17 ಲಕ್ಷ ರೂ. ಬೆಲೆಯ ಸೂಪರ್ ಬೈಕಿನಲ್ಲಿ ಫುಡ್ ಡೆಲಿವೆರಿ: ವಿಡಿಯೋ ನೋಡಿ ಶಾಕ್ ಆದ ನೆಟ್ಟಿಗರು
ಸೋಶಿಯಲ್ ಮೀಡಿಯಾ (Social media) ಜನರ ಜೀವನದ ಒಂದು ಭಾಗವಾಗಿದೆ. ಸೋಶಿಯಲ್ ಮೀಡಿಯಾಗಳಲ್ಲಿ ಲೈಕ್ಸ್ ಮತ್ತು ಫಾಲೋವರ್ಸ್ ಹೆಚ್ಚಿಸಿಕೊಳ್ಳಲು ರೀಲ್ಸ್ ಹೆಸರಿನಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಹುಚ್ಚಾಟ ಮೆರೆಯುವವರ ಸಂಖ್ಯೆ ಪ್ರತಿದಿನ ಏರಿಕೆಯಾಗುತ್ತಿದೆ. ಕೆಲವರು ವೈರಲ್ ವೀಡಿಯೊ ಚಿತ್ರೀಕರಿಸಲು ಸಾರ್ವಜನಿಕ ರಸ್ತೆಗಳಲ್ಲಿ ಬೈಕ್ ಸ್ಟಟ್ ಅಥವಾ ಕಾರಿನಲ್ಲಿ ಡ್ರಿಫ್ಟ್ ನಂತಹ ಸಾಹಸಗಳನ್ನು ಮಾಡುತ್ತಾರೆ.
ಇತ್ತೀಚೆಗೆ ಯುವಕನೊಬ್ಬ ಝೊಮ್ಯಾಟೋ (Zomato) ಫುಡ್ ಡೆಲಿವರಿ ಆ್ಯಪ್‌ಗಾಗಿ ಡೆಲಿವರಿ ಬಾಯ್ ರೀತಿಯಲ್ಲಿ ದುಬಾರಿ ಸುಜುಕಿ ಹಯಾಬುಸಾ ಸೂಪರ್‌ಬೈಕ್‌ನಲ್ಲಿ ಸವಾರಿ ಮಾಡುತ್ತಿರುವ ವೀಡಿಯೊಂದು ವೈರಲ್ ಆಗಿದೆ. ಈ ವಿಡಿಯೋವನ್ನು ಹರ್‌ಪ್ರೀತ್ ಸಿಂಗ್ ತಮ್ಮ ಇನ್‌ಸ್ಟಾಗ್ರಾಮ್ ಪೇಜ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ವೀಡಿಯೊ ಅಥವಾ ಇನ್‌ಸ್ಟಾಗ್ರಾಮ್ ರೀಲ್‌ನಲ್ಲಿ, ಯುವಕನೊಬ್ಬ ದೆಹಲಿಯ ರಸ್ತೆಗಳಲ್ಲಿ ಸುಜುಕಿ ಹಯಾಬುಸಾ (Suzuki Hayabusa) ಸೂಪರ್‌ಬೈಕ್ ಅನ್ನು ಸವಾರಿ ಮಾಡುತ್ತಿರುವುದನ್ನು ಕಾಣಬಹುದು.

ಯುವಕ ಝೊಮ್ಯಾಟೋ ಡೆಲಿವರಿ ಬಾಯ್ ಟಿ-ಶರ್ಟ್ ಅನ್ನು ಧರಿಸಿದ್ದಾನೆ. ಅವನ ಹಿಂದೆ ಡೆಲಿವೆರಿ ಬ್ಯಾಗ್ ಅನ್ನು ಸಹ ಇರಿಸಿದ್ದಾನೆ. ಝೊಮ್ಯಾಟೋ ಭಾರತದಲ್ಲಿ ಜನಪ್ರಿಯ ಆನ್‌ಲೈನ್ ಆಹಾರ ವಿತರಣಾ ಅಪ್ಲಿಕೇಶನ್ ಆಗಿದೆ ಮತ್ತು ಸೋಶಿಯಲ್ ಮೀಡಿಯಾದಲ್ಲಿ ಸಾರ್ವಜನಿಕರಿಂದ ಗಮನ ಸೆಳೆಯಲು ವ್ಯಕ್ತಿಯು ಝೊಮ್ಯಾಟೋ ಟಿ-ಶರ್ಟ್ ಮತ್ತು ಪಾರ್ಸೆಲ್ ಬಾಕ್ಸ್ ಬಳಿಸ್ಕೊಂಡು ವೀಡಿಯೊ ಶೋಟ್ ಮಾಡಿದ್ದಾನೆ.
ಈ ವೀಡಿಯೊವನ್ನು ಎಚ್ಚರಿಕೆಯಿಂದ ನೋಡಿದರೆ, ಆ ವ್ಯಕ್ತಿ Zomato ನಿಂದ ನಿಜವಾದ ಡೆಲಿವೆರಿ ಬಾಯ್ ರೀತಿ ಕಾಣುತ್ತಿಲ್ಲ ಎಂದು ನೀವು ಸ್ಪಷ್ಟವಾಗಿ ಗಮನಿಸಬಹುದು. ಅವರು ಸೂಪರ್‌ಬೈಕ್‌ನ ORVM ನಲ್ಲಿ Insta 360 ಕ್ಯಾಮೆರಾವನ್ನು ಅಳವಡಿಸಿದ್ದಾರೆ, ಬಹುಶಃ ಅವರು ಬೈಕು ಸವಾರಿ ಮಾಡುತ್ತಿರುವ ದೃಶ್ಯಗಳನ್ನು ರೆಕಾರ್ಡ್ ಮಾಡಲು. ವೀಡಿಯೋವನ್ನು ಸೀದಾ ವೀಡಿಯೊದಂತೆ ಕಾಣುವ ರೀತಿಯಲ್ಲಿ ಚಿತ್ರೀಕರಿಸಲಾಗಿದೆ.

ಇನ್ನು ಎಕ್ಸೆಲೇಟರ್ ಹೆಚ್ಚು ಕೊಟ್ಟು ಭಾರೀ ಸೌಂಡ್ ಮಾಡುತ್ತಾನೆ. ಆಫ್ಟರ್ ಮಾರ್ಕೆಟ್ ಎಕ್ಸಾಸ್ಟ್‌ನಿಂದ ಸ್ಪೋರ್ಟಿ ಸೌಂಡ್ ನಾವು ಕೇಳಬಹುದು. ಬೈಕಿನ ನೋಂದಣಿ ಸಂಖ್ಯೆ ಈ ವೀಡಿಯೊದಲ್ಲಿ ಗೋಚರಿಸುವುದಿಲ್ಲ. ಅವನು ಬೈಕನ್ನು ಅಜಾಗರೂಕತೆಯಿಂದ ಓಡಿಸುತ್ತಿಲ್ಲ ಎಂದು ಸ್ಪಷ್ಟವಾಗಿದೆ. ನಾವು Instagram ನಲ್ಲಿ ಈ ರೀತಿಯ ವೀಡಿಯೊವನ್ನು ನೋಡುತ್ತಿರುವುದು ಇದೇ ಮೊದಲಲ್ಲ. ಕಳೆದ ವಾರ ಇಂದೋರ್‌ನಲ್ಲೂ ಇದೇ ರೀತಿಯ ಘಟನೆ ವರದಿಯಾಗಿತ್ತು.
ಝೊಮ್ಯಾಟೋ ಕಂಪನಿಯ ಕೆಂಪು ಬಣ್ಣದ ಟಿ ಶರ್ಟ್ ಹಾಗೂ ಶಾರ್ಟ್ಸ್ ಒಂದನ್ನು ಧರಿಸಿದ ಯುವತಿ, ಕೆಂಪು ಬಣ್ಣದ ಝೊಮ್ಯಾಟೋ ಫುಡ್ ಡಿಲೆವರಿ ಬ್ಯಾಗ್ ನೊಂದಿಗೆ ಯಮಹಾ R15 (Yamaha R15) ಬೈಕಿನಲ್ಲಿ ಕಾಣಿಸಿಕೊಂಡಿದ್ದಾಳೆ. ಧೋರ್‌ನ ನಗರದಲ್ಲಿ ಈ ಯುವತಿ ಈ ರೀತಿ ಕಾಣಿಸಿಕೊಂಡಿದ್ದಾರೆ. ಈ ಯುವತಿಯ ವೀಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿತ್ತು.

ಇತ್ತೀಚೆಗೆ ಯುವತಿಯೊಬ್ಬಳು ಝೊಮ್ಯಾಟೋ ಫುಡ್ ಡೆಲಿವರಿ ಆ್ಯಪ್‌ಗಾಗಿ ಡೆಲಿವರಿ ಮಾಡುವ ರೀತಿ ಝೊಮ್ಯಾಟೋ ಕಂಪನಿಯ ಕೆಂಪು ಬಣ್ಣದ ಟಿ ಶರ್ಟ್ ಹಾಗೂ ಶಾರ್ಟ್ಸ್ ಒಂದನ್ನು ಧರಿಸಿದ ಯುವತಿ, ಕೆಂಪು ಬಣ್ಣದ ಝೊಮ್ಯಾಟೋ ಫುಡ್ ಡಿಲೆವರಿ ಬ್ಯಾಗ್ ನೊಂದಿಗೆ ಯಮಹಾ R15 (Yamaha R15) ಬೈಕಿನಲ್ಲಿ ಕಾಣಿಸಿಕೊಂಡಿದ್ದಾಳೆ. ಧೋರ್‌ನ ನಗರದಲ್ಲಿ ಈ ಯುವತಿ ಈ ರೀತಿ ಕಾಣಿಸಿಕೊಂಡಿದ್ದಾರೆ. ಈ ಯುವತಿಯ ವೀಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ಡೆಲೆವರಿ ಗರ್ಲ್ ರೀತಿ ಕಾಣಿಸಿಕೊಂಡಿದ್ದಾರೆ. ಝೊಮ್ಯಾಟೋ ಫುಡ್ ಡಿಲೆವರಿ ಕೆಲಸವನ್ನು ಹಲವು ಮಹಿಳೆಯರು ಮಾಡುತ್ತಾರೆ. ಆದರೆ ಈ ರೀತಿ ಮಾಡೆಲ್ ರೀತಿಯ ಸುಂದರಿ ದುಬಾರಿ ಯಮಹಾ ಬೈಕಿನಲ್ಲಿ ಝೊಮ್ಯಾಟೋ ಫುಡ್ ಡಿಲೆವರಿ ಗರ್ಲ್ ರೀತಿ ನೋಡಿ ಶಾಕ್ ಆಗಿದ್ದಾರೆ. ಮಾಡೆಲ್ ರೀತಿಯ ಸುಂದರ ಯುವತಿಯನ್ನು ನೋಡಿದ ಪಡ್ಡೆ ಹುಡುಗರು ಮಂತ್ರ ಮುಗ್ಧರಾಗಿದ್ದರು. ಈ ನಡುವೆ ಝೊಮ್ಯಾಟೋ ಸಿಇಒ ದೀಪಿಂದರ್ ಗೋಯಲ್ ಅವರು ಜೊಮಾಟೊಗೆ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಖಚಿತಪಡಿಸಿದರು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications