ಬೆಂಗಳೂರಿಗರಲ್ಲಿ ಹೆಚ್ಚಿದ ಸೂಪರ್ ಬೈಕ್ ಕ್ರೇಜ್

Super bike craze in Bangalore
ಬೆಂಗಳೂರು, ಡಿ.3: ಬೆಂಗಳೂರಿಗೆ ಬಗೆ ಬಗೆ ವಿಶೇಷ ಹೆಸರುಗಳು ಸಿಕ್ಕಿವೆ. ಗಾರ್ಡನ್ ಸಿಟಿ, ಐಟಿ ಸಿಟಿ ಎಂದು ಹೊಗಳಿಕೆಗೆ ಹೇಳಿದರೆ ಪಬ್ ಸಿಟಿ, ಸುಸೈಡ್ ಸಿಟಿ ಎಂದು ತೆಗಳಿಕೆಗೆ ಹೇಳುವುದ್ದುಂಟು. ಈ ಪಟ್ಟಿಗೆ ಇತ್ತೀಚಿನ ಸೇರ್ಪಟೆ ಸೂಪರ್ ಬೈಕ್ಸ್ ಸಿಟಿ. ಬೆಂಗಳೂರಿನಲ್ಲೇನು ಬೈಕು ತಯಾರಿಸೋಲ್ಲ ಆದರೆ ಬೈಕ್ ಕ್ರೇಜ್ ಇರುವ ಜನ ಮಾತ್ರ ಬೇರೆಡೆಗಿಂತ ಇಲ್ಲೇ ಜಾಸ್ತಿ.

ಹೋಟೆಲ್ ಉದ್ಯಮದಲ್ಲಿರುವ ಅರವಿಂದ್ ಗಂಗಾಧರನ್ ಕಥೆಯನ್ನೇ ಗಮನಿಸಿ. ಬೈಸಿಕಲ್ ನಿಂದ ಹಿಡಿದು ಹರ್ಲೆ ಡೇವಿಡ್ ಸನ್ಸ್, ಬುಲೆಟ್ ತನಕ ದ್ವಿಚಕ್ರವಾಹನಗಳ ಕ್ರೇಜ್ ಬೆಳೆಸಿಕೊಂಡು ಎಲ್ಲಾ ವಾಹನಗಳ ಮೇಲೆ ಸವಾರಿ ಮಾಡಿ ಮೋಜು ಮಾಡುತ್ತಿದ್ದ ಅರವಿಂದ್ ಗೆ ಎರಡು ದಶಕಗಳ ಕನಸು ನನಸಾಗಿದೆ. ತನ್ನ ಬಳಿ ಇದ್ದ ಬುಲೆಟ್ , ಬೈಸಿಕಲ್ ಗೆ ದೊಡ್ಡಣ್ಣನಂತಿರುವ ಸೂಪರ್ ಬೈಕ್ ಅನ್ನು ತನ್ನದಾದಿಸಿಕೊಂಡಿದ್ದಾನೆ. ಬೆಂಗಳೂರಿಗರ ಸೂಪರ್ ಬೈಕ್ ಕ್ರೇಜ್ ಗೆ ಇದೊಂದು ಸಣ್ಣ ನಿದರ್ಶನ.

ಶ್ರೀಮಂತ ಯುವಕರಷ್ಟೇ ಅಲ್ಲ ಕಷ್ಟಪಟ್ಟು ಕಾರ್ಪೊರೇಟ್ ಜಗತ್ತು ಸೇರಿ ಸಾಧಿಸಿದವರೂ ಕೂಡಾ ಪೈಸೆ ಪೈಸೆ(ಲಕ್ಷ ಲಕ್ಷ ಎಂದು ಓದಿಕೊಳ್ಳಿ) ಒಟ್ಟುಗೂಡಿಸಿ ಸೂಪರ್ ಬೈಕ್ ಆಮದು ಮಾಡಿಕೊಂಡ ಉದಾಹರಣೆಗಳಿವೆ. 500ಸಿಸಿ ಬೈಕ್ ನಿಂದ ಹಿಡಿದು 2500ಸಿಸಿ ಇಂಜಿನ್ ಸಾಮರ್ಥ್ಯದ ಬೈಕುಗಳು ಬೆಂಗಳೂರಿನ ರಸ್ತೆಯಲ್ಲಿ ಗರ್ಜಿಸಿವೆ.

ಸೂಪರ್ ಬೈಕ್ ಮಾರುಕಟ್ಟೆ ನಂ.1: ಬೆಂಗಳೂರಿನಲ್ಲಿ ಸೂಪರ್ ಬೈಕ್ ಮಾರುಕಟ್ಟೆಗೆ ಸೂಕ್ತ ವೇದಿಕೆ ನಿರ್ಮಾಣವಾಗಿದೆ. ಆದರೆ, ದೆಹಲಿ, ಮುಂಬೈ ನಲ್ಲಿದ್ದಂತೆ ಉತ್ಪಾದನಾ ಘಟಕ ಮರು ಜೋಡಣಾಗಳಿಲ್ಲ. ಸುಜುಕಿ ಬೈಕು ಈಗಾಗಲೇ 50 ಬೈಕುಗಳನ್ನು ಮಾರಿದೆ. ಯಮಹಾ 35 ಬೈಕುಗಳನ್ನು ಮಾರಿದೆ. ಸುಮಾರು 6 ಲಕ್ಷ ದಿಂದ ಹಿಡಿದು 35 ಲಕ್ಷ ರುವರೆಗೂ ಸೂಪರ್ ಬೈಕ್ ಗೆ ವೆಚ್ಚವಾಗುತ್ತದೆ. ಬೆಂಗಳೂರಿನ ಮಾರುಕಟ್ಟೆ ಕಳೆದ ಹತ್ತು ತಿಂಗಳಲ್ಲಿ ಸುಮಾರು 200 ವಾಹನಗಳನ್ನು ಕಂಡಿದೆ. ಶೇ.20ರಷ್ಟು ಪ್ರಗತಿ ಸಾಧಿಸಿದೆ.

ಇತ್ತೀಚೆಗೆ ಬೆಂಗಳೂರಿನಲ್ಲಿ ಡೀಲರ್ ಶಿಪ್ ಕುದುರಿಸಿಕೊಂಡಿರುವ ಹಾರ್ಲೆ ಡೇವಿಡ್ ಸನ್ ಸಂಸ್ಥೆ ವಕ್ತಾರರು ಹೇಳುವ ಪ್ರಕಾರ, ದೆಹಲಿ ಹಾಗೂ ಮುಂಬೈ ಜೊತೆಗೆ ನಿಕಟ ಪೈಪೋಟಿಯಲ್ಲಿ ಬೆಂಗಳೂರು ಕಾಣಿಸಿಕೊಂಡಿದೆ. ಐಟಿ ವಲಯದಲ್ಲಿ ಸೂಪರ್ ಬೈಕ್ ಕ್ರೇಜ್ ಹೆಚ್ಚುತ್ತಿದೆ. ಎಚ್ ಆರ್ ವೃತ್ತಿಪರರು, ಯುವ ಉದ್ಯಮಿಗಳು, ಡಾಕ್ಟರ್ ಗಳು ಸೂಪರ್ ಬೈಕ್ ಏರಲು ಕಾತುರರಾಗಿದ್ದಾರೆ. ಬೆಂಗಳೂರಿನ ಕಾಸ್ಮೋಪಾಲಿಟನ್ ಸಂಸ್ಕೃತಿ ಇದಕ್ಕೆ ಕಾರಣ ಎನ್ನಬಹುದು ಎಂದು ಅಭಿಪ್ರಾಯಪಡುತ್ತಾರೆ.

ಇದರ ಜೊತೆಗೆ 20ರ ಹರೆಯ ಕಾಲೇಜು ವಿದ್ಯಾರ್ಥಿಗಳು ಯಮಹಾ ಬೈಕಿನ ಮೇಲೆ ಮೋಹ ಬೆಳೆಸಿಕೊಂಡಿದ್ದಾರೆ. ಹೋಂಡಾ ಬೈಕಿಗೆ ಹೆಚ್ಚಿನ ಮಾರಾಟ ಪ್ರಗತಿ ಸಾಧಿಸಲು ಅದರ ರಾಯಭಾರಿ ನಟ ಜಾನ್ ಅಬ್ರಹಾಂ ಕಾರಣರಾಗಿದ್ದಾರೆ. ಎರಡು ಬಾರಿ ಏಷ್ಯಾ ಫೆಸಿಫಿಕ್ ಚಾಂಪಿಯನ್ ಆಗಿರುವ ಬೆಂಗಳೂರಿನ ರೋಹಿತ್ ಗಿರಿ ಕೂಡಾ ಇತ್ತೀಚೆಗೆ ಜಾನ್ ಏರಿದ್ದ ಹೋಂಡಾ CBR 600 ಖರೀದಿಸಿ, ಗರಿಷ್ಠ ವೇಗದಲ್ಲಿ ಓಡಿಸಿ ಆನಂದ ಪಟ್ಟಿದ್ದಾರೆ. ಒಟ್ಟಿನಲ್ಲಿ ಸೂಪರ್ ಬೈಕ್ ಕ್ರೇಜ್ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ದೊಡ್ಡ ದೊಡ್ಡ ಕಂಪೆನಿಗಳು ಬೆಂಗಳೂರಿನತ್ತ ಮುಖ ಮಾಡುತ್ತಿವೆ. ಇದರಿಂದ ಸೂಪರ್ ಬೈಕ್ ಆಮದು ಮಾಡಿಕೊಳ್ಳುವ ವಾಮಮಾರ್ಗಕ್ಕೆ ಕಡಿವಾಣ ಬೀಳುವುದಂತೂ ಖಂಡಿತಾ.

More from DriveSpark

Article Published On: Friday, December 3, 2010, 9:55 [IST]
English summary
With the Super Bike Craze increasing in Bangalore. The city has by now become the dearth for manufacturing the superbike to compete with Delhi as Mumbai has already got the lead. the target customers of superbike as entrepreneurs, HR professionals, and doctors.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+