ಸುಜುಕಿ ನೂತನ ಬೈಕ್ 'ಜಿಕ್ಸರ್'ಗೆ ಜೈ ಹೋ ಹಾಡಿದ ಸಲ್ಮಾನ್
ಸುಜುಕಿ ಮೋಟಾರುಸೈಕಲ್ ಇಂಡಿಯಾ ಸಂಸ್ಥೆಯಿಂದ ಆಗಮನವಾಗಿರುವ ಅತಿ ನೂತನ 150 ಸಿಸಿ ಬೈಕ್ 'ಜಿಕ್ಸರ್'. ಈ ಸಂಬಂಧ ಮುಂಬೈನಲ್ಲಿ ಏರ್ಪಡಿಸಲಾದ ಸಮಾರಂಭವೊಂದರಲ್ಲಿ ಬಾಲಿವುಡ್ ನಟ ಹಾಗೂ ಪ್ರಮುಖ ಪ್ರಚಾರ ರಾಯಭಾರಿ ಕೂಡಾ ಆಗಿರುವ ಸಲ್ಮಾನ್ ಖಾನ್, ಸುಜುಕಿ ನೂತನ ಜಿಕ್ಸರ್‌ಗೆ ಜೈ ಹೋ ಹಾಡಿದ್ದಾರೆ.
ಪ್ರಮುಖವಾಗಿಯೂ ದೇಶದ ಮಾರುಕಟ್ಟೆಯನ್ನು ಗುರಿಯಾಗಿರಿಸಿಕೊಂಡು ಸುಜುಕಿ ಜಿಕ್ಸರ್ ಅನಾವರಣಗೊಳಿಸಲಾಗಿದೆ. ಇದು ದೇಶದ ಪ್ರಯಾಣಿಕ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಕಾಯ್ದುಕೊಳ್ಳುವ ನಂಬಿಕೆಯನ್ನು ಕಂಪನಿ ವ್ಯಕ್ತಪಡಿಸಿದೆ. ಇದೇ ಸಂದರ್ಭದಲ್ಲಿ ನಟಿ ಪರಿಣಿತಿ ಚೋಪ್ರಾ ಅವರು 110ಸಿಸಿ ಲೆಟ್ಸ್ ಸ್ಕೂಟರನ್ನು ಅನಾವರಣಗೊಳಿಸಿದ್ದರು.

ಜಿಕ್ಸರ್‌ನಲ್ಲಿ ಸುಜುಕಿಯ ನೂತನ ಇಂಧನ ತಂತ್ರಗಾರಿಕೆಯನ್ನು ಪ್ರಯೋಗ ಮಾಡಲಾಗಿದೆ. ಅಂದರೆ ನೂತನ ಜಿಕ್ಸರ್‌ನಲ್ಲಿ ಸುಜುಕಿ ಇಕೊ ನಿರ್ವಹಣೆ (ಎಸ್‌ಇಪಿ) ತಂತ್ರಜ್ಞಾನ ಆಳವಡಿಸಲಾಗಿದೆ. ಪ್ರಸ್ತುತ ತಂತ್ರಜ್ಞಾನ ಲೆಟ್ಸ್ ಸ್ಕೂಟರ್‌ಗೂ ಅನ್ವಯವಾಗಲಿದೆ.

ಸುಜುಕಿಯ ಎಸ್‌ಇಪಿ ತಂತ್ರಜ್ಞಾನ ಹೋಂಡಾದ ಇಕೊ ತಂತ್ರಗಾರಿಕೆಗೆ (ಎಚ್‌ಇಟಿ) ಸಮಾನವಾಗಿರಲಿದೆ. ಹಾಗೆಯೇ ಗರಿಷ್ಠ ಇಂಧನ ಕ್ಷಮತೆ ನೀಡುವಲ್ಲಿ ನೆರವಾಗಲಿದೆ.

ಸುಜುಕಿ ಜಿಕ್ಸರ್ ಪವರ್ ಹಾಗೂ ನಿರ್ವಹಣೆಯಲ್ಲಿ ಯಾವುದೇ ರಾಜಿಗೆ ತಯಾರಾಗಿಲ್ಲ. ಹಾಗೆಯೇ ಮುಂದಿನ ಜುಲೈ ತಿಂಗಳಲ್ಲಿ ಲಾಂಚ್ ಆಗಲಿದೆ.

ಇನ್ನುಳಿದಂತೆ ದರದ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದು ಬಂದಿಲ್ಲ. ಆದರೆ ಮೂಲಗಳ ಪ್ರಕಾರ ನೂತನ ಜಿಕ್ಸರ್ 80,000 ರು.ಗಳಷ್ಟು ದುಬಾರಿಯಾಗಲಿದೆ.


Click it and Unblock the Notifications








