ಉತ್ತರ ಕರ್ನಾಟದಲ್ಲಿ ಹೀರೋ ಹೋಂಡಾ ಸವಾರಿ

ಹೀರೋ ಹೊಂಡಾ ಸಂಸ್ಥೆ ಉದ್ದೇಶಿತ ಘಟಕ ನಿರ್ಮಾಣಕ್ಕೆಂದು ನಿಗದಿ ಮಾಡಿರುವ ಸುಮಾರು 100 ಎಕರೆ ಪ್ರದೇಶ, ಟಾಟಾ ಮೋಟರ್ಸ್ ನ ಬಸ್ ನಿರ್ಮಾಣ ಘಟಕದ ಪಕ್ಕದಲ್ಲಿರುವುದು ವಿಶೇಷ. ಒಟ್ಟು 300 ಎಕರೆ ಪ್ರದೇಶದಲ್ಲಿ ನಿರ್ಮಣ ಘಟಕ, ಜೋಡಣಾ ಘಟಕ ಹಾಗೂ ಟೌನ್ ಶಿಪ್ ನಿರ್ಮಾಣ ಮಾಡುವುದಾಗಿ ಹೀರೋಹೋಂಡಾ ಹೇಳಿದೆ ಎಂದು ರಾಜ್ಯ ಕೈಗಾರಿಕಾ ಮುಖ್ಯ ಕಾರ್ಯದರ್ಶಿ ವಿಪಿ ಬಳಿಅಗರ್ ಸುದ್ದಿಗಾರರಿಗೆ ತಿಳಿಸಿದರು.
ರಾಜಧಾನಿ ಬೆಂಗಳೂರಿನಿಂದ ಸುಮಾರು 421 ಕಿ.ಮೀ ಇರುವ ಹುಬ್ಬಳ್ಳಿ-ಧಾರವಾಡ ಪ್ರದೇಶದಲ್ಲಿ ವಿಶ್ವದ ಅಗ್ರಗಣ್ಯ ಮೋಟರ್ ಸೈಕಲ್ ಉತ್ಪದನಾ ಸಂಸ್ಥೆ ತಳವೂರಲಿದೆ. ದೇಶದಲ್ಲಿ ಹೀರೋ ಹೋಂಡಾ ಮೋಟರ್ಸ್ ಲಿ.ನ ನಾಲ್ಕನೇ ಘಟಕ ಇದಾಗಲಿದೆ.


Click it and Unblock the Notifications








