ಇ-ಸ್ಕೂಟರ್ ಸವಾರಿಗೆ ಯಾರ ಅನುಮತಿ ಬೇಕಿಲ್ಲ

* ಮಹೇಶ್ ಮಲ್ನಾಡ್
ದೇಶದ ಪ್ರಮುಖ ಸೈಕಲ್ ತಯಾರಿಕಾ ಸಂಸ್ಥೆ ಬಿಎಸ್ಎ ಕಂಪನಿ, ಈಗ ಇಲೆಕ್ಟ್ರಾನಿಕ್ ಸ್ಕೂಟರ್ ತಯಾರಿಕೆಯತ್ತ ಮುಖ ಮಾಡಿದೆ. ಟ್ಯೂಬ್ ಇನ್ವೆಸ್ಟ್ ಮೆಂಟ್ ಆಫ್ ಇಂಡಿಯಾ(ಟಿಐಐ)ದ ಬಿಎಸ್ಎ ಮೋಟರ್ಸ್ ಅವರು 5 ಮಾದರಿಯಲ್ಲಿ ಬಿಎಸ್ಎ ಇ ಸ್ಕೂಟರ್ ಗಳನ್ನು ರಸ್ತೆಗಿಳಿಸಿ ಸುಮಾರು ಮೂರು ತಿಂಗಳು ಕಳೆದಿವೆ. ಬುಕ್ಕಿಂಗ್ ಹಾಗೂ ಮಾರಾಟ ನಿಧಾನಗತಿಯಲ್ಲಿ ಸಾಗುತ್ತಿದ್ದರೂ, ಯುವ ಜನತೆಯನ್ನು ಆಕರ್ಷಿಸುತ್ತಿದೆ ಎಂದು ಸಂಸ್ಥೆ ಹೇಳಿದೆ.
ಬ್ಯಾಟರಿ ಚಾಲಿತ ಈ ವಾಹನಗಳು ಸದ್ಯ ಐದು ಮಾದರಿಯಲ್ಲಿ ಲಭ್ಯವಿದೆ. ದಕ್ಷಿಣ ಭಾರತ ಚಿತ್ರರಂಗದ 'ಕ್ಲಿಯೋಪಾತ್ರ' ತಮನ್ನಾ, ಈ ಸ್ಕೂಟರ್ ಗಳನ್ನು ಸವಾರಿ ಮಾಡಿದ ಮೊದಲ ಚಾಲಕಿ. ಬಿಎಸ್ಎ ಇ ಸ್ಕೂಟರ್ ನ ಪ್ರಚಾರ ರೂಪದರ್ಶಿಯಾಗಿ ತಮನ್ನಾ ಕಾಣಿಸಿಕೊಳ್ಳಲಿದ್ದು, 14ರಿಂದ 30ರ ವಯೋಮಿತಿಯ ಯುವಕ/ಯುವತಿಯರನ್ನು ಸೆಳೆಯುವ ಅಭಿಲಾಷೆಯನ್ನು ಸಂಸ್ಥೆ ಹೊಂದಿದೆ.
ಮುರುಗಪ್ಪ ಸಮೂಹ ಸಂಸ್ಥೆಯ ಕಾರ್ಯಕಾರಿ ಅಧ್ಯಕ್ಷ ಎಂಎ ಅಲಗಪ್ಪನ್ ಅವರು ಹೊಸ ಉತ್ಪನ್ನಗಳನ್ನು ಅನಾವರಣಗೊಳಿಸಿ ಮಾತನಾಡುತ್ತಾ, ಪ್ರಸಕ್ತ ವರ್ಷ ಸುಮಾರು 60 ಸಾವಿರ ಇ-ಸ್ಕೂಟರ್ ಗಳನ್ನು ಮಾರಾಟ ಮಾಡುವ ನಿರೀಕ್ಷೆ ಹೊಂದಲಾಗಿದೆ ಎಂದಿದ್ದಾರೆ. ಪ್ರತಿ ಇ ಸ್ಕೂಟರ್ ನ ಬೆಲೆಯನ್ನು 29,000ರಿಂದ 37,000 ರು. ಎಂದು ನಿಗದಿ ಮಾಡಲಾಗಿದೆ.
ಚೆನ್ನೈನ ಅಂಬಟ್ಟೂರಿನಲ್ಲಿರುವ ಬಿಎಸ್ಎ ಉತ್ಪಾದನಾ ಘಟಕದ ಪ್ರಥಮ ಹಂತದ ನಿರ್ಮಾಣಕ್ಕೆ 20 ಕೋಟಿ ರು. ಹೂಡಲಾಗಿದೆ. ಪ್ರಥಮ ಹಂತದಲ್ಲಿ 150 ಇ ಸ್ಕೂಟರ್ ಗಳನ್ನು ಪ್ರತಿ ದಿನ ತಯಾರಿಸಲಾಗುವುದು. ಬೇಡಿಕೆ ಬಂದಾಗ ಪ್ರತಿ ದಿನ 300ಕ್ಕೂ ಹೆಚ್ಚು ಸ್ಕೂಟರ್ ತಯಾರಿಸಲು ಸಿದ್ಧತೆ ಮಾಡಲಾಗಿದೆ.
ಬಿಎಸ್ಎ ಇ ಸ್ಕೂಟರ್ ಗಳು ಸ್ಮೈಲ್(13ರಿಂದ 18 ವಯೋಮಿತಿಯವರಿಗೆ), ದಿವಾ (16ರಿಂದ 20ರ ಹರೆಯದ ಬಾಲೆಯರಿಗೆ), ಸ್ಟ್ರೀಟ್ ರೈಡರ್ (ಕ್ರೀಡಾ ಮನೋಭಾವದ ಯುವ ಜನಾಂಗಕ್ಕೆ) ಹಾಗೂ ರೋಮರ್ ಹಾಗೂ ರೋಮರ್ ಪ್ಲಸ್ ಎಂಬ ಐದು ಮಾದರಿಯಲ್ಲಿ ಲಭ್ಯವಿದೆ. ಇದರಲ್ಲಿ ಮೂರು ಮಾದರಿಗಳು 250W ಬ್ಯಾಟರಿ ಹೊಂದಿದೆ. ಗರಿಷ್ಠ ವೇಗ ಮಿತಿ 25 ಕಿ.ಮೀ ಆಗಿದೆ. ವಿಶೇಷವೆಂದರೆ ಮೊದಲ ಮೂರು ಮಾದರಿಯ ವಾಹನಗಳಿಗೆ ವಾಹನ ಪರವಾನಿಗೆ(ಲೈಸನ್ಸ್) ಹಾಗೂ ನೋಂದಣಿ ಅಗತ್ಯವಿಲ್ಲ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
ರೋಮರ್ ಮಾದರಿಯಲ್ಲಿ 500W ಬ್ಯಾಟರಿ ಬಳಸಲಾಗುತ್ತಿದ್ದು, ವೃತ್ತಿನಿರತ ಮಹಿಳೆ ಹಾಗೂ ಪುರುಷರಿಗಾಗಿ ರೂಪಿಸಲಾಗಿದೆ. ರೋಮರ್ ಪ್ಲಸ್ ನಲ್ಲಿ 800W ಬ್ಯಾಟರಿ ಇದ್ದು, ಸಂಸಾರವಂತರ ಉಪಯೋಗಕ್ಕೆ ಮೀಸಲು ಎನ್ನಲಾಗಿದೆ. ಈ ಎರಡು ಮಾದರಿಯ ವಾಹನಗಳ ಗರಿಷ್ಠ ವೇಗ ಮಿತಿ 40 ಕಿ.ಮೀ ಆಗಿದೆ. ಈ ಎರಡೂ ಮಾದರಿಗೆ ನೋಂದಣಿ ಹಾಗೂ ಲೈಸನ್ ನ ಅಗತ್ಯವಿರುತ್ತದೆ ಎಂದು ಸಂಸ್ಥೆಯ ವಕ್ತಾರರು ಹೇಳಿದ್ದಾರೆ.
ಸಂಕ್ಷಿಪ್ತ ವಿಶೇಷಗಳು:
* ಬ್ಯಾಟರಿ ಚಾಲಿತ ಇ ಸ್ಕೂಟರ್ ಗಳು ಶೇ. 82-85 ರಷ್ಟು ಕಾರ್ಯಕ್ಷಮತೆ ಹೊಂದಿವೆ.
* ಪ್ರತಿ ಸ್ಕೂಟರ್ ಗಳು ನಾಲ್ಕು ಬಣ್ಣಗಳಲ್ಲಿ ಲಭ್ಯವಿದ್ದು, ದಿವಾ ಮಾದರಿ ಐದು ವರ್ಣಗಳಲ್ಲಿ ಸಿಗುತ್ತದೆ.
* ಪ್ರತಿ ಮಾದರಿಯಲ್ಲಿ ಸೈಡ್ ರಿಫ್ಲೆಕ್ಟರ್ , ಸುರಕ್ಷಿತ ಸ್ವಿಚ್, ಫುಟ್ ರೆಸ್ಟ್ ಮುಂತಾದ ನವೀನ ಸೌಲಭ್ಯಗಳಿರುತ್ತವೆ.
* ರೊಮರ್ 500W, ರೋಮರ್ ಪ್ಲಸ್ 800W ಗೆ ಲೈಸನ್ಸ್ , ರಿಜಿಸ್ಟ್ರೇಷನ್ ಅಗತ್ಯ ವಿದೆ. 40 ಕಿ.ಮೀ ವೇಗ ಮಿತಿ.
* ಸ್ಮೈಲ್, ದಿವಾ ,ಸ್ಟ್ರೀಟ್ ರೈಡರ್ 250W, ಲೈಸನ್ಸ್ , ನೋಂದಣಿ ಅಗತ್ಯವಿಲ್ಲ 20 ಕಿ.ಮೀ ವೇಗ ಮಿತಿ.
ಬೆಂಗಳೂರಿನ ಡೀಲರ್ ವಿಳಾಸ : (ವಿವಿಧೆಡೆ ಒಟ್ಟು 42 ಡೀಲರ್ ಗಳನ್ನು ಬಿಎಸ್ ಎ ಸಂಸ್ಥೆ ಹೊಂದಿದೆ.)
Authorised Dealers For BSA E Scooters
M/s.Glorious Ingate 69/1 , First Main Road, Seshadripuram Bangalore - 560020
Seshadripuram, Bangalore - 560020.
ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ:
ಹೆಸರು : ಕಿರಣ್ ಎಸ್ ಮೂರ್ತಿ
ದೂರವಾಣಿ : 080 - 23369191
ಮೊಬೈಲ್: 9448074141
ಈಮೇಲ್ : [email protected]
ವೆಬ್ ಸೈಟ್ ವಿಳಾಸ : http://gloriousingate.sulekha.com


Click it and Unblock the Notifications








