ಟಿವಿಎಸ್ ಸ್ಕೂಟಿ ಟೀನ್ಜ್ ಓಡಾಟ ಸ್ಟಾಪ್

ಬಹು ಬೇಡಿಕೆಯ ಟಿವಿಎಸ್ ಸ್ಕೂಟಿಗೆ ಹೊಸ ರೂಪ ನೀಡಲು ಇಚ್ಛಿಸಿ, ಎಲೆಕ್ಟ್ರಿಕಲ್ ಮಾದರಿ ಪರಿಚಯಿಸಿ, ಶಾಕ್ ಹೊಡೆಸಿಕೊಂಡಿದೆ. ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಮಾದರಿಯ ಟಿವಿಎಸ್ ಸ್ಕೂಟಿಗೆ ಕ್ಯಾರೆ ಎನ್ನುವವರಿಲ್ಲದ್ದಂತಾಗಿದೆ.
ತಾತ್ಕಾಲಿಕವಾಗಿ ಎಲೆಕ್ಟ್ರಿಕ್ ಸ್ಕೂಟರ್ (ಸ್ಕೂಟಿ) ತಯಾರಿಕೆಗೆ ಬ್ರೇಕ್ ಹಾಕಿರುವ ಟಿವಿಎಸ್, ಎಲೆಕ್ಟ್ರಿಕ್ ಮಾದರಿ ತ್ರಿಚಕ್ರ ವಾಹನ ಆಟೋರಿಕ್ಷಾವನ್ನು ಮಾರುಕಟ್ಟೆಗೆ ಸದ್ಯಕ್ಕೆ ಪರಿಚಯಿಸುವುದಿಲ್ಲ ಎಂದಿದೆ.
ಯಾಕೋ ಗ್ರಾಹಕರಿಗೆ ಎಲೆಕ್ಟ್ರಿಕ್ ದ್ವಿಚಕ್ರ ವಾಹನದ ಮೇಲೆ ಮೋಹ ಹುಟ್ಟಿಲ್ಲ. ಒಮ್ಮೊಮ್ಮೆ ಈ ರೀತಿ ಆಗುವುದು ಸಹಜ, ಜನರ ಅಭಿರುಚಿಗೆ ತಕ್ಕಂತೆ ನಾವು ವಾಹನಗಳು ನೀಡಬೇಕಾಗುತ್ತದೆ. ಹಾಗಾಗಿ ಮಾಮೂಲಿ ಮೋಟರ್ ಸೈಕಲ್ಸ್ ಹಾಗೂ ಸ್ಕೂಟರ್ಸ್ ತಯಾರಿಕೆ ಮುಂದುವರೆಸುತ್ತೇವೆ ಎಂದು ಟಿವಿಎಸ್ ನ ಮಾರುಕಟ್ಟೆ ವ್ಯವಹಾರ ಮುಖ್ಯಸ್ಥ ಎಚ್ ಎಸ್ ಗೋಂಡಿ ಹೇಳುತ್ತಾರೆ.
ಭಾರತದ ಆಟೋಮೊಬೈಲ್ ಮಾರುಕಟ್ಟೆಗೆ ಏಪ್ರಿಲ್ 2008 ರಲ್ಲಿ ಟಿವಿಎಸ್ ಸ್ಕೂಟಿ ಟೀನ್ಜ್ ಅನ್ನು ಪರಿಚಯಿಸಲಾಗಿತ್ತು. ಆದರೆ, ಬೇಡಿಕೆ ತಗ್ಗಿದ ಕಾರಣ ಮೇ 2009 ರಲ್ಲಿ ಉತ್ಪಾದನೆ ನಿಲ್ಲಿಸಲಾಯಿತು. ಸುಮಾರು ರು. 29,000 (ಷೋರೂಮ್ ಬೆಲೆಯಂತೆ) ಮುಖಬೆಲೆಯ ಸ್ಕೂಟಿಯ ಮೇಲೆ ಟಿವಿಎಸ್ ಸಾಕಷ್ಟು ಭರವಸೆ ಇಟ್ಟುಕೊಂಡಿತ್ತು.
ವರ್ಷಕ್ಕೆ ಏನಿಲ್ಲವೆಂದರೂ ಸುಮಾರು 40 ಸಾವಿರ ಸ್ಕೂಟಿಗಳ ಮಾರಾಟದ ನಿರೀಕ್ಷೆ ಇಟ್ಟುಕೊಂಡಿತ್ತು. ಆದರೆ, ಆ ನಿರೀಕ್ಷೆ ಹುಸಿಯಾಗಿದೆ. ಆದರೆ, ಈಗಲೂ ಬಾಕಿ ಉಳಿದಿರುವ ಎಲೆಕ್ಟ್ರಿಕ್ ಸ್ಕೂಟಿ ಟೀನ್ಜ್ ಮಳಿಗೆಗಳಲ್ಲಿ ಲಭ್ಯವಿದ್ದು, ಆಸಕ್ತರು ಭೇಟಿ ನೀಡಲಡ್ಡಿಯಿಲ್ಲ.


Click it and Unblock the Notifications








