ಭಾರೀ ಪ್ರಮಾಣದಲ್ಲಿ ವಾಹನ ಮಾಡಿಫೈ ಮಾಡಿ ಬಂಧನಕ್ಕೊಳಗಾದ ಯೂಟ್ಯೂಬ್ ಚಾನೆಲ್ ಮಾಲೀಕರು

ಪ್ರತಿಯೊಬ್ಬ ವಾಹನ ಮಾಲೀಕರು ತಮ್ಮ ವಾಹನವನ್ನು ಸುಂದರವಾಗಿಟ್ಟು ಕೊಳ್ಳಬೇಕೆಂದು ಬಯಸುತ್ತಾರೆ. ಈ ಕಾರಣಕ್ಕೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ವಾಹನವನ್ನು ವಿಭಿನ್ನವಾಗಿಸಿಕೊಳ್ಳುವವರೂ ಇದ್ದಾರೆ. ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ಈ ಸಂಸ್ಕೃತಿ ಹೆಚ್ಚುತ್ತಿದೆ.

ಭಾರೀ ಪ್ರಮಾಣದಲ್ಲಿ ವಾಹನ ಮಾಡಿಫೈ ಮಾಡಿ ಬಂಧನಕ್ಕೊಳಗಾದ ಯೂಟ್ಯೂಬ್ ಚಾನೆಲ್ ಮಾಲೀಕರು

ಕಳೆದ ಕೆಲವು ವರ್ಷಗಳಿಂದ ವಾಹನಗಳ ನೈಜ ನೋಟವನ್ನು ಬದಲಿಸುವ ಘಟನೆಗಳು ಹೆಚ್ಚುತ್ತಿವೆ. ಆದರೆ ಈ ರೀತಿ ಮಾಡುವುದು ಭಾರತೀಯ ಮೋಟಾರು ವಾಹನಗಳ ನಿಯಮಗಳ ಅಡಿಯಲ್ಲಿ ಕಾನೂನುಬಾಹಿರ ಕೃತ್ಯವಾಗಿದೆ. ಫೋರ್ಸ್ ಟ್ರಾವೆಲರ್ ವ್ಯಾನ್ ಅನ್ನು ಮಾಡಿಫೈಗೊಳಿಸಿದ ವಾಹನ ಮಾಲೀಕರನ್ನು ಕೇರಳದಲ್ಲಿ ಬಂಧಿಸಲಾಗಿದೆ.

ಭಾರೀ ಪ್ರಮಾಣದಲ್ಲಿ ವಾಹನ ಮಾಡಿಫೈ ಮಾಡಿ ಬಂಧನಕ್ಕೊಳಗಾದ ಯೂಟ್ಯೂಬ್ ಚಾನೆಲ್ ಮಾಲೀಕರು

ಎಬಿನ್ ಹಾಗೂ ವಿಪಿನ್ ಎಂಬುವವರನ್ನು ವಾಹನವನ್ನು ಮಾರ್ಪಡಿಸಿದ ಕಾರಣಕ್ಕೆ ಕೇರಳ ಸಾರಿಗೆ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ. ಇವರಿಬ್ಬರು ಯೂಟ್ಯೂಬ್ ಚಾನೆಲ್'ವೊಂದನ್ನು ನಡೆಸುತ್ತಿದ್ದಾರೆ. ಅವರು ಇ ಬುಲ್ ಜೆಟ್ ಎಂಬ ಚಾನೆಲ್ ಅನ್ನು ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಭಾರೀ ಪ್ರಮಾಣದಲ್ಲಿ ವಾಹನ ಮಾಡಿಫೈ ಮಾಡಿ ಬಂಧನಕ್ಕೊಳಗಾದ ಯೂಟ್ಯೂಬ್ ಚಾನೆಲ್ ಮಾಲೀಕರು

ಇದೊಂದು ಟ್ರಾವೆಲ್ ಚಾನೆಲ್ ಆಗಿದ್ದು, 1.7 ಮಿಲಿಯನ್ ಚಂದಾದಾರರನ್ನು ಹೊಂದಿದೆ. ಎಪಿನ್ ಹಾಗೂ ವಿಪಿನ್ ತಮ್ಮ ಚಾನೆಲ್‌ನಲ್ಲಿ ಪ್ರವಾಸದ ವೀಡಿಯೊಗಳನ್ನು ಅಪ್ ಲೋಡ್ ಮಾಡಲು ಫೋರ್ಸ್ ಟ್ರಾವೆಲರ್ ವಾಹನವನ್ನು ಬಳಸುತ್ತಿದ್ದಾರೆ.

ಭಾರೀ ಪ್ರಮಾಣದಲ್ಲಿ ವಾಹನ ಮಾಡಿಫೈ ಮಾಡಿ ಬಂಧನಕ್ಕೊಳಗಾದ ಯೂಟ್ಯೂಬ್ ಚಾನೆಲ್ ಮಾಲೀಕರು

ಇದಕ್ಕೂ ಮುನ್ನ ಅವರು ಮಾರುತಿ ಓಮ್ನಿ ಕಾರ್ ಅನ್ನು ಮಾಡಿಫೈಗೊಳಿಸಿದ್ದರು ಎಂದು ಹೇಳಲಾಗಿದೆ. ತಮ್ಮ ಚಾನೆಲ್'ನ ಫಾಲೋವರ್'ಗಳನ್ನು ಮೆಚ್ಚಿಸುವ ಸಲುವಾಗಿ ಅವರು ಇತ್ತೀಚೆಗೆ ಫೋರ್ಸ್ ಟ್ರಾವೆಲರ್ ವಾಹನವನ್ನು ವಿಶಿಷ್ಟವಾದ ರೂಪದಲ್ಲಿ ಮಾಡಿಫೈಗೊಳಿಸಿದ್ದಾರೆ.

ಭಾರೀ ಪ್ರಮಾಣದಲ್ಲಿ ವಾಹನ ಮಾಡಿಫೈ ಮಾಡಿ ಬಂಧನಕ್ಕೊಳಗಾದ ಯೂಟ್ಯೂಬ್ ಚಾನೆಲ್ ಮಾಲೀಕರು

ಅವರು ಫೋರ್ಸ್ ಟ್ರಾವೆಲರ್ ವಾಹನದ ಬಣ್ಣ ಹಾಗೂ ಎಕ್ಸ್ ಟಿರಿಯರ್'ನಲ್ಲಿ ಭಾರೀ ಬದಲಾವಣೆ ಮಾಡಿದ್ದಾರೆ. ಬಳಿಕ ಅವರು ಯೂಟ್ಯೂಬ್ ಚಾನೆಲ್‌ನ ಲೋಗೋವನ್ನು ಫೋರ್ಸ್ ಟ್ರಾವೆಲರ್ ವಾಹನದಲ್ಲಿ ಅಳವಡಿಸಿದ್ದಾರೆ.

ಭಾರೀ ಪ್ರಮಾಣದಲ್ಲಿ ವಾಹನ ಮಾಡಿಫೈ ಮಾಡಿ ಬಂಧನಕ್ಕೊಳಗಾದ ಯೂಟ್ಯೂಬ್ ಚಾನೆಲ್ ಮಾಲೀಕರು

ಇದರ ಜೊತೆಗೆ ವಾಹನದ ಹೊರಭಾಗದಲ್ಲಿ ಸಾಮಾಜಿಕ ಜಾಲತಾಣಗಳ ಚಿಹ್ನೆ, ನರಿಯ ಚಿತ್ರ ಹಾಗೂ ಅತ್ಯಂತ ತೀಕ್ಷ್ಣವಾದ ಬಣ್ಣಗಳನ್ನು ಹೊಂದಿರುವ ಸ್ಟಿಕ್ಕರ್‌ಗಳನ್ನು ಅವರು ಅಳವಡಿಸಿದ್ದಾರೆ. ಇದರ ಜೊತೆಗೆ ನಿಷೇಧಿಸಲಾಗಿರುವ ಆಫ್ಟರ್ ಮಾರ್ಕೆಟ್ ಹೆಡ್ ಲ್ಯಾಂಪ್ ಹಾಗೂ ಟೇಲ್ ಲೈಟ್ ಗಳನ್ನು ಬಳಸಿದ್ದಾರೆ.

ಭಾರೀ ಪ್ರಮಾಣದಲ್ಲಿ ವಾಹನ ಮಾಡಿಫೈ ಮಾಡಿ ಬಂಧನಕ್ಕೊಳಗಾದ ಯೂಟ್ಯೂಬ್ ಚಾನೆಲ್ ಮಾಲೀಕರು

ಇಷ್ಟು ಭಾರೀ ಪ್ರಮಾಣದ ಬದಲಾವಣೆಗಳನ್ನು ಮಾಡಿರುವ ಕಾರಣಕ್ಕೆ ಕೇರಳ ಮೋಟಾರು ವಾಹನ ಇಲಾಖೆಯು ಈ ವಾಹನ ಮಾಲೀಕರನ್ನು ಪೊಲೀಸ್ ಠಾಣೆಗೆ ಕರೆದೊಯ್ದಿದೆ. ಫೋರ್ಸ್ ಟ್ರಾವೆಲರ್'ನಲ್ಲಿ ಇನ್ನೂ ಹಲವು ಆಫ್ಟರ್ ಮಾರ್ಕೆಟ್ ಉಪಕರಣಗಳನ್ನು ಬಳಸಿದ್ದಾರೆ ಎಂದು ತಿಳಿದು ಬಂದಿದೆ.

ಭಾರೀ ಪ್ರಮಾಣದಲ್ಲಿ ವಾಹನ ಮಾಡಿಫೈ ಮಾಡಿ ಬಂಧನಕ್ಕೊಳಗಾದ ಯೂಟ್ಯೂಬ್ ಚಾನೆಲ್ ಮಾಲೀಕರು

ಈ ಫೋರ್ಸ್ ಟ್ರಾವೆಲರ್'ನಲ್ಲಿ ನಾಲ್ಕು ಎಲೆಕ್ಟ್ರಿಕ್ ಲೈಟ್ ಹಾಗೂ ಎಲ್ಇಡಿ ಲೈಟ್ ಬಾರ್ ಗಳನ್ನು ರೂಫ್ ಮೇಲೆ ಬಳಸಲಾಗಿದೆ. ಇವುಗಳ ಬಳಕೆಯನ್ನು ನಿಷೇಧಿಸಲಾಗಿದೆ ಎಂಬುದು ಗಮನಾರ್ಹ. ಈ ಎಲೆಕ್ಟ್ರಿಕ್ ದೀಪಗಳನ್ನು ಆನ್ ಮಾಡುವುದರಿಂದ ಎದುರುಗಡೆಯಿಂದ ಬರುವ ವಾಹನ ಸವಾರರ ಕಣ್ಣಿಗೆ ಸಮಸ್ಯೆ ಉಂಟಾಗಬಹುದು.

ಈ ಲೈಟ್'ಗಳು ಹೆಚ್ಚು ಬೆಳಕನ್ನು ಹೊರಸೂಸಬಲ್ಲವು. ಈ ಕಾರಣಕ್ಕಾಗಿಯೇ ಭಾರತೀಯ ಮೋಟಾರು ವಾಹನ ಕಾಯ್ದೆಯ ನಿಯಮಗಳು ಈ ಎಲೆಕ್ಟ್ರಿಕ್ ದೀಪಗಳನ್ನು ಬಳಸಬಾರದು ಎಂದು ಹೇಳುತ್ತವೆ. ಇದರ ಜೊತೆಗೆ ಈ ವಾಹನದ ಟಯರ್ ಹಾಗೂ ಬಾಡಿಯಲ್ಲಿ ಗಮನ ಸೆಳೆಯುವ ಎಲ್ಇಡಿ ಸೀರಿಯಲ್ ಲೈಟ್'ಗಳನ್ನು ಅಳವಡಿಸಲಾಗಿದೆ.

ಫೋರ್ಸ್ ವಾಹನದ ಒಳಭಾಗ ಹಾಗೂ ಹೊರಭಾಗದಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ. ಸಣ್ಣ ಟಿವಿ ಸೆಟ್ ಹಾಗೂ ಆಕರ್ಷಕವಾದ ಸೋಫಾದಂತಹ ವಿವಿಧ ವಿಶೇಷತೆಗಳನ್ನು ಸೇರಿಸಲಾಗಿದೆ. ಒಟ್ಟಾರೆಯಾಗಿ ಈ ವಾಹನದ ಇಂಟಿರಿಯರ್ ಅನ್ನು ಚಲಿಸುವ ಮನೆಯಂತೆ ಮಾಡಿಫೈ ಮಾಡಲಾಗಿದೆ.

ಎಬಿನ್ ಹಾಗೂ ವಿಪಿನ್ ಈ ವಾಹನವನ್ನು ದೂರದ ಪ್ರಯಾಣಕ್ಕೆ ಅನುಕೂಲವಾಗುವಂತೆ ಮಾಡಿಫೈ ಮಾಡಿದ್ದಾರೆ. ವಾಹನದ ವಿನ್ಯಾಸ ಬದಲಾಗಿದೆ ಎಂಬ ಕಾರಣಕ್ಕೆ ಕೇರಳ ಮೋಟಾರ್ ವಾಹನ ಇಲಾಖೆ ಈ ಇಬ್ಬರು ಯುಟ್ಯೂಬರ್‌ಗಳ ವಿರುದ್ಧ ಕ್ರಮ ಕೈಗೊಂಡಿದೆ.

ಭಾರೀ ಪ್ರಮಾಣದಲ್ಲಿ ವಾಹನ ಮಾಡಿಫೈ ಮಾಡಿ ಬಂಧನಕ್ಕೊಳಗಾದ ಯೂಟ್ಯೂಬ್ ಚಾನೆಲ್ ಮಾಲೀಕರು

ಕೇರಳ ಮೋಟಾರು ವಾಹನ ಇಲಾಖೆ ಕಾನೂನು ಬಾಹಿರವಾಗಿ ವಾಹನ ಮಾಡಿಫೈ ಮಾಡಿರುವವರ ವಿರುದ್ಧ ಕ್ರಮ ಕೈಗೊಳ್ಳುತ್ತಿರುವುದು ಇದೇ ಮೊದಲಲ್ಲ. ಇತ್ತೀಚೆಗೆ ಕೇರಳ ಪೊಲೀಸರು ವಾಹನಗಳನ್ನು ಮಾಡಿಫೈಗೊಳಿಸಿದ್ದ ಯುವಕರನ್ನು ಬಂಧಿಸಿ ಅವರ ವಾಹನಗಳನ್ನು ವಶಕ್ಕೆ ಪಡೆದಿದ್ದರು.

ಪರವಾನಿಗೆ ಅವಧಿ ಮುಗಿದಿರುವ ವಾಹನಗಳ ವಿರುದ್ಧವೂ ಆರ್‌ಟಿಒ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದರು. ವಾಹನಗಳ ದಾಖಲೆಗಳನ್ನು ತಿದ್ದಿದ ಆರೋಪದ ಮೇಲೆ ಕೇರಳ ಮೋಟಾರು ವಾಹನ ಇಲಾಖೆ ಕೆಲವು ಯುವಕರ ವಿರುದ್ಧ ಕ್ರಮ ಕೈಗೊಂಡಿತ್ತು.

ಕೇರಳದಲ್ಲಿ ಪೊಲೀಸರು ಹಾಗೂ ಸಾರಿಗೆ ಇಲಾಖೆ ಅಧಿಕಾರಿಗಳು ಮಾಡಿಫೈಗೊಂಡ ವಾಹನಗಳನ್ನು ವಶಕ್ಕೆ ಪಡೆಯುತ್ತಿರುವ ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಕೇರಳದಲ್ಲಿ ಮಾತ್ರವಲ್ಲದೇ ಭಾರತದ ಹಲವು ರಾಜ್ಯಗಳಲ್ಲಿ ವಾಹನಗಳನ್ನು ಆಕ್ರಮವಾಗಿ ಮಾಡಿಫೈ ಮಾಡಿರುವವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ. ಕೆಲವೊಮ್ಮೆ ಸ್ಥಳದಲ್ಲಿಯೇ ದಂಡ ವಿಧಿಸಿದರೆ, ಇನ್ನೂ ಕೆಲವೊಮ್ಮೆ ವಾಹನಗಳನ್ನು ವಶಕ್ಕೆ ಪಡೆಯಲಾಗುತ್ತದೆ.

ಇತ್ತೀಚಿಗೆಮುಂಬೈ ಪೊಲೀಸರು ಮಿಲಿಟರಿ ಕಾರಿನಂತೆ ಮಾಡಿಫೈಗೊಂಡಿದ್ದ ಮಹೀಂದ್ರಾ ಸ್ಕಾರ್ಪಿಯೋ ಕಾರ್ ಅನ್ನು ವಶಕ್ಕೆ ಪಡೆದಿದ್ದರು.ಮಿಲಿಟರಿ ಬಣ್ಣ ಹಾಗೂ ವಿನ್ಯಾಸವನ್ನು ಭಾರತೀಯ ಸೇನೆಯನ್ನು ಹೊರತುಪಡಿಸಿ ಬೇರೆ ಯಾವುದೇ ಕಂಪನಿಯಾಗಲಿ ಅಥವಾ ವ್ಯಕ್ತಿಯಾಗಲಿ ಬಳಸುವಂತಿಲ್ಲವೆಂಬ ನಿಯಮವಿದೆ.

Most Read Articles

Kannada
English summary
Youtubers arrested for modifying force traveller video details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X