ಪಡ್ಡೆಹೈಕ್ಳ ಹಾರ್ಟ್‌ಬೀಟ್ ಹೆಚ್ಚಿಸಿದ ಝೊಮ್ಯಾಟೋ ಡೆಲಿವರಿ ಗರ್ಲ್: ಕಂಪನಿ ಹೇಳಿದ್ದೇನು?
ಸೋಶಿಯಲ್ ಮೀಡಿಯಾ ಜನರ ಜೀವನದ ಒಂದು ಭಾಗವಾಗಿದೆ. ಸೋಶಿಯಲ್ ಮೀಡಿಯಾಗಳಲ್ಲಿ ಲೈಕ್ಸ್ ಮತ್ತು ಫಾಲೋವರ್ಸ್ ಹೆಚ್ಚಿಸಿಕೊಳ್ಳಲು ರೀಲ್ಸ್ ಹೆಸರಿನಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಹುಚ್ಚಾಟ ಮೆರೆಯುವವರ ಸಂಖ್ಯೆ ಏರಿಕೆಯಾಗುತ್ತಿದೆ. ಕೆಲವರು ವೈರಲ್ ವೀಡಿಯೊ ಚಿತ್ರೀಕರಿಸಲು ಸಾರ್ವಜನಿಕ ರಸ್ತೆಗಳಲ್ಲಿ ಬೈಕ್ ಸ್ಟಟ್ ಅಥವಾ ಕಾರಿನಲ್ಲಿ ಡ್ರಿಫ್ಟ್ ನಂತಹ ಸಾಹಸಗಳನ್ನು ಮಾಡುತ್ತಾರೆ.
ಇತ್ತೀಚೆಗೆ ಯುವತಿಯೊಬ್ಬಳು ಝೊಮ್ಯಾಟೋ (Zomato) ಫುಡ್ ಡೆಲಿವರಿ ಆ್ಯಪ್‌ಗಾಗಿ ಡೆಲಿವರಿ ಮಾಡುವ ರೀತಿ ಝೊಮ್ಯಾಟೋ ಕಂಪನಿಯ ಕೆಂಪು ಬಣ್ಣದ ಟಿ ಶರ್ಟ್ ಹಾಗೂ ಶಾರ್ಟ್ಸ್ ಒಂದನ್ನು ಧರಿಸಿದ ಯುವತಿ, ಕೆಂಪು ಬಣ್ಣದ ಝೊಮ್ಯಾಟೋ ಫುಡ್ ಡಿಲೆವರಿ ಬ್ಯಾಗ್ ನೊಂದಿಗೆ ಯಮಹಾ R15 (Yamaha R15) ಬೈಕಿನಲ್ಲಿ ಕಾಣಿಸಿಕೊಂಡಿದ್ದಾಳೆ. ಧೋರ್‌ನ ನಗರದಲ್ಲಿ ಈ ಯುವತಿ ಈ ರೀತಿ ಕಾಣಿಸಿಕೊಂಡಿದ್ದಾರೆ. ಈ ಯುವತಿಯ ವೀಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ಇಂದೋರ್ ರೀಲ್‌ಗ್ರಾಮ್ ಅಧಿಕೃತ ತಮ್ಮ ಇನ್‌ಸ್ಟಾಗ್ರಾಮ್ ಪುಟದಲ್ಲಿ ವೀಡಿಯೊವನ್ನು ಅಪ್‌ಲೋಡ್ ಮಾಡಿದ್ದಾರೆ. ಈ ವೀಡಿಯೊದಲ್ಲಿ, ಝೊಮ್ಯಾಟೋ ಫುಡ್ ಡಿಲೆವರಿ ಗರ್ಲ್ ರೀತಿ ಕಾಣಿಸಿಕೊಂಡಿದ್ದಾರೆ. ಝೊಮ್ಯಾಟೋ ಫುಡ್ ಡಿಲೆವರಿ ಕೆಲಸವನ್ನು ಹಲವು ಮಹಿಳೆಯರು ಮಾಡುತ್ತಾರೆ. ಆದರೆ ಈ ರೀತಿ ಮಾಡೆಲ್ ರೀತಿಯ ಸುಂದರಿ ದುಬಾರಿ ಯಮಹಾ ಬೈಕಿನಲ್ಲಿ ಝೊಮ್ಯಾಟೋ ಫುಡ್ ಡಿಲೆವರಿ ಗರ್ಲ್ ರೀತಿ ನೋಡಿ ಶಾಕ್ ಆಗಿದ್ದಾರೆ.
ಮಾಡೆಲ್ ರೀತಿಯ ಸುಂದರ ಯುವತಿಯನ್ನು ನೋಡಿದ ಪಡ್ಡೆ ಹುಡುಗರು ಮಂತ್ರ ಮುಗ್ಧರಾಗಿದ್ದರು. ಈಕೆ ಬೈಕ್ ಚಲಾಯಿಸಿಕೊಂಡು ಬಂದು ಟ್ರಾಫಿಕ್ ಸಿಗ್ನಲ್‌ನಲ್ಲಿ ನಿಲ್ಲಿಸಿದ್ದರೆ, ಎಲ್ಲಾ ಹುಡುಗರ ಕಣ್ಣು ಆಕೆಯ ಮೆಲ್ಲಿತ್ತು. ವೀಡಿಯೊದಲ್ಲಿ ನಿಖರವಾದ ಸ್ಥಳವನ್ನು ಇಂದೋರ್ ವಿಜಯ್ ನಗರ ಎಂದು ಪಿನ್ ಮಾಡಲಾಗಿದೆ. ಜೊತೆಗೆ ದ್ವಿಚಕ್ರ ವಾಹನ ಚಲಾಯಿಸುತ್ತಿರುವ ಈ ಯುವತಿ ಹೆಲ್ಮೆಟ್ ಕೂಡಾ ಹಾಕಿಲ್ಲ.

ಈ ವೀಡಿಯೊದಲ್ಲಿರುವ ಹುಡುಗಿ ನಿಜವಾಗಿ ಝೊಮ್ಯಾಟೋಗಾಗಿ ಕೆಲಸ ಮಾಡುವಂತೆ ತೋರುತ್ತಿಲ್ಲ. ಆಕೆ ಬಹುಶಃ ಆನ್‌ಲೈನ್‌ನಲ್ಲಿ ಸ್ವಲ್ಪ ಗಮನ ಸೆಳೆಯಲು ಇದನ್ನು ಮಾಡಿದ್ದಾಳೆ. ವೀಡಿಯೊದಲ್ಲಿ ಜನರನ್ನು ಸೆಳೆಯುವುದು ಆಕೆಯ ಉದ್ದೇಶವಾಗಿತ್ತು ಎಂಬುದು ವೀಡಿಯೊದಲ್ಲಿ ಸ್ಪಷ್ಟವಾಗಿ ಕಂಡುಬರುತ್ತದೆ. ಆಕೆ ರೈಡಿಂಗ್ ಹೆಲ್ಮೆಟ್ ಧರಿಸಿರಲಿಲ್ಲ, ಇದು ಅತ್ಯಂತ ಅಪಾಯಕಾರಿ. ವೀಡಿಯೋಗಾಗಿ ಆಕೆ ಈ ರೀತಿ ಮಾಡಿರಬಹುದು, ಆದರೆ ಸಾರ್ವಜನಿಕ ರಸ್ತೆಗಳಲ್ಲಿ ಬೈಕ್ ಓಡಿಸುತ್ತಿದ್ದಳು.
ಭಾರತೀಯ ರಸ್ತೆಗಳು ದಿನದಿಂದ ದಿನಕ್ಕೆ ವಾಹನ ಚಲಾಯಿಸಲು ಅಥವಾ ಸವಾರಿ ಮಾಡಲು ಅಪಾಯಕಾರಿಯಾಗುತ್ತಿವೆ ಎಂದು ನಮಗೆ ಈಗಾಗಲೇ ತಿಳಿದಿದೆ. ಹೆಲ್ಮೆಟ್ ಇಲ್ಲದೆ ಬೈಕ್ ಓಡಿಸುವ ವಿಡಿಯೋ ಆಕೆಗೆ ನಿಜವಾಗಿಯೂ ಬೇಕಾದರೆ, ಖಾಸಗಿ ಪ್ರದೇಶಗಳಲ್ಲಿ ನಿಯಂತ್ರಿತ ವಾತಾವರಣವನ್ನು ಆರಿಸಿಕೊಳ್ಳಬಹುದಿತ್ತು. ಈ ನಡುವೆ ಝೊಮ್ಯಾಟೋ ಸಿಇಒ ದೀಪಿಂದರ್ ಗೋಯಲ್ ಅವರು ಜೊಮಾಟೊಗೆ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಖಚಿತಪಡಿಸಿದ್ದಾರೆ.

ಝೊಮ್ಯಾಟೋ ಸಿಇಒ ದೀಪಿಂದರ್ ಗೋಯಲ್ ಅವರು ಟ್ವಿಟ್ ಮಾಡಿ, ಈ ವಿಡಿಯೋಗೂ ತಮ್ಮ ಸಂಸ್ಥೆಗೂ ಯಾವುದೇ ಸಂಬಂಧ ಇಲ್ಲ. ಇಂಧೋರ್‌ನಲ್ಲಿ ನಮ್ಮ ಸಂಸ್ಥೆಯ ಯಾವುದೇ ಮಾರ್ಕೆಟಿಂಗ್ ಮುಖ್ಯಸ್ಥರೂ ಇಲ್ಲ. ಜೊತೆಗೆ ಹೆಲ್ಮೆಟ್ ರಹಿತ ಬೈಕ್ ಚಾಲನೆಗೆ ನಾವು ಸಮ್ಮತಿ ನೀಡುದಿಲ್ಲ. ಯಾರೋ ಅನಾಮಿಕರು ನಮ್ಮ ಬ್ರಾಂಡ್ ಹೆಸರಲ್ಲಿ ಉಚಿತ ಪ್ರಚಾರ ಕೊಡುತ್ತಿರಬಹುದು.
ಜೊತೆಯಲ್ಲೇ ಮಹಿಳೆಯರು ಆಹಾರ ಪದಾರ್ಥಗಳನ್ನು ಡೆಲಿವರಿ ಮಾಡುವುದರಲ್ಲಿ ಯಾವುದೇ ತಪ್ಪ ಇಲ್ಲ ಎಂದು ಸ್ಪಷ್ಟನೆ ನೀಡಿರುವ ದೀಪಿಂದರ್ ಗೋಯಲ್, ನಮ್ಮ ಸಂಸ್ಥೆ ಜೊತೆ ನೂರಾರು ಡೆಲಿವರಿ ಏಜೆಂಟರು ಕೆಲಸ ಮಾಡುತ್ತಿದ್ದಾರೆ. ಮಹಿಳೆಯರು ತಮ್ಮ ಜೀವನೋಪಾಯಕ್ಕಾಗಿ ತಮ್ಮ ಕುಟುಂಬ ವರ್ಗಕ್ಕೆ ಆಸರೆಯಾಗಲು ಕೆಲಸ ಮಾಡುತ್ತಿದ್ದಾರೆ. ಅದರಲ್ಲಿ ತಪ್ಪೇನೂ ಇಲ್ಲ. ಮಹಿಳೆಯರ ಕರ್ತವ್ಯಪರತೆಯನ್ನು ನಾವು ಗೌರವಿಸುತ್ತೇವೆ ಎಂದು ಗೋಯಲ್ ಹೇಳಿದ್ದಾರೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications