ಹತ್ತು ಕೋಟಿ ರೂಪಾಯಿ ಬೆಲೆ ಬಾಳುವ ಕಾರಿನ ಪ್ರಯಾಣದ ಅನುಭವ ಬಿಚ್ಚಿಟ್ಟ ಯೂಟ್ಯೂಬರ್

ರೋಲ್ಸ್ ರಾಯ್ಸ್‌ ಕಂಪನಿಯ ಕಾರುಗಳು ವಿಶ್ವದ ಅತ್ಯುತ್ತಮ ಐಷಾರಾಮಿ ಕಾರುಗಳಲ್ಲಿ ಒಂದಾಗಿವೆ. ಕಂಪನಿಯು ಹಲವು ಸರಣಿಯ ಕಾರುಗಳನ್ನು ಮಾರಾಟ ಮಾಡುತ್ತದೆ. ರೋಲ್ಸ್ ರಾಯ್ಸ್ ಕಾರುಗಳು ಐಷಾರಾಮಿ ಫೀಚರ್'ಗಳನ್ನು ಹೊಂದಿರುವುದರಿಂದ ಶ್ರೀಮಂತರ ನೆಚ್ಚಿನ ಕಾರುಗಳಾಗಿವೆ.

ಹತ್ತು ಕೋಟಿ ರೂಪಾಯಿ ಬೆಲೆ ಬಾಳುವ ಕಾರಿನ ಪ್ರಯಾಣದ ಅನುಭವ ಬಿಚ್ಚಿಟ್ಟ ಯೂಟ್ಯೂಬರ್

ಕೆಲವು ಕಂಪನಿಗಳು ದುಬಾರಿ ಬೆಲೆಯ ರೋಲ್ಸ್ ರಾಯ್ಸ್ ಕಾರುಗಳನ್ನು ಬಾಡಿಗೆಗೆ ನೀಡುತ್ತವೆ. ಇದರಿಂದಾಗಿ ಹೆಚ್ಚು ಮೊತ್ತವನ್ನು ಖರ್ಚು ಮಾಡಲು ಸಿದ್ಧರಿರುವವರು ರೋಲ್ಸ್ ರಾಯ್ಸ್ ಕಾರುಗಳಲ್ಲಿ ಪ್ರಯಾಣಿಸಬಹುದು.

ಹತ್ತು ಕೋಟಿ ರೂಪಾಯಿ ಬೆಲೆ ಬಾಳುವ ಕಾರಿನ ಪ್ರಯಾಣದ ಅನುಭವ ಬಿಚ್ಚಿಟ್ಟ ಯೂಟ್ಯೂಬರ್

ಇದೇ ರೀತಿ ಮಧ್ಯಮ ವರ್ಗದ ಕುಟುಂಬಕ್ಕೆ ಸೇರಿದ ಯುವಕನೊಬ್ಬ ರೂ.9.50 ಕೋಟಿ ಬೆಲೆ ಬಾಳುವ ರೋಲ್ಸ್ ರಾಯ್ಸ್ ಬಾಡಿಗೆ ಕಾರಿನಲ್ಲಿ ಪ್ರಯಾಣಿಸಿದ್ದಾನೆ.ಆ ಕಾರಿನಲ್ಲಿ ಪ್ರಯಾಣಿಸುವಾಗ ತನಗೆ ಯಾವ ರೀತಿಯ ಅನುಭವವಾಯಿತು ಎಂಬುದನ್ನು ಆತ ವೀಡಿಯೊ ಮೂಲಕ ತಿಳಿಸಿದ್ದಾನೆ.

MOSTREAD: ವಿಮಾನಗಳು ಹಾರಾಟ ನಡೆಸುವಾಗ, ಲ್ಯಾಂಡಿಂಗ್ ಆಗುವಾಗ ಉಂಟಾಗುವ ಶಬ್ದಗಳಿವು

ಹತ್ತು ಕೋಟಿ ರೂಪಾಯಿ ಬೆಲೆ ಬಾಳುವ ಕಾರಿನ ಪ್ರಯಾಣದ ಅನುಭವ ಬಿಚ್ಚಿಟ್ಟ ಯೂಟ್ಯೂಬರ್

ಈ ಯುವಕ ಚಲಿಸಿದ ರೋಲ್ಸ್ ರಾಯ್ಸ್ ಫ್ಯಾಂಟಮ್ ಕಾರು ಪ್ರತಿ ಲೀಟರ್ ಪೆಟ್ರೋಲ್'ಗೆ ಸಿಟಿಯೊಳಗೆ ಕೇವಲ 2.5 ಕಿ.ಮೀಗಳಿಂದ 3 ಕಿ.ಮೀಗಳ ಮೈಲೇಜ್ ನೀಡಿದರೆ, ಹೆದ್ದಾರಿಗಳಲ್ಲಿ 4 ಕಿ.ಮೀನಿಂದ 5 ಕಿ.ಮೀಗಳವರೆಗೆ ಮೈಲೇಜ್ ನೀಡುತ್ತದೆ.

ಹತ್ತು ಕೋಟಿ ರೂಪಾಯಿ ಬೆಲೆ ಬಾಳುವ ಕಾರಿನ ಪ್ರಯಾಣದ ಅನುಭವ ಬಿಚ್ಚಿಟ್ಟ ಯೂಟ್ಯೂಬರ್

ಈ ಕಾರಿನಲ್ಲಿ ಸಾಮಾನ್ಯ ಪೆಟ್ರೋಲ್ ಬಳಸುವಂತಿಲ್ಲ. ಬದಲಿಗೆ ಆಕ್ಟೇನ್ 97 ಪೆಟ್ರೋಲ್ ಮಾತ್ರ ಬಳಸಬೇಕೆಂದು ಕಾರು ಚಾಲಕ ಹೇಳಿದ್ದಾನೆ. ಈ ಕಾರು ಪ್ರತಿ ಗಂಟೆಗೆ 80 ಕಿ.ಮೀ ವೇಗದಲ್ಲಿ ಚಲಿಸಿದರೂ ಸಹ ಕುಲುಕಿದ ಅನುಭವವಾಗುವುದಿಲ್ಲವೆಂದು ಕಾರಿನಲ್ಲಿ ಸಂಚರಿಸಿದ ಯುವಕ ಹೇಳಿದ್ದಾನೆ.

MOSTREAD: ಪ್ರವಾಸದ ಹುಚ್ಚಿಗಾಗಿ ವಾಹನ ಕದಿಯುತ್ತಿದ್ದ ಎಂಜಿನಿಯರಿಂಗ್ ಪದವೀಧರ ಕೊನೆಗೂ ಲಾಕ್

ಹತ್ತು ಕೋಟಿ ರೂಪಾಯಿ ಬೆಲೆ ಬಾಳುವ ಕಾರಿನ ಪ್ರಯಾಣದ ಅನುಭವ ಬಿಚ್ಚಿಟ್ಟ ಯೂಟ್ಯೂಬರ್

ಈ ಐಷಾರಾಮಿ ಕಾರಿನಲ್ಲಿದ್ದ ಯುವಕ ಈ ಕಾರಿನಲ್ಲಿರುವ ಮಸಾಜ್ ಸೌಲಭ್ಯಗಳಿಂದ ಆಕರ್ಷಿತನಾಗಿದ್ದಾಗಿ ತಿಳಿಸಿದ್ದಾನೆ. ರೋಲ್ಸ್ ರಾಯ್ಸ್ಕಾರುಗಳು ಹಲವಾರು ಐಷಾರಾಮಿ ಫೀಚರ್'ಗಳನ್ನು ಹೊಂದಿವೆ.

ಹತ್ತು ಕೋಟಿ ರೂಪಾಯಿ ಬೆಲೆ ಬಾಳುವ ಕಾರಿನ ಪ್ರಯಾಣದ ಅನುಭವ ಬಿಚ್ಚಿಟ್ಟ ಯೂಟ್ಯೂಬರ್

ರೋಲ್ಸ್ ರಾಯ್ಸ್ ಫ್ಯಾಂಟಮ್ ಕಾರಿನ ಸೀಟುಗಳು 10ಕ್ಕೂ ಹೆಚ್ಚು ವಿಭಿನ್ನ ರೀತಿಯ ಮಸಾಜ್ ಸೌಲಭ್ಯಗಳನ್ನು ನೀಡುತ್ತವೆ ಎಂಬುದು ಗಮನಾರ್ಹ. ಈ ಕಾರಿನಲ್ಲಿರುವ ವಿಂಡೋ ಕವರ್ ಫ್ಯಾಬ್ರಿಕ್ ಕವರ್'ಗಳ ಬೆಲೆ ರೂ.15 ಲಕ್ಷಗಳೆಂದು ಕಾರು ಚಾಲಕ ಮಾಹಿತಿ ನೀಡುತ್ತಾನೆ.

MOSTREAD: ಭಾರತದಲ್ಲಿ ಹೆಚ್ಚು ಕಾರು ಮಾರಾಟವಾಗುವ ಹತ್ತು ಪ್ರಮುಖ ನಗರಗಳಿವು

ಹತ್ತು ಕೋಟಿ ರೂಪಾಯಿ ಬೆಲೆ ಬಾಳುವ ಕಾರಿನ ಪ್ರಯಾಣದ ಅನುಭವ ಬಿಚ್ಚಿಟ್ಟ ಯೂಟ್ಯೂಬರ್

ಈ ಕಾರಿನ ಗೇರ್ ಬದಲಿಸುವ ಶಬ್ದವಾಗಲಿ ಅಥವಾ ಹೊರಗಿನ ಶಬ್ದವಾಗಲಿ ಕಾರಿನಲ್ಲಿರುವವರಿಗೆ ಕೇಳಿಸುವುದೇ ಇಲ್ಲ. ಡೋರುಗಳನ್ನು ತೆರೆಯುವ ಬಟನ್, ಕಾರಿನ ಸೀಲಿಂಗ್ ಮೇಲಿರುವ ಚಿಕ್ಕ ಸ್ಟಾರ್ ಲೈಟ್ ಹಾಗೂ ಗಾಜಿನಿಂದ ಮಾಡಿದ ಡ್ಯಾಶ್‌ಬೋರ್ಡ್ ಯುವಕನನ್ನು ಆಕರ್ಷಿಸುತ್ತವೆ.

ಹತ್ತು ಕೋಟಿ ರೂಪಾಯಿ ಬೆಲೆ ಬಾಳುವ ಕಾರಿನ ಪ್ರಯಾಣದ ಅನುಭವ ಬಿಚ್ಚಿಟ್ಟ ಯೂಟ್ಯೂಬರ್

ಈ ವೀಡಿಯೊ ನೋಡಿದಾಗ ಜೀವನದಲ್ಲಿ ಒಮ್ಮೆಯಾದರೂ ರೋಲ್ಸ್ ರಾಯ್ಸ್ ಫ್ಯಾಂಟಮ್ ಕಾರಿನಲ್ಲಿ ಸವಾರಿ ಮಾಡಬೇಕೆಂದು ಅನಿಸದೇ ಇರಲಾರದು. ನೀರಜ್ ಇಲಂಗೋವನ್ ಎಂಬ ಯೂಟ್ಯೂಬ್ ಚಾನೆಲ್'ನಲ್ಲಿ ಈ ವೀಡಿಯೊವನ್ನು ಅಪ್ ಲೋಡ್ ಮಾಡಲಾಗಿದ್ದು, ಇದುವರೆಗೂ 55 ಸಾವಿರಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ.

MOSTREAD: ಕರೋನಾ ಸೋಂಕಿತರ ಪಾಲಿಗೆ ದೇವರಾದ ಕರೋನಾ ಸೋಂಕಿನಿಂದ ಗುಣಮುಖರಾದ ವ್ಯಕ್ತಿ

ರೋಲ್ಸ್ ರಾಯ್ಸ್ ಕಾರುಗಳನ್ನು ಭಾರತದಲ್ಲಿರುವ ಕೆಲವು ಖಾಸಗಿ ಕಂಪನಿಗಳು ಬಾಡಿಗೆಗೆ ನೀಡುತ್ತವೆಯಾದರೂ ಅವುಗಳನ್ನು ಬಾಡಿಗೆಗೆ ಪಡೆಯುವುದು ತುಸು ತ್ರಾಸದಾಯಕವಾಗಿದೆ.

ಹತ್ತು ಕೋಟಿ ರೂಪಾಯಿ ಬೆಲೆ ಬಾಳುವ ಕಾರಿನ ಪ್ರಯಾಣದ ಅನುಭವ ಬಿಚ್ಚಿಟ್ಟ ಯೂಟ್ಯೂಬರ್

ರೋಲ್ಸ್ ರಾಯ್ಸ್ ಐಷಾರಾಮಿ ಕಾರುಗಳನ್ನು ಬಾಡಿಗೆಗೆ ಪಡೆಯಲು ಸುಮಾರು ಒಂದು ಮಿಲಿಯನ್ ಖರ್ಚು ಮಾಡಬೇಕಾಗುತ್ತದೆ. ಈ ಕಾರಣಕ್ಕೆ ಅವುಗಳನ್ನು ಬಾಡಿಗೆಗೆ ಪಡೆಯುವುದು ಅಸಾಧ್ಯದ ಕೆಲಸವಾಗಿದೆ.

ಚಿತ್ರಕೃಪೆ: ನೀರಜ್ ಎಲಂಗೋವನ್

Most Read Articles

Kannada
English summary
Youtuber shares his first time travel experience in Rolls Royce Phantom car. Read in Kannada.
Story first published: Tuesday, April 27, 2021, 12:24 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X