zodiac car: ನಿಮ್ಮ ಜನ್ಮರಾಶಿಗೆ ಸೂಕ್ತ ಬಣ್ಣದ ಕಾರು ಯಾವುದು?

ಪ್ರತಿಯೊಂದು ವಸ್ತುವನ್ನು ಖರೀದಿಸುವ ಮುನ್ನ ತಮ್ಮ ರಾಶಿಗೆ ಆ ವಸ್ತು ಆಗಿ ಬರುತ್ತದೆಯೇ ಎಂದು ತಿಳಿದುಕೊಳ್ಳುವ ಪರಿಪಾಠ ಭಾರತೀಯರು ಮೊದಲಿನಿಂದಲೂ ನೆಡೆಸಿಕೊಂಡು ಬರುತ್ತಿದ್ದಾರೆ. ಅದೇ ರೀತಿ ಕಾರು ಖರೀದಿ ಮಾಡುವ ಮುನ್ನ ತಮಗೆ ಈ ಬಣ್ಣದ ಕಾರು ಆಗಿ ಬರಲಿದೆಯೇ ಎಂಬುದನ್ನು ತಿಳಿಯಲು ಈ ಕೆಳಗೆ ತಿಳಿಸಿಕೊಟ್ಟಿದ್ದೇವೆ.

ಮೇಷ ರಾಶಿ: ಮೇಷ ರಾಶಿಯವರಿಗೆ ಕುಜ ಅಧಿಪತಿಯಾಗಿರುವುದರಿಂದ ಕಡು ಕೆಂಪು ಹಾಗೂ ಬಿಳಿ ಬಣ್ಣ ಹೆಚ್ಚು ಹೊಂದಿಕೆಯಾಗುತ್ತದೆ. ಸೌಭಾಗ್ಯದ ಸಂಕೇತವಾದ ಕೆಂಪು ಬಣ್ಣದ ಕಾರುಗಳನ್ನು ಬಳಕೆ ಮಾಡುವುದು ಹೆಚ್ಚು ಸೂಕ್ತ. ಮೇಕೆಯ ಚಿಹ್ನೆ ಹೊಂದಿರುವ ಮೇಶ ರಾಶಿ ಸಾಮರಸ್ಯ ಮತ್ತು ಶಕ್ತಿಯ ಸಂಕೇತವಾಗಿದ್ದು, ಎಲ್ಲಾ ರಂಗಗಳಲ್ಲಿ ಬೆಳವಣಿಗೆಯಾಗಿ ಲಾಭ ಕೂಡಿ ಬರುತ್ತದೆ.

zodiac-car-which-colour-right-for-zodiac-sign
ವೃಷಭ ರಾಶಿ: ವೃಷಭ ರಾಶಿಗೆ ಶುಕ್ರ ಅಧಿಪತಿಯಾಗಿರುವುದರಿಂದ ಇದರ ಬಣ್ಣ ಬಿಳಿ ಹಾಗೂ ಗುಲಾಬಿ. ಎಲ್ಲರನ್ನು ಬಹುಬೇಗ ಆಕರ್ಷಿಸುವ ಗುಣವನ್ನು ಹೊಂದಿರುವ ಈ ರಾಶಿಯವರು ಸ್ತ್ರೀಯರನ್ನು ಆಕರ್ಷಿಸುವ ಗುಣವನ್ನು ಹೊಂದಿದ್ದು, ಗುಲಾಬಿ ಬಣ್ಣದ ಕಾರು ಹೆಚ್ಚು ಸೂಕ್ತವಾಗಿರಲಿದೆ. ಮಾರುಕಟ್ಟೆಯಲ್ಲಿ ಗುಲಾಬಿ ಬಣ್ಣದ ಕಾರುಗಳು ವಿರಳವಾಗಿ ಸಿಕ್ಕರು ತುಂಬಾ ಆಕರ್ಷಕವಾಗಿರುತ್ತವೆ.

ಮಿಥುನ ರಾಶಿ: ಮಿಥುನ ರಾಶಿಯ ಅಧಿಪತಿ ಬುಧ. ಮಾನವೀಯತೆಯಲ್ಲಿ ಅಚಲ ನಂಬಿಕೆಯುಳ್ಳ ಈ ರಾಶಿಯವರು ವ್ಯಾಪರೋದ್ಯಮದಗಳಲ್ಲಿ ಬೆಳವಣಿಗೆಗಾಗಿ ಶ್ರಮಿಸುತ್ತಾರೆ. ವಾಕ್ಚಾತುರ್ಯ ಹೊಂದಿರುವ ಇವರಿಗೆ ಸೂಕ್ತವಾದ ಬಣ್ಣಗಳಲ್ಲಿ ಪ್ರಮುಖವಾಗಿ ಹಳದಿ ಬಣ್ಣಕ್ಕೆ ಮೊದಲ ಆದ್ಯತೆ ನೀಡಬೇಕು ನಂತರ ಗುಲಾಬಿ ಮತ್ತು ಹಸಿರು ಬಣ್ಣಗಳಿವೆ.

zodiac-car-which-colour-right-for-zodiac-sign
ಕಟಕ ರಾಶಿ: ಈ ರಾಶಿಯವರು ಹೊರಗೆ ಒರಟರಂತೆ ಕಂಡರೂ ಇವರ ಮನಸ್ಸು ಮೃದುವಾಗಿರುತ್ತಾರೆ. ಇವರು ನಿಷ್ಠೆ, ಅತೀ ಭಾವುಕತೆ ಹಾಗೂ ಕಾಳಜಿಗೆ ಹೆಸರುವಾಸಿ. ಇಷ್ಟವಾದರೆ ಭಾವುಕ ಮತ್ತು ಅತಿಯಾಗಿ ಹಚ್ಚಿಕೊಳ್ಳುವಂತಹ ಮನಃಸ್ಥಿತಿ ಹೊಂದಿರುವ ಇವರಿಗೆ ನೀಲಿ, ಬಿಳಿ ಮತ್ತು ಹಸಿರು ಬಣ್ಣದ ಕಾರುಗಳು ಸೂಕ್ತವಾಗಿರುತ್ತವೆ.

ಸಿಂಹ ರಾಶಿ: ಸೂರ್ಯನ ತೇಜಸ್ಸು ಮುಖದಲ್ಲೇ ಹೊಳೆಯುವ ಇವರು ಕೋಪಗೊಂಡರೆ ಉಗ್ರ ಸ್ವಭಾವದವರಾಗುತ್ತಾರೆ. ಸೂರ್ಯ ದೇವ ಅಧಿಪತಿಯಾಗಿರುವ ಸಿಂಹ ರಾಶಿಯವರಿಗೆ ಕಿತ್ತಳೆ, ಹಳದಿ ಹಾಗೂ ಕೆಂಪು ಬಣ್ಣದ ಕಾರುಗಳು ಹೊಂದಿಕೆಯಾಗುತ್ತವೆ. ಸಿಂಹ ರಾಶಿಯವರು ಸಾಮಾನ್ಯವಾಗಿ ಆಡಂಬರ ಹಾಗೂ ಐಷಾರಾಮಿ ಜೀವನ ಶೈಲಿಯನ್ನು ಇಷ್ಟಪಡುತ್ತಾರೆ.

zodiac-car-which-colour-right-for-zodiac-sign

ಕನ್ಯಾ ರಾಶಿ: ಈ ರಾಶಿಯವರಿಗೆ ಬುಧ ಅಧಿಪತಿಯಾಗಿರುವ ಕಾರಣ ವ್ಯವಸ್ಥಿತ ಜೀವನವನ್ನು ಇಷ್ಟಪಡುತ್ತಾರೆ. ಪಾಲನೆ ಪೋಷಣೆ, ತಾಂತ್ರಿಕ, ಶಿಲ್ಪಕಲೆಗಳಲ್ಲಿ ಹೆಚ್ಚು ಸಾಮರ್ಥ್ಯವನ್ನು ಹೊಂದಿರುವ ಕನ್ಯಾ ರಾಶಿಯವರಿಗೆ ನೀಲಿ ಅಥವಾ ಹಸಿರು ಬಣ್ಣಗಳು ಹೆಚ್ಚು ಹೊಂದಿಕೆಯಾಗುತ್ತವೆ. ಕನ್ಯಾ ರಾಶಿಯವರಿಗೆ ಹಸಿರು ಬಣ್ಣ ಬೇಗನೇ ಆಕರ್ಷಿತವಾಗುತ್ತದೆ.

ತುಲಾ ರಾಶಿ: ಸಾಮರಸ್ಯದ ಸಂಕೇತವಾಗಿರುವ ತುಲಾ ರಾಶಿಗೆ ಅಧಿಪತಿ ಶುಕ್ರ. ಅತ್ಯುತ್ತಮ ಜ್ಞಾಪಕ ಶಕ್ತಿ, ವಿದ್ಯಾವಂತರು, ಗುಣವಂತರು ಆಗಿರುವ ಇವರು ನಂಬಿಕೆಯ ಮೇಲೆ ಪ್ರೀತಿ, ವಿಶ್ವಾಸ ವ್ಯಕ್ತಪಡಿಸುತ್ತಾರೆ. ನೀಲಕಾಯದವರೂ ಆಗಿರುವ ಇವರಿಗೆ ನೀಲಿ ಬಣ್ಣದ ಕಾರುಗಳು ಹೆಚ್ಚು ಸೂಕ್ತವೆನಿಸುತ್ತವೆ. ತುಲಾ ರಾಶಿಯವರು ಸಮಾಜ ಹಿತ, ಶಾಂತಿ ಪ್ರಿಯರು, ಜಾಣರಾಗಿದ್ದಾರೆ.

zodiac-car-which-colour-right-for-zodiac-sign
ವೃಶ್ಚಿಕ ರಾಶಿ: ಚಿಂತನಾ ಶಕ್ತಿಯ ಚೇಳು ಸಂಕೇತವನ್ನು ಹೊಂದಿರುವ ವೃಶ್ಚಿಕ ರಾಶಿಯ ಅಧಿಪತಿ ಅಂಗಾರಕ ಅಥವಾ ಮಂಗಳ. ಚುರುಕು ಬುದ್ಧಿ, ಸ್ವಾವಲಂಬಿತನ, ಹಠ ಸ್ವಭಾವಧಾರಿಯಾದ ವೃಶ್ಚಿಕ ರಾಶಿಯವರು ಮನಸಾಕ್ಷಿಗೆ ವಿರುದ್ಧವಾಗಿ ಎಂದು ನಡೆಯುವುದಿಲ್ಲ. ಇವರಿಗೆ ಕಡು ಕೆಂಪು, ಕಿತ್ತಳೆ ಹಾಗೂ ಕಪ್ಪು ಬಣ್ಣಗಳ ಕಾರುಗಳು ಹೆಚ್ಚು ಸೂಕ್ತವಾಗಿರುತ್ತದೆ.

ಧನು ರಾಶಿ: ಸಾಹಸದಲ್ಲಿ ಆಸಕ್ತಿ ಹೊಂದಿರುವ ಧನು ರಾಶಿಯವರು ಲಕ್ಷಣಯುಕ್ತ ಶರೀರ, ಸುಂದರ ದೇಹಕಾಯವನ್ನು ಹೊಂದಿರುತ್ತಾರೆ. ಧನು ರಾಶಿಗೆ ಗುರು ಅಧಿಪತಿಯಾಗಿದ್ದು, ಹಳದಿ ಬಣ್ಣದ ಕಾರುಗಳು ಸೂಕ್ತವಾಗಿರುತ್ತವೆ. ಧನು ರಾಶಿ ವಿಧಿಯ ಪ್ರತಿಕೂಲ ಪರಿಸ್ಥಿತಿಯನ್ನು ಎದುರಿಸುವ ಶಕ್ತಿ ಹೊಂದಿರುತ್ತಾರೆ. ಅಲ್ಲದೆ ಸತ್ಯ ನುಡಿಯುವುದು, ಆಧಾತ್ಮ ಪ್ರವೃತ್ತಿಯಲ್ಲಿ ನಂಬಿಕೆಯುಳ್ಳವರಾಗಿದ್ದಾರೆ.

zodiac-car-which-colour-right-for-zodiac-sign

ಮಕರ ರಾಶಿ: ಮಕರ ರಾಶಿಯವರು ಸನ್ನಿವೇಶಗಳಿಂದ ಪ್ರೇರಿತರಾಗುತ್ತಾರೆ. ಹಾಗಾಗಿ ದೀರ್ಘ ಬಾಳಿಕೆಯ ಬಣ್ಣದ ಬಳಕೆ ಬೇಡ. ಬದಲಾಗಿ ಕಾಲ ಕಾಲಕ್ಕೆ ಬಣ್ಣಗಳ ಬದಲಿಕೆ ಅಗತ್ಯ. ಮಕರ ರಾಶಿಯವರಿಗೆ ಕಪ್ಪು ಬಣ್ಣದ ಕಾರುಗಳು ಹೆಚ್ಚು ಸೂಕ್ತವೆನಿಸಲಿದೆ. ಮಕರ ರಾಶಿ ಶನಿ ದೇವರಿಗೆ ಕಪ್ಪು ಬಣ್ಣ ಬಲು ಪ್ರಿಯ. ಹಾಗಾಗಿ ಬಿಳಿ ಬಣ್ಣವನ್ನು ಉಪಯೋಗಿಸಬಾರದು. ಏಕೆಂದರೆ ಶನಿಗೆ ಚಂದ್ರ ಶತ್ರು.

ಕುಂಭ ರಾಶಿ: ಶನಿ ಅಧಿಪತಿಯಾಗಿರುವ ಕುಂಭ ರಾಶಿಯವರು ಸಹ ತಮ್ಮದೇ ಹಾದಿಯಲ್ಲಿ ಜೀವನ ನಡೆಸಲು ಬಯಸುತ್ತಾರೆ. ನೇರಳೆ, ತಿಳಿ ನೀಲಿ ಬಣ್ಣದ ಕಾರುಗಳು ಇವರಿಗೆ ಹೆಚ್ಚು ಸೂಕ್ತವಾಗಿರುತ್ತವೆ. ಈ ರಾಶಿಯವರಿಗೆ ಅನಗತ್ಯ ಅಲೆದಾಟದಿಂದ ದೇಹಾಯಾಸ, ಸಂಪತ್ತು ನಷ್ಟ ಹಾಗೂ ಮಾನಸಿಕ ನೆಮ್ಮದ್ದಿ ಕಳಕೊಳ್ಳುವ ಭೀತಿಯಿರುತ್ತದೆ.

zodiac-car-which-colour-right-for-zodiac-sign
ಮೀನ ರಾಶಿ: ರೇವತಿ ಗುರು ಅಧಿಪತಿಯಾಗಿರುವ ಮೀನಾ ರಾಶಿಯವರಿಗೆ ಹೆತ್ತವರು, ಗುರು ಹಿರಿಯರಲ್ಲಿ ಅತ್ಯಂತ ಭಕ್ತಿಯುಳ್ಳವರಾಗಿರುವರು. ಸಮುದ್ರ ನೀಲಿ, ತಿಳಿ ಹಳದಿ, ಹಸಿರು ಹಾಗೂ ಬಿಳಿ ಬಣ್ಣಗಳ ಕಾರುಗಳು ಮೀನ ರಾಶಿಗೆ ಹೆಚ್ಚು ಹೊಂದಿಕೆಯಾಗುತ್ತವೆ. ಮೀನ ರಾಶಿಯವರು ಸಾಮಾಜಿಕ ಕೆಲಸ ಕಾರ್ಯಗಳಲ್ಲಿ ಹೆಚ್ಚಿನ ಆಸಕ್ತಿ ಹೊಂದಿರುತ್ತಾರೆ.

ಪ್ರತಿ ಬಾರಿಯೂ ಜ್ಯೋತಿಷ್ಯ ಶಾಸ್ತ್ರ ನಿಜವಾಗಬೇಕೆಂದಿಲ್ಲ. ಹಾಗಾಗಿ ಜ್ಯೋತಿಷ್ಯ ಶಾಸ್ತ್ರದ ಬಗ್ಗೆ ನಿಮ್ಮ ಬಹುಮೂಲ್ಯ ಅನಿಸಿಕೆಗಳನ್ನು ನಮ್ಮ ಜೊತೆಗೂ ಹಂಚಿಕೊಳ್ಳಲು ಮರೆಯದಿರಿ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ.

Article Published On: Wednesday, August 2, 2023, 16:17 [IST]
English summary
Zodiac car which colour right for zodiac sign
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+