಯೂಟ್ಯೂಬ್ ಮತ್ತ ಇನ್ಸ್ಟಾಗ್ರಾಂನಂತಹ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋಗಳನ್ನು ಮಾಡಿ ಅದರಲ್ಲಿ ವೀಕ್ಷಣೆಗಳನ್ನು ಪಡೆದುಕೊಂಡು ತಮಗೆ ಬೇಕಾದ ವಸ್ತುಗಳನ್ನು ಕೊಳ್ಳುವ ಕ್ರೀಯೆಟರ್‌ಗಳನ್ನು ನಾವು ನೋಡಿದ್ದೇವೆ.

ಇಲ್ಲೊಂದು ಕಡೆ ಅದೇ ರೀತಿ, ಪ್ರಸಿದ್ದ ಯ್ಯೂಟ್ಯೂಬರ್‌ ಒಬ್ಬ ಬಹುಕೋಟಿ ಬೆಲೆಯ ಲಕ್ಷುರಿ ಕಾರೊಂದನ್ನು ಖರೀದಿ ಮಾಡಿದ್ದು, ಇದೀಗ ಸಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್‌ ಆಗುತ್ತಿದ್ದು, ಜನರಿಂದ ಭರಪೂರ ಅಭಿನಂಧನೆಗಳು ಹರಿದು ಬರುತ್ತಿದೆ. ಅಂದ ಹಾಗೆ ಈ ದುಬಾರಿ ಕಾರನ್ನು ಖರೀದಿ ಮಾಡಿರುವ ಆ ಯ್ಯೂಟ್ಯೂಬರ್‌ ಹೆಸರು ಸಂಜು ಶೆರಾವತ್‌ (Sanju Sherawat). ಈ ಕಾರಿನ ಹೆಸರು ಮರ್ಸಿಡಿಸ್‌ ಬೆಂಝ್‌ G63 AMG.

Youtuber Sanju Sherawat Bought Mercedes G-63 And Shares His Experience

ಮರ್ಸಿಡಿಸ್‌ ಬೆಂಝ್‌ G63 AMG (Mercedes G-63) ಕಾರು ಎಲ್ಲರ ಮಧ್ಯೆ G-Wagen ಎಂದೇ ಪ್ರಸಿದ್ದವಾಗಿದೆ. ಸಾಕಷ್ಟು ಸೆಲೆಬ್ರಿಟಿಗಳು ಈಗಾಗಲೇ ಈ ಕಾರನ್ನು ತಮ್ಮ ಫೇವರೀಟ್‌ ಮಾಡಿಕೊಂಡಿದ್ದು ಎಎಲ್ಲರಿಗೂ ತಿಳಿದಿದೆ. ಇದೀಗ ಯ್ಯೂಟ್ಯೂಬರ್ ಸಹ ದುಬಾರಿ ಬೆಲೆಯ ಮರ್ಸಿಡಿಸ್‌ ಬೆಂಝ್‌ G63 AMG ಕಾರು ಖರೀದಿ ಮಾಡಿರುವುದು ಎಲ್ಲರಿಗೂ ಸ್ಪೂರ್ತಿಯಾಗಿದೆ ಎಂದರೆ ತಪ್ಪಾಗಲಾರದು.

ಇನ್ನು ಸಂಜು ಶೇರಾವತ್‌ ಈ ಕಾರು ಖರೀದಿಸಿರುವುದರ ಬಗ್ಗೆ ಹರ್‌ ಗ್ಯಾರೇಜ್ ಎಂಬ ಯ್ಯೂಟ್ಯೂಬ್‌ ಚಾನಲ್‌ನಲ್ಲಿ ವಿಡಿಯೋ ಮಾಡಿ ಪೋಸ್ಟ್‌ ಮಾಡಿದ್ದು, ಇದರಲ್ಲಿ ಈ ಮರ್ಸಿಡಿಸ್‌ ಬೆಂಝ್‌ G63 AMG ಕಾರಿನ ಕುರಿತಾ ಓನರ್‌ಶಿಪ್‌ ವಿಡಿಯೋವನ್ನು ಸಹ ಮಾಡಲಾಗಿದೆ. ಇನ್ನು ಈತನ ಕೈಯಲ್ಲಿರುವ ಈ ಕಾರು ಸುಮಾರು 2017 ರ ಮಾಡೆಲ್ ಆಗಿದ್ದು, ಈ ಸೆಕೆಂಡ್‌ ಹ್ಯಾಂಡ್‌ ಕಾರಿಗೂ ಆತ ಬರೋಬ್ಬರಿ 1.5 ಕೋಟಿ ರೂಪಾಯಿ ನೀಡಿ ಖರೀದಿ ಮಾಡಿದ್ದಾನೆ.

Youtuber Sanju Sherawat Bought Mercedes G-63 And Shares His Experience

ಮರ್ಸಿಡಿಸ್-ಬೆಂಝ್ G-Class ವಿಶ್ವದ ಅತ್ಯಂತ ಜನಪ್ರಿಯ ಐಷಾರಾಮಿ ಎಸ್‍ಯುವಿಗಳಲ್ಲಿ ಒಂದಾಗಿದೆ. ಸೆಲೆಬ್ರಿಟಿಗಳು ಮತ್ತು ಬಿಲಿಯನೇರ್‌ಗಳ ಗ್ಯಾರೇಜ್‌ಗಳಲ್ಲಿ ಇದು ಅನಿವಾರ್ಯ ಕಾರುಗಳಲ್ಲಿ ಒಂದಾಗಿದೆ ಎಂದು ಹೇಳಲಾಗುತ್ತದೆ. ಈ ಮರ್ಸಿಡಿಸ್ ಎಎಂಜಿ 63 ಐಷಾರಾಮಿ ಎಸ್‍ಯುವಿಯು ಅನೇಕ ಸೆಲಬ್ರಿಟಿಗಳ ಮೆಚ್ಚಿನ ಆಯ್ಕೆಯಾಗಿದೆ. ಮರ್ಸಿಡಿಸ್ ಬೆಂಝ್ ಭಾರತ ಮಾತ್ರವಲ್ಲದೆ ಇಡೀ ವಿಶ್ವದಲ್ಲೇ ಅತಿ ದೊಡ್ಡ ಐಷಾರಾಮಿ ಕಾರು ಬ್ರಾಂಡ್‌ಗಳಲ್ಲಿ ಒಂದಾಗಿದೆ. ಅವರು ಇದೀಗ ಅನೇಕ ವಾಹನಗಳನ್ನು ಮಾರಾಟ ಮಾಡುತ್ತಿದ್ದಾರೆ.

ಮರ್ಸಿಡಿಸ್-ಎಎಂಜಿ ಜಿ63 ಎಸ್‍ಯುವಿಯಲ್ಲಿ 4.0 ಲೀಟರ್ ವಿ8 ಬಿಟುರ್ಬೊ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 585 ಬಿಎಚ್‌ಪಿ ಪವರ್ ಮತ್ತು 850 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಈ ಐಷಾರಾಮಿ ಎಸ್‍ಯುವಿಯು ವೃತ್ತಾಕಾರದ ಹೆಡ್‌ಲ್ಯಾಂಪ್‌ಗಳೊಂದಿಗೆ ಸಂಯೋಜಿತ ಎಲ್‌ಇಡಿ ಡಿಆರ್‌ಎಲ್‌ಗಳು, ಪನಾಮೆರಿಕಾನಾ ಗ್ರಿಲ್ ಮತ್ತು ನಾಲ್ಕು ದಶಕಗಳಿಂದ ಬದಲಾಯಿಸದ ಬಾಕ್ಸಿ ಸಿಲೂಯೆಟ್ ಅನ್ನು ಒಳಗೊಂಡಿದೆ.

Youtuber Sanju Sherawat Bought Mercedes G-63 And Shares His Experience

ಈ ಐಕಾನಿಕ್ ಆಫ್-ರೋಡರ್ ನಲ್ಲಿ ಸುರಕ್ಷತೆಗಾಗಿ 8 ಏರ್‍‍ಬ್ಯಾಗ್‍‍ಗಳು, ಇಎಸ್‍ಸಿ, ಎ‍ಬಿಎಸ್ ಜೊತೆ ಇ‍ಬಿಡಿ,ಬ್ರೇಕ್ ಅಸಿಸ್ಟ್, ಟ್ರ್ಯಾಕ್ಷನ್ ಕಂಟ್ರೋಲ್ ಮತ್ತು ಹಿಲ್-ಸ್ಟಾರ್ಟ್ ಅಸಿಸ್ಟ್ ಅನ್ನು ಹೊಂದಿದೆ. ಭಾರತದ ಕೆಲವು ಪ್ರಸಿದ್ದ ಸೆಲಬ್ರಿಟಿಗಳಾದ ಜಿಮ್ಮಿ ಶೆರ್ಗಿಲ್, ಸಾರಾ ಅಲಿ ಖಾನ್, ಹಾರ್ದಿಕ್ ಪಾಂಡೆ, ಅಖಿಲ್ ಅಕ್ಕಿನೇನಿ, ರಣಬೀರ್ ಕಪೂರ್, ಅನಂತ್ ಅಂಬಾನಿ, ಪವನ್ ಕಲ್ಯಾಣ್, ದುಲ್ಕರ್ ಸಲ್ಮಾನ್ ಮತ್ತು ಆಸಿಫ್ ಅಲಿ ಮರ್ಸಿಡಿಸ್ ಜಿ-ವ್ಯಾಗನ್ ಎಸ್‍ಯುವಿಯನ್ನು ಹೊಂದಿದ್ದಾರೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Thursday, February 29, 2024, 18:13 [IST]
English summary
Youtuber sanju sherawat bought mercedes g 63 and shares his experience
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+