ವಿಕಲಚೇತನರ ಬದುಕಿಗೆ ಬೆಳಕಾದ ಜೊಮೆಟೊ

ಟೆಕ್ನಾಲಜಿ ಬೆಳೆಯುತ್ತಾ ಬಂದಲ್ಲಿ ಹಲವಾರು ಕೆಲಸಗಳು ನೀವಿರುವ ಸ್ಥಳದಲ್ಲಿಯೆ ಸಂಪೂರ್ಣಗೊಳ್ಳುತ್ತಿದೆ. ಅವುಗಳಲ್ಲಿ ಒಂದಾದ ಫುಡ್ ಡೆಲಿವರಿ ಸೇವೆಗಳು ಸಹ ಆರಂಭಗೊಂಡಿರವ ವಿಷಯ ನಮಗೆಲ್ಲರಿಗು ತಿಳಿದೇ ಇದೆ. ಟ್ಯಾಕ್ಸಿ ಆಧಾರಿತ ಆಪ್‍ ಸೇವೆಗಳಾದ ಓಲಾ ಊಬರ್ ಹಲವಾರು ಚಾಲಕರಿಗೆ ಜೀವನವನ್ನು ನೀಡಿದರೆ, ಮತ್ತೊಂದು ಕಡೆ ಊಬರ್ ಈಟ್ಸ್, ಜೊಮೆಟೊ ಮತ್ತು ಸ್ವಿಗ್ಗಿಯಂತಹ ಆಪ್ ಆಧಾರಿತ ಫುಡ್ ಡೆಲಿವರಿ ಸೇವೆಗಳು ಹಲವಾರು ನಿರುಧ್ಯೋಗಿಗಳಿಗೆ ಉಧೋಗಾವಕಾಶವನ್ನು ನೀಡಿದೆ ಎಂದರೆ ತಪ್ಪಾಗಲಾದರು.

ವಿಕಲ ಚೇತನರ ಬದುಕಿಗೆ ಬೆಳಕಾದ ಜೊಮೆಟೊ

ಏಕೆಂದರೆ ಈ ಸೇವೆಗಳು ಬಹುಷಃ ಯುವ ಸಮುದಾಯಕ್ಕೆ ಮತ್ತು ನಿರುಧ್ಯೋಗಿಗಳಿಗೆ ಹಲವಾರು ಉಧ್ಯೋಗವಾಕಶಗಳನ್ನು ನೀಡುತ್ತಲಿದೆ. ನಿಮ್ಮ ಮನೆಯಿಂದ ಅಥವಾ ನೀವಿರುವ ಜಾಗದಿಂದ ಫುಡ್ ಆರ್ಡರ್ ಮಾಡಿದರೆ ಸಾಕು ಕೇವಲ 30 ರಿಂದ 45 ನಿಮಿಷಗಳಲ್ಲಿ ನೀವು ಆರ್ಡರ್ ಮಾಡಲಾದ ಆಹಾರವು ನಿಮ್ಮ ಮುಂದೇ ಇರುತ್ತದೆ. ಈ ಹಿಂದೆ ಫುಡ್ ಡೆಲಿವರಿ ಕಾರ್ಯವನ್ನು ಕೇವಲ ಡ್ರೈವಿಂಗ್ ಲೈಸೆನ್ಸ್ ಮತ್ತು ದ್ವಿಚಕ್ರ ವಾಹನಗಳಿರುವವರಿಗೆ ಮಾತ್ರ ಆಧ್ಯತೆಯನ್ನು ನೀಡಲಾಗುತಿತ್ತು.

ವಿಕಲ ಚೇತನರ ಬದುಕಿಗೆ ಬೆಳಕಾದ ಜೊಮೆಟೊ

ಆದರೆ ಬಾಡಿಗೆ ವಾಹನಗಳನ್ನು ನೀಡುವ ಸಂಸ್ಥೆಗಳ ಕಾರಣದಿಂದಾಗಿ ಕೇವಲ ಡ್ರೈವಿಂಗ್ ಲೈಸೆನ್ಸ್ ಇರುವವರಿಗೆ ಕೂಡಾ ಉಧ್ಯೋಗಾವಕಾಶವು ದೊರೆಯುತಿದೆ. ದೈಹಿಕವಾಗಿ ಎಲ್ಲವೂ ಸರಿಯಿದ್ದವರು ಈ ಕೆಲಸವನ್ನು ಮಾಡಲು ಮುಂದಾಗುತ್ತಾರೆ. ಆದರೆ ಕೆಲ ದಿನಗಳಿಂದ ಸಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಈ ವಿಚಾರವನ್ನ ನೀವು ಕೇಳಿದರೆ ಇದು ನಿಮ್ಮ ಜೀವನದಲ್ಲಿ ಒಂದು ರೀತಿಯ ಶಕ್ತಿಯನ್ನು ತುಂಬುತ್ತದೆ.

ವಿಕಲ ಚೇತನರ ಬದುಕಿಗೆ ಬೆಳಕಾದ ಜೊಮೆಟೊ

ಹೌದು, ನಾವಿಂದು ಹೇಳಲು ಹೊರಟಿರುವ ವಿಚಾರವೇನೆಂದರೆ ಅನಾರೋಗ್ಯದಿಂದ ತನ್ನ ಎರಡು ಕಾಲುಗಳನ್ನು ಕಳೆದುಕೊಂಡಾಂತ ಜೊಮೆಟೊಗೆ ಸೇರಿ ತನ್ನತ ಇದ್ದ ಕೈ ಸಹಾಯದಿಂದ ಚಲಿಸುತ್ತಿದ್ದ ವಿಕಲಚೇತನರ ಸೈಕಲ್ ಸಹಾಯದಿಂದ ಫುಡ್ ಡೆಲಿವರಿ ಕಾರ್ಯವನ್ನು ಶುರು ಮಾಡಿದೆ. ಈ ವಿಷಯವು ಬಹಳಷ್ಟು ಮಂದಿಗೆ ತಿಳಿದಿಲ್ಲವಾದರೂ, ಜೋಮಾಟೋ ಸಂಸ್ಥೆಯ ಸ್ಥಾಪಕರಿಗೆ ತಿಳಿಯಿತು.

ವಿಕಲಚೇತನರಾದ ರಾಮು ಸಾಹು ಎಂಬುವವರು ತನ್ನ ದೈಹಿಕ ಅನಾರೋಗ್ಯದಿಂದ ಬಳಲುತ್ತಿದ್ದರೂ ಸಹ ತನ್ನ ಸಂಸ್ಥೆಯಲ್ಲಿ ಡೆಲಿವರಿ ಕಾರ್ಯವನ್ನು ಶುರು ಮಾಡಿದ್ದಾನೆ ಎಂಬ ವಿಷವನ್ನು ಅರಿತ ಜೊಮೆಟೊ ಸಂಸ್ಥೆಯ ಸ್ಥಾಪಕರಾದ ದೀಪಿಂದರ್ ಗೋಯಾಲ್‍‍ರವರು ಈತನಿಗೆ ಎಲೆಕ್ಟ್ರಿಕ್ ವಾಹನವನ್ನು ಉಡುಗೊರೆಯಾಗಿ ನೀಡಿ ಆತನ ವೃತ್ತಿ ಜೀವನವನ್ನು ಮುಂದುವರೆಸಲು ಧೈರ್ಯವನ್ನು ತುಂಬಿದ್ದಾರೆ.

ವಿಕಲ ಚೇತನರ ಬದುಕಿಗೆ ಬೆಳಕಾದ ಜೊಮೆಟೊ

ರಾಮು ಸಾಹುರವರು ಇದೀಗ ಎಲೆಕ್ಟ್ರಿಕ್ ವಾಹನದ ಸಹಾಯದಿಂದ ತನ್ನ ವೃತ್ತಿಯನ್ನು ಮುಂದುವರೆಸಿದ್ದು, ಇಂತಹ ವ್ಯಕ್ತಿಗಳಿಗೆ ನಮ್ಮ ಜೊಮಾಟೋ ಸಂಸ್ಥೆಯು ಕೆಲಸ ನೀಡಲು ಎಂದಿಗೂ ಹಿಂಜರಿಯುವುದಿಲ್ಲವೆಂದು ಸಾಭೀತು ಮಾಡಲಾಗಿದೆ.

ವಿಕಲ ಚೇತನರ ಬದುಕಿಗೆ ಬೆಳಕಾದ ಜೊಮೆಟೊ

ರಾಮು ಸಾಹುರವರು ಇಂತಹ ಕಾರ್ಯವನ್ನು ಮುಂದಾಗಿರುವ ಮತ್ತು ದೀಪಿಂದರ್ ಗೋಯಾಲ್‍‍ರವರ ಉದಾರ ಮನಸ್ಸಿನ ಬಗ್ಗೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ವಿಚಾರವು ಇನ್ನು ಹಲವರ ಜೀವನದಲ್ಲಿರುವ ಬೇಸರವನ್ನು ತೊಲಗಿಸಿ ಸಿಕ್ಕ ಕೆಲದಲ್ಲಿಯೇ ಎಷ್ಟು ಕಷ್ಟಕರವಾದರೂ ಸಹ ಅದನ್ನು ಮುಂದುವರೆಸಬೇಕೆಂಬ ಒಂದು ಹೊಸ ಆಲೋಚನೆಯನ್ನು ನೀಡುತ್ತದೆ.

MOST READ: ಸ್ಮಾರ್ಟ್ ಹೈಬ್ರಿಡ್ ಟೆಕ್ನಾಲಜಿಯೊಂದಿಗೆ ಮಾರಾಟದಲ್ಲಿ ಮಿಂಚುತ್ತಿದೆ ಮಾರುತಿ ಬಲೆನೊ

ವಿಕಲ ಚೇತನರ ಬದುಕಿಗೆ ಬೆಳಕಾದ ಜೊಮೆಟೊ

ಹೆಣ್ಣು ಮಕ್ಕಳಿಗು ಸಹ ಉಧ್ಯೊಗವಕಾಶ ನೀಡುತ್ತಿರುವ ಫುಡ್ ಡೆಲಿವರಿ ಸಂಸ್ಥೆಗಳು

ಕೇವಲ ಯುವ ಸಮುದಾಯಕ್ಕೆ, ಇಂತಹ ವಿಕಲಚೇತನರಿಗೆ ಮಾತ್ರವಲ್ಲದೆಯೆ ಫುಡ್ ಡೆಲಿವರಿ ಸಂಸ್ಥೆಗಳು ಮಹಿಳಾ ಸಬಲೀಕರಣದ ಯೋಜನೆಯಲ್ಲಿ ಅದೆಷ್ಟೋ ಹೆಣ್ಣು ಮಕ್ಕಳಿಗೂ ಸಹ ಫುಡ್ ಡೆಲಿವರಿ ಸೇವೆಯನ್ನು ಸಲ್ಲಿಸಲು ಅವಕಾಷವನ್ನು ನೀಡುತ್ತಿದೆ.

MOST READ: ರಾಜ್ಯದೆಲ್ಲೆಡೆ ಎಂಬತ್ತೊಂಬತ್ತು ಸಾವಿರಕ್ಕು ಹೆಚ್ಚಿನ ಡ್ರೈವಿಂಗ್ ಲೈಸೆನ್ಸ್ ರದ್ದು

ವಿಕಲ ಚೇತನರ ಬದುಕಿಗೆ ಬೆಳಕಾದ ಜೊಮೆಟೊ

ಇವುಗಳು ಮಾತ್ರವಲ್ಲ ಇಂತಹ ಆನ್‍ಲೈನ್ ಫುಡ್ ಡೆಲಿವರಿ ಸೇವೆಗಳಲ್ಲಿ ಮೇಲೆ ಹೇಳಿರುವ ಹಾಗೆ ಹಲವಾರು ಬಡ ಕಾಲೇಜು ವಿಧ್ಯಾರ್ಥಿಗಳಿಗೆ ಪಾರ್ಟ್ ಟೈಮ್ ಉದ್ಯೋಗ ಮಾಡುವ ಅವಕಾಶವನ್ನು ಸಹ ನೀಡುತ್ತಿದೆ. ಈ ಕುರಿತಾದ ವಿಚಾರವನ್ನು ನಾವೀಗಾಗಲೇ ಸಾಮಜಿಕ ಜಾಲತಾಣಗಳಲ್ಲಿ ನಾವು ಕಂಡಿದ್ದೇವೆ.

MOST READ: ಮುಂಬೈನಲ್ಲಿ ಶುರುವಾದ ಬಜಾಜ್ ಕ್ಯೂಟ್ ಸಂಚಾರ - ಇದು ದೇಶದ ಮೊದಲ 4 ವ್ಹೀಲರ್ ಆಟೋ ರಿಕ್ಷಾ

ವಿಕಲ ಚೇತನರ ಬದುಕಿಗೆ ಬೆಳಕಾದ ಜೊಮೆಟೊ

ಉದಾಹರಣೆ: ಒಬ್ಬ ಯವಕ ರಾತ್ರಿ 2 ಗಂಟೆಯ ಸಮಯದಲ್ಲಿ ಗ್ರಾಹಕನು ಆರ್ಡರ್ ಮಾಡಿದ ಫುಡ್ ಅನ್ನು ತೆದುಕೊಳ್ಳಲು ರೆಸ್ಟಾರೆಂಟ್‍‍ನ ಹೊರಗಡೆ ಕಾಯುತ್ತಾ ಕುಳಿತ್ತಿರುವ ಚಿತ್ರ ಮತ್ತು ಫುಡ್ ಡೆಲಿವರಿ ಕಾರ್ಯದಲ್ಲಿ ಮಗ್ನನಾಗಿ ಕೆಲಸದಲ್ಲಿ ಬಿಡುವಾದಗ ನಡು ರಸ್ತೆಯಲ್ಲಿ ತನ್ನ ಆಹಾರವನ್ನು ಸೇವಿಸುತ್ತಿರುವುದು.

ವಿಕಲ ಚೇತನರ ಬದುಕಿಗೆ ಬೆಳಕಾದ ಜೊಮೆಟೊ

ಇಂತಹ ಉದಾಹರಣೆಗಳು ಸಾವಿರಾರು ಇದ್ದರೂ ಸಹ ಕೆಲವು ಮಾತ್ರ ನಮ್ಮ ಬೆಳಕಿಗೆ ಬರುತ್ತದೆ. ಏನೆ ಹೇಳಿ ರಾಮು ಸಾಹುರವರ ಈ ವೃತ್ತಿಯನ್ನು ಆಯ್ಕೆ ಮಾದಿಕೊಳ್ಳಲು ಆತನಿಗಿದ್ದ, ಧೈರ್ಯ ಮತ್ತು ಬೇರೊಬ್ಬರ ಮುಂದೇ ಕೈಚಾಚದೆಯೆ ತಾನು ಅಂಗವಿಕಲನಾದರೂ ಸಹ ಕೆಲಸವನ್ನು ಮಾಡಿ ಸಮಾಜದಲ್ಲಿ ತಲೆ ಎತ್ತಿಕೊಳ್ಳವ ಹಾಗೆ ಮತ್ತು ದುಡಿದ ಹಣದಲ್ಲಿ ತನ್ನ ಹೊಟ್ಟೆ ತುಂಬಿಸುಕೊಳ್ಳುತ್ತೇನೆ ಎಂಬ ಈತನ ಧೈರ್ಯದ ಮುಂದೇ ನಾವೇಲ್ಲ ಸಣ್ಣವರೆ ಅಲ್ಲವೇ..?

Source: Deepinder Goyal

Most Read Articles

Kannada
English summary
Zomato Gifts Electric Vehicle To Differently Abled Delivery Man. Read In Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more