ಸೂಪರ್ ಬೈಕ್ ಕ್ರೇಜ್, ತೆರಿಗೆ ವಂಚನೆಗೆ ನಾಂದಿ!

Honda Superbike
ಬೆಂಗಳೂರು, ನ.11: ನಗರದ ಯುವಕರಲ್ಲಿ ಸೂಪರ್ ಬೈಕ್ ಗಳ ಕ್ರೇಜ್ ಯಾವ ಪರಿ ಹೆಚ್ಚುತ್ತಿದೆ ಎಂದರೆ ಬೈಕು ಖರೀದಿಗೆ ತಿಂಗಳುಗಟ್ಟಲೇ ಕಾಯುವುದರ ಜೊತೆಗೆ ತಮಗೆ ಗೊತ್ತಿಲ್ಲದೆ ಸ್ಮಗ್ಲಿಂಗ್ ಜಾಲದಲ್ಲಿ ಬೀಳುತ್ತಿದ್ದಾರೆ. ಹಯಬುಸಾ, ಸುಜುಕಿ, ಎರ್ಪ್ರಿಲಾ, ಯಮಹಾ, ಹೋಂಡಾ ಯಾವುದೇ ಕಂಪೆನಿ ಸೂಪರ್ ಬೈಕಾದರೂ ಭಾರತದ ರಸ್ತೆಗಿಳಿಯಬೇಕಾದರೆ, ಸಾಕಷ್ಟು ತೆರಿಗೆ ಹಣ ವ್ಯಯವಾಗುತ್ತದೆ. ತೆರಿಗೆ ವಂಚನೆ ಮಾಡುವುದು ಸಾಮಾನ್ಯ ವಿಷಯವಾದರೂ, ದಿನೇ ದಿನೇ ಹೊಸ ಹೊಸ ಬಗೆಯ ವಿಧಾನ ಅನುಸರಿಸಿ ಕಸ್ಟಮ್ಸ್ ಅಧಿಕಾರಿಗಳನ್ನು ಬೇಸ್ತು ಬೀಳಿಸುವ ದೊಡ್ಡ ಜಾಲವೇ ವ್ಯಾಪಕವಾಗಿ ಹಬ್ಬಿದೆ. ಈ ಸ್ಮಗ್ಲಿಂಗ್ ಜಾಲದ ಮಾರುಕಟ್ಟೆ ಕೇಂದ್ರವಾಗಿ ಬೆಂಗಳೂರು ನಿಧಾನವಾಗಿ ರೂಪುಗೊಳ್ಳುತ್ತಿದೆ.

ದುಬೈ ಹಾಗೂ ಥೈಲ್ಯಾಂಡ್ ನಿಂದ ಸಾಮಾನ್ಯವಾಗಿ ಬೈಕಿನ ಬಿಡಿ ಭಾಗಗಳನ್ನು ತರಿಸಿಕೊಂಡು ಇಲ್ಲಿ ಪುನರ್ ಜೋಡಣೆ ಮಾಡಲಾಗುತ್ತದೆ ನಂತರ ಹೊಚ್ಚ ಹೊಸ ಬೈಕು ಗ್ರಾಹಕರ ಕೈ ಸೇರುತ್ತದೆ. ಆದರೆ, ಸೂಪರ್ ಬೈಕು ಕೊಳ್ಳಬೇಕಾದರೆ ಸುಮಾರು ಅರ್ಧದಷ್ಟು ಹಣವನ್ನು ಬೈಕ್ ಖರೀದಿಗೆ ಮುನ್ನ ಮುಂಗಡವಾಗಿ ನೀಡಿ ಬುಕ್ಕಿಂಗ್ ಮಾಡಬೇಕು. ಈ ಬುಕ್ಕಿಂಗ್ ಹಣ ಮರು ಪಾವತಿ ಮಾಡುವುದಿಲ್ಲ.

ಒಮ್ಮೆ ನಿಗದಿತ ಸಂಖ್ಯೆಯಲ್ಲಿ(ಕನಿಷ್ಠ ನಾಲ್ಕು ಬೈಕುಗಳು) ಬುಕ್ಕಿಂಗ್ ಆದ ಮೇಲೆ ಹೊಚ್ಚ ಹೊಸ ಬಿಡಿ ಭಾಗಗಳನ್ನು ಮೊದಲೇ ಗೊತ್ತು ಮಾಡಿರುವ ವಿದೇಶಿ ಡೀಲರ್ ಗಳಿಂದ ಪಡೆಯಲಾಗುತ್ತದೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಪೂರ್ತಿಯಾಗಿ ಜೋಡಿಸಲ್ಪಟ್ಟ ಬೈಕ್ ತರಲು ತೆರಬೇಅಕಾಗಿರುವ ತೆರಿಗೆಗೆ ಹೋಲಿಸಿದರೆ ಬಿಡಿ ಭಾಗಗಳನ್ನು ದೂರದ ದೇಶದಿಂದ ಇಲ್ಲಿಗೆ ತರಲು ಹೆಚ್ಚೇನೂ ತೆರಿಗೆ ತೆರಬೇಕಾಗಿಲ್ಲ. ಶೇ. 200 ರಷ್ಟು ಕಡಿಮೆ ಹಣ ವ್ಯಯಿಸಿ ಬಿಡಿಭಾಗಗಳನ್ನು ತರಬಹುದು.

ಹೀಗೆ ಎಲ್ಲಾ ಬಿಡಿಭಾಗಗಳನ್ನು ಒಟ್ಟುಗೂಡಿಸಲು ಸುಮಾರು ಎರಡರಿಂದ ಮೂರು ತಿಂಗಳುಗಳ ಕಾಲ ಹಿಡಿಯಬಹುದು. ರೀ ಅಸೆಂಬಲ್ ಮಾಡಿದ ಬೈಕ್ ಬೆಲೆ ಕಡಿಮೆಯಾಗುತ್ತದೆ. ವಿದೇಶಿ ಬೈಕುಗಳನ್ನು ಇಲ್ಲಿಗೆ ತರಿಸಲು ಕನಿಷ್ಠವೆಂದರೂ 17 ಲಕ್ಷ ರು ಅಂತೂ ಆಗುತ್ತದೆ. ಆದರೆ ನಾವು ಅದೇ ಬೈಕನ್ನು ಪುನರ್ ಜೋಡನೆ ಮಾಡುವ ಮೂಲಕ 11 ಲಕ್ಷಕ್ಕೂ ಕಡಿಮೆ ದುಡ್ಡಿಗೆ ಗ್ರಾಹಕರಿಗೆ ಒದಗಿಸುತ್ತೇವೆ. ಬಿಡಿಭಾಗಗಳು ವಿದೇಶದಿಂದ ಬೆಂಗಳೂರಿಗೆ ನೇರವಾಗಿ ಸೇರದೆ ದೇಶದ ನಾಲ್ಕು ಮಹಾನಗರಗಳನ್ನು ಸುತ್ತಿ ಬರುವುದುಂಟು. ಆದರೂ ಗ್ರಾಹಕರು ಕಾಯುತ್ತಾರೆ ಎಂದು ಡೀಲರ್ ಒಬ್ಬರು ಹೇಳುತ್ತಾರೆ.

ಈ ಮಾರಾಟ ಜಾಲಕ್ಕೆ ಬೆಂಗಳೂರು ಪ್ರಮುಖ ಕೇಂದ್ರವಾದರೂ ಇತ್ತೀಚೆಗೆ ಗೋವಾ ಹಾಗೂ ಪುಣೆಗಳಲ್ಲೂ ಬೇಡಿಕೆ ಹೆಚ್ಚುತ್ತಿದೆ. ಈ ಮುಂಚೆ ಕಾರುಗಳನ್ನು ಕೂಡಾ ಇದೇ ರೀತಿ ಬೇನಾಮಿ ಹೆಸರಿನಲ್ಲಿ ಆಮದು ಮಾಡಿಕೊಳ್ಳುವ ಜಾಲ ಹರಡಿತ್ತಾದರೂ ಕಾರು ಸ್ಮಗ್ಲಿಂಗ್ ಈಗ ವಿರಳವಾಗಿದೆ. ಯುವಕರ ಬೈಕ್ ಕ್ರೇಜ್ ಗೆ ತಕ್ಕಂತೆ ಡೀಲರ್ ಗಳು ಸನ್ನದ್ಧರಾಗಿ ತೆರಿಗೆ ವಂಚನೆ ಕಾಯಕವನ್ನು ಮುಂದುವರೆಸಿದ್ದಾರೆ.

More from DriveSpark

Article Published On: Thursday, November 11, 2010, 9:33 [IST]
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+