ಮತ್ತೊಂದು ದುಬಾರಿ ಕಾರು ಖರೀದಿಸಿದ ಜೊಮಾಟೋ ಗಾಡ್ ಫಾದರ್... ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
ಜೊಮಾಟೊ (Zomato) ಸಂಸ್ಥಾಪಕ ದೀಪಿಂದರ್ ಗೋಯಲ್ ಮತ್ತೊಂದು ದುಬಾರಿ ಹೊಸ ಆಸ್ಟನ್ ಮಾರ್ಟಿನ್ ವಾಂಟೇಜ್ ಕಾರನ್ನು ಖರೀದಿಸಿದ್ದಾರೆ. ಅದೇ ಕಂಪನಿಯ ಎರಡನೇ ಕಾರು ಇದಾಗಿದ್ದು, ಕಪ್ಪು ಬಣ್ಣದಲ್ಲಿ ಖರೀದಿಸಿದ ಭಾರತದ ಮೊದಲ ಆಸ್ಟನ್ ಮಾರ್ಟಿನ್ ವಾಂಟೇಜ್ ಆಗಿದೆ. ಈ ವರ್ಷದ ಮಾರ್ಚ್‌ಲ್ಲಿ ಅವರು ಆಸ್ಟನ್ ಮಾರ್ಟಿನ್ ಡಿಬಿ12 ಜಿಟಿ ಕಾರನ್ನು ಖರೀದಿಸಿದ್ದರು. ಇದೀಗ ಆಸ್ಟನ್ ಮಾರ್ಟಿನ್ ಕಂಪನಿ ಕಳೆದ ಆಗಸ್ಟ್ ತಿಂಗಳಿನಲ್ಲಿ ಬಿಡುಗಡೆ ಮಾಡಿರುವ ಹೊಸ ವಾಂಟೇಜ್ ಅನ್ನು ಕಾರನ್ನು ಖರೀದಿಸಿದ್ದಾರೆ. ಹೊಸ ಆಸ್ಟನ್ ಮಾರ್ಟಿನ್ ವಾಂಟೇಜ್ ಬೆಲೆಯು ಎಕ್ಸ್ ಶೋರೂಂ ದರದಂತೆ 3.99 ಕೋಟಿಗಳಿಂದ ಪ್ರಾರಂಭವಾಗುತ್ತದೆ.
ಹೊಸ ಆಸ್ಟನ್ ಮಾರ್ಟಿನ್ ವಾಂಟೇಜ್ ವಿಶೇಷತೆಗಳು: ಇದು 3 ಡಿ ಲೈವ್ ಮ್ಯಾಪಿಂಗ್, ಬೋವರ್ಸ್ ಮತ್ತು ವಿಲ್ಕಿನ್ಸ್ ಮೂಲದ 15-ಸ್ಪೀಕರ್ ಆಡಿಯೊ ಸಿಸ್ಟಮ್, ಹೊಸ ಯುಐ, ವೈರ್‌ಲೆಸ್ ಸ್ಮಾರ್ಟ್‌ಫೋನ್ ಸಂಪರ್ಕ, ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್, 10.25-ಇಂಚಿನ ಇನ್ಫೋಟೈನ್ಮೆಂಟ್ ಸ್ಕ್ರೀನ್, ಹೊಸ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಮತ್ತು ಹೊಸ ವಿನ್ಯಾಸದ ಸ್ಟೀರಿಂಗ್ ವೀಲ್ ಇದೆ.

ಹೊಸ ವಾಂಟೇಜ್ ಕಾರು 4.0 ಲೀಟರ್ ಟ್ವಿನ್ ಟರ್ಬೊ ವಿ8 ಪವರ್‌ಫುಲ್ ಎಂಜಿನ್ ಹೊಂದಿದೆ. ಈ ಎಂಜಿನ್ 656 ಬಿಹೆಚ್ ಪವರ್ ಮತ್ತು 800 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. 100 ಕಿ.ಮೀ ವೇಗವನ್ನು ಕೇವಲ 3.5 ಸೆಕೆಂಡುಗಳಲ್ಲಿ ತಲುಪುವ ಸಾಮರ್ಥ್ಯವನ್ನು ಹೊಂದಿದೆ. 322 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ.
ಗೋಯಲ್ ಅವರ ಆಸ್ಟನ್ ಮಾರ್ಟಿನ್ ಡಿಬಿ12: ದೀಪಿಂದರ್ ಗೋಯಲ್ ತಮ್ಮ ಆಸ್ಟನ್ ಮಾರ್ಟಿನ್ ಡಿಬಿ 12 ಗ್ರ್ಯಾನ್ ಟೂರರ್ ಅನ್ನು ರೇಸಿಂಗ್ ಗ್ರೀನ್ ಬಣ್ಣದಲ್ಲಿ ಖರೀದಿಸಿದ್ದಾರೆ. ಇದು ಕೂಡ 4.0-ಲೀಟರ್ ಟ್ವಿನ್-ಟರ್ಬೋಚಾರ್ಜ್ಡ್ ವಿ 8 ಎಂಜಿನ್ ಒಳಗೊಂಡಿದ್ದು, ಸುಮಾರು 680 ಪಿಎಸ್ ಪವರ್ ಮತ್ತು 800 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್‌ಗೆ 8-ಸ್ಪೀಡ್ ಡ್ಯುಯಲ್ ಕ್ಲಚ್ ಟ್ರಾನ್ಸ್ ಮಿಷನ್ ಅಳವಡಿಸಲಾಗಿದೆ.

ಆಸ್ಟನ್ ಮಾರ್ಟಿನ್ ಡಿಬಿ12 ಕಾರು, ಕೇವಲ 3.5 ಸೆಕೆಂಡುಗಳಲ್ಲಿ 100 ಕಿ.ಮೀ ವೇಗವನ್ನು ತಲುಪುವ ಸಾಮರ್ಥ್ಯವನ್ನು ಹೊಂದಿದೆ. ಕಂಪನಿಯ ಪ್ರಕಾರ, ಇದು ಎಲೆಕ್ಟ್ರಾನಿಕ್ ರಿಯರ್ ಡಿಫರೆನ್ಷಿಯಲ್ ಮತ್ತು ಅಡಾಪ್ಟಿವ್ ಡ್ಯಾಂಪರ್‌ಗಳನ್ನು ಸಹ ಹೊಂದಿದೆ. ಆಸ್ಟನ್ ಮಾರ್ಟಿನ್ ಡಿಬಿ12 ಕಾರಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ಇದು ರೂ.4.59 ಕೋಟಿಯಿದೆ. ಆನ್‌ರೋಡ್ ಬೆಲೆ 5 ಕೋಟಿ ಮೀರಿಸಬಹುದು.
ಡಿಬಿ 12ನ ಮುಖ್ಯ ಹೈಲೈಟ್ ಏನೆಂದರೆ, ಅದರ ಒಳಾಂಗಣವು ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಹೊಂದಿರುವುದು. ಇದು ಡ್ಯುಯಲ್ - ಟೋನ್ ಲೆದರ್ ಇಂಟೀರಿಯರ್, 10.25-ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್ ಮೆಂಟ್ ಸಿಸ್ಟಮ್, ಆಕರ್ಷಕ ಸೆಂಟರ್ ಕನ್ಸೋಲ್, ಹಲವಾರು ಭೌತಿಕ ಬಟನ್ (physical button) ಗಳನ್ನು ಪಡೆದಿದೆ. ಇದು ಡಿಜಿಟಲ್ ಇನ್ಸ್ಟ್ರುಮೆಂಟ್ ಗೇಜ್ ಕ್ಲಸ್ಟರ್ ಅನ್ನು ಸಹ ಪಡೆದಿದೆ.

ಈ ಆಸ್ಟನ್ ಮಾರ್ಟಿನ್ ಕಾರುಗಳನ್ನು ನವದೆಹಲಿ - ಸೆಲೆಕ್ಟ್ ಕಾರ್ಸ್ ಡೀಲರ್ ಶಿಪ್‌ನಲ್ಲಿ ಪ್ರತ್ಯೇಕವಾಗಿ ಮಾರಾಟ ಮಾಡುತ್ತದೆ. ಈಗಾಗಲೇ ಜೊಮ್ಯಾಟೋ ಸಿಇಒ, ಪೋರ್ಷೆ 911 ಟರ್ಬೊ ಎಸ್, ಫೆರಾರಿ ರೋಮಾ, ಲ್ಯಾಂಬೊರ್ಗಿನಿ ಉರುಸ್‌ನಂತಹ ದುಬಾರಿ ಕಾರುಗಳನ್ನು ತಮ್ಮ ಗ್ಯಾರೇಜ್‌ನಲ್ಲಿ ಸಾಲಾಗಿ ನಿಲ್ಲಿಸಿದ್ದಾರೆ. ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮಾಡಿ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








