ಹೀರೋ ಹೋಂಡಾಗೆ ಮತ್ತೆ ನಂ.1 ಪಟ್ಟ

ಪ್ರಸಕ್ತ ವರ್ಷ 4,26,454 ವಾಹನಗಳನ್ನು ಮಾರಾಟ ಮಾಡಲಾಗಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ 3,65,734 ವಾಹನಗಳು ಮಾರಾಟಗೊಂಡಿದ್ದವು. ಸತತ 18 ತಿಂಗಳು 3 ಲಕ್ಷಕ್ಕೂ ಅಧಿಕ ವಾಹನಗಳನ್ನು ಒಂದೇ ತಿಂಗಳಲ್ಲಿ ಮಾರಾಟ ಮಾಡಿದ ದಾಖಲೆ ಬರೆದಿದೆ.
ಗ್ರಾಹಕರ ನಾಡಿ ಮಿಡಿತವನ್ನು ಅರಿತಿರುವ ಹೀರೋ ಹೋಂಡಾ ದೇಶ್ ಕಿ ದಡ್ಕನ್ ಎಂಬ ವಾಕ್ಯಕ್ಕೆ ತಕ್ಕಂತೆ 100 ಸಿಸಿ ಇಂಜಿನ್ ಸಾಮರ್ಥ್ಯದ ಏಳಕ್ಕೂ ಅಧಿಕ ಮಾದರಿಗಳ ಮೂಲಕ ಉತ್ತಮ ಮಾರಾಟ ದಾಖಲೆ ಮುಂದುವರೆಸಿದೆ. ಪ್ರಸಕ್ತ ವರ್ಷ ಜನವರಿಯಿಂದ ಜೂನ್ ವರೆಗೂ ನಮ್ಮ ಮಾರಾಟದ ಗ್ರಾಫ್ ಏರಿಕೆ ಕಂಡಿದೆ.
ಉಳಿದ ತಿಂಗಳುಗಳಲ್ಲಿ ಇನ್ನೂ ಅಧಿಕ ವಾಹನಗಳನ್ನು ಮಾರಾಟ ಮಾಡಲು ಇದು ಆಧಾರವಾಗಲಿದೆ. ಹೀರೋ ಹೋಂಡಾದ ಮಾರಾಟ ವಿಭಾಗದ ಅನಿಲ್ ದುವಾ ಹೇಳುತ್ತಾರೆ.
ಈ ವರೆಗೂ ಒಟ್ಟು 12,34,039 ಮೋಟರ್ ಸೈಕಲ್ ಹಾಗೂ ಸ್ಕೂಟರ್ ಗಳನ್ನು ಮಾಡಿದ್ದು, ಒಟ್ಟು ಶೇ.10.28 ರಷ್ಟು ಪ್ರಗತಿ ಕಂಡಿದೆ. ಹೀರೋಹೋಂಡಾದ ಈ ಪ್ರಗತಿಯಲ್ಲಿ ಅಟೋಮೆಟಿಕ್ ಸ್ಕೂಟರ್ ನ ಕೊಡುಗೆ ಇದ್ದು, ಪ್ರತಿ ತಿಂಗಳು ಸುಮಾರು 25 ಸಾವಿರ ವಾಹನಗಳನ್ನು ಮಾರಾಟ ಕಂಡಿದೆ.


Click it and Unblock the Notifications








