ಜನ ಜೊಮ್ಯಾಟೊವನ್ನು ಎಷ್ಟು ಬೆಳಸಿದ್ದಾರೆ ಗೊತ್ತಾ? ಮಾಲೀಕನ ಹೊಸ ಕಾರಿದು.. ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!

ಇತ್ತೀಚೆಗೆ ಜೊಮ್ಯಾಟೋ ಸಿಇಒ ದೀಪಿಂದರ್ ಗೋಯಲ್ ಮತ್ತೊಮ್ಮೆ ಹೊಚ್ಚ ಹೊಸ ಸೂಪರ್ ಕಾರ್ ಖರೀದಿಸಿದ್ದಾರೆ. ಅವರ ಜೊಮ್ಯಾಟೋ ಕಂಪನಿಯ ಷೇರು ಕಳೆದ ವರ್ಷ ಶೇಕಡಾ 300 ಕ್ಕಿಂತ ಹೆಚ್ಚಾಗಿದೆ. ಭಾರತದ ಬಿಲಿಯನೇರ್ ಪಟ್ಟಿಗೆ ಸೇರಿ ದೇಶದ ಶ್ರೀಮಂತ ಉದ್ಯಮಿಗಳಲ್ಲಿ ಒಬ್ಬರಾಗಿ ಮಿಂಚುತ್ತಿದ್ದಾರೆ. ಈಗಾಗಲೇ ಫೆರಾರಿ ರೋಮಾ, ಆಸ್ಟನ್ ಮಾರ್ಟಿನ್ ಡಿಬಿ 12, ಲ್ಯಾಂಬೊರ್ಗಿನಿ ಉರುಸ್, ಪೋರ್ಷೆ 911 ಟರ್ಬೊ ಎಸ್‌ನಂತಹ ದುಬಾರಿ ಕಾರುಗಳನ್ನು ಹೊಂದಿರುವ ಅವರು, ಈ ಬಾರಿ ಬರೋಬ್ಬರಿ 6.5 ಕೋಟಿ ರೂ. (ಎಕ್ಸ್‌ ಶೋರೂಂ) ಮೌಲ್ಯದ ಕಾರನ್ನು ಖರೀದಿಸಿದ್ದಾರೆ.

ಬೆಂಟ್ಲೆ ಕಾಂಟಿನೆಂಟಲ್ ಜಿಟಿ ಸ್ಪೀಡ್ ಖರೀದಿ: ಮೊನಾಕೊ ಯೆಲ್ಲೋ ಎಂಬ ಬಣ್ಣದಲ್ಲಿ ಬರುವ ಕಾಂಟಿನೆಂಟಲ್ ಜಿಟಿ ಸ್ಪೀಡ್ ಕಾರನ್ನು ದೆಹಲಿಯ ಬೀದಿಗಳಲ್ಲಿ ಅವರು ಓಡಿಸುತ್ತಿರುವುದು ಕಂಡುಬಂದಿದೆ. ಇದಕ್ಕೆ ಸಂಬಂಧಿಸಿದ ಚಿತ್ರಗಳನ್ನು 'ಕಾರ್ ಕ್ರೇಜಿ ಇಂಡಿಯಾ' ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದೆ. ಈ ಮಾದರಿಯು ಪ್ರಸಿದ್ಧ 6-ಲೀಟರ್ ಡಬ್ಲ್ಯು 12 ಎಂಜಿನ್‌ ಹೊಂದಿದೆ. ಇದನ್ನು 12 ಸಿಲಿಂಡರ್‌ಗಳೊಂದಿಗೆ ನಿರ್ಮಿಸಲಾಗಿದ್ದು, ಬೆಂಟ್ಲೆ ಸರಣಿಯಲ್ಲಿ ಎರಡನೇ ಅತ್ಯಂತ ಪವರ್‌ಫುಲ್ ಕಾರಾಗಿದೆ.

zomato-ceo-deepinder-goyal-buys-new-bentley-continental-gt-speed

ಕಾಂಟಿನೆಂಟಲ್ ಜಿಟಿ ಸ್ಪೀಡ್ ಸೂಪರ್ ಕಾರು, 641 ಬಿಹೆಚ್‌ಪಿ ಪವರ್ ಮತ್ತು 900 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 8 ಸ್ಪೀಡಿನ ಝಡ್‌ಎಫ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಅಳವಡಿಸಲಾಗಿದೆ. ಕಾಂಟಿನೆಂಟಲ್ ಜಿಟಿ ಸ್ಪೀಡ್ ಆಲ್-ವ್ಹೀಲ್ ಡ್ರೈವ್ ಸಿಸ್ಟಮ್ ನೊಂದಿಗೆ ಸ್ಟ್ಯಾಂಡರ್ಡ್ ಆಗಿ ಬರುತ್ತದೆ. ಬೆಂಟ್ಲೆ ಪ್ರಕಾರ, ಇದು 3.5 ಸೆಕೆಂಡುಗಳಲ್ಲಿ 100 ಕಿ.ಮೀ ವೇಗವನ್ನು ತಲುಪುವ ಸಾಮರ್ಥ್ಯವನ್ನು ಹೊಂದಿದೆ.

ಹಲವು ದುಬಾರಿ ಕಾರುಗಳು: ಬೆಂಟ್ಲೆ ಕಾರಿಗೆ ಮೊದಲು ದೀಪಿಂದರ್ ಗೋಯಲ್ ಆಸ್ಟನ್ ಮಾರ್ಟಿನ್ ಡಿಬಿ-12 ಎಂಬ ಅತ್ಯಂತ ದುಬಾರಿ ಕಾರನ್ನು ಖರೀದಿಸಿದ್ದರು. ಇದರ ಬೆಲೆ ಬರೋಬ್ಬರಿ 4.59 ಕೋಟಿ ರೂ. (ಎಕ್ಸ್‌ ಶೋರೂಂ), ಜೊಮ್ಯಾಟೋ ಮಾಲೀಕ ಈ ಸೂಪರ್ ಕಾರ್ ವಿತರಣೆ ಪಡೆದ ಭಾರತದ ಮೊದಲ ಗ್ರಾಹಕರಾಗಿದ್ದಾರೆ. ಈ ಕಾರು 4.0-ಲೀಟರ್ ವಿ8 ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ, ಇದು 680 ಪಿಎಸ್ ಪವರ್ ಮತ್ತು 800 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

zomato-ceo-deepinder-goyal-buys-new-bentley-continental-gt-speed

ಅವರು ಇನ್ನೊಂದು ಸೂಪರ್ ಪವರ್ ಫುಲ್ ಕಾರನ್ನು ಸಹ ಹೊಂದಿದ್ದಾರೆ, ಅದೇ ಪೋರ್ಷೆ 911 ಟರ್ಬೊ ಎಸ್ ಆಗಿದೆ. ಇದರ ಬೆಲೆ ಭಾರತದಲ್ಲಿ 3.3 ಕೋಟಿ ರೂ. (ಎಕ್ಸ್‌ ಶೋರೂಂ), ಈ ಸೂಪರ್ ಕಾರ್ 3.8-ಲೀಟರ್ ಟ್ವಿನ್-ಟರ್ಬೋಚಾರ್ಜ್ಡ್ ಫ್ಲಾಟ್-ಸಿಕ್ಸ್ ಎಂಜಿನ್ ಹೊಂದಿದೆ. 640 ಬಿಹೆಚ್‌ಪಿ ಪವರ್ ಮತ್ತು 800 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಕೇವಲ 2.5 ಸೆಕೆಂಡುಗಳಲ್ಲಿ 100 ಕಿ.ಮೀ ವೇಗವನ್ನು ತಲುಪುವ ಸಾಮರ್ಥ್ಯವನ್ನು ಹೊಂದಿದೆ.

ದೀಪಿಂದರ್ ಗೋಯಲ್ ಅವರ ಮತ್ತೊಂದು ದುಬಾರಿ ಕಾರೆಂದರೆ ಫೆರಾರಿ ರೋಮಾ, ಭಾರತದಲ್ಲಿ ಇದರ ಬೆಲಯು 3.76 ಕೋಟಿ ರೂ. (ಎಕ್ಸ್‌ ಶೋರೂಂ), ಫೆರಾರಿ ರೋಮಾ ಕಾರಿನಲ್ಲಿ 3.9 ಲೀಟರ್ ಟರ್ಬೋಚಾರ್ಜ್ಡ್ ವಿ8 ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 620 ಬಿಹೆಚ್‌ಪಿ ಪವರ್ ಮತ್ತು 769 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ.

ಇವಿಷ್ಟೇ ಅಲ್ಲದೇ ಜೊಮಾಟೊ ಸಿಇಒ 911 ಕ್ಯಾರೆರಾವನ್ನು ಸಹ ಹೊಂದಿದ್ದಾರೆ. ಇದು ಅವರ ಮೊದಲ ಸ್ಪೋರ್ಟ್ಸ್ ಕಾರಾಗಿದೆ. ಇದು 3.0-ಲೀಟರ್ ಟ್ವಿನ್-ಟರ್ಬೋಚಾರ್ಜ್ಡ್ ಫ್ಲಾಟ್-ಸಿಕ್ಸ್ ಎಂಜಿನ್ ನಿಂದ ನಿಯಂತ್ರಿಸಲ್ಪಡುತ್ತದೆ. ಇದು 450 ಹೆಚ್‌ಪಿ ಪವರ್ ಮತ್ತು 530 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಪೋರ್ಷೆಯ ಪಿಡಿಕೆ ಗೇರ್ ಬಾಕ್ಸ್ ಎಂದೂ ಕರೆಯಲ್ಪಡುವ 8-ಸ್ಪೀಡ್ ಡ್ಯುಯಲ್-ಕ್ಲಚ್ ಟ್ರಾನ್ಸ್ ಮಿಷನ್ ಹೊಂದಿದೆ.

ಕೊನೆಯದಾಗಿ, ಅವರ ಸಂಗ್ರಹದಲ್ಲಿ ಬಿಎಂಡಬ್ಲ್ಯು ಎಂ8 ಕಾಂಪಿಟಿಷನ್ ಎಂಬ ಅಪರೂಪದ ಕಾರಿದೆ. ಇದಕ್ಕಾಗಿ ಅವರು ಸುಮಾರು 2.44 ಕೋಟಿ ರೂ. ಖರ್ಚು ಮಾಡಿದ್ದಾರೆ. ಇದು 4.4 ಲೀಟರಿನ ಟ್ವಿನ್ ಟರ್ಬೋಚಾರ್ಜ್ಡ್ ವಿ8 ಎಂಜಿನ್ ಹೊಂದಿದ್ದು, 625 ಬಿಹೆಚ್‌ಪಿ ಪವರ್ ಹಾಗೂ 750 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ.

More from DriveSpark

Article Published On: Saturday, August 3, 2024, 13:47 [IST]
English summary
Zomato ceo deepinder goyal buys new bentley continental gt speed
Read more on celebrity car india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+