ದಿನದ ಬೈಕ್: ಬಜಾಜ್ ಅವೆಂಜರ್ 220, ಸ್ಮೂತಾಗಿ ರೈಡ್ ಮಾಡಿ

Bajaj Avenger
ಬಜಾಜ್ ಫ್ಯಾಮಿಲಿಯ ಅವೆಂಜರ್ 220 ಎಂಬುದು ಆಕರ್ಷಕ ಬೈಕ್. ದೇಶದಲ್ಲಿರುವ ಯಾವುದೇ ಕ್ಲಾಸ್ ಬೈಕ್ ಗೆ ಹೋಲಿಸಿದರೂ ಇದು ಉದ್ದವಾದ ಬೈಕಾಗಿದೆ. ವೇಗದಲ್ಲಿ ಪ್ರಯಾಣಿಸುವಾಗಲೂ ಇದು ಆರಾಮದಾಯಕತೆಯ ಅನುಭವ ನೀಡುತ್ತದೆ. ಸೀಟ್ ಜೋಡಣೆ ಆಕರ್ಷಕವಾಗಿದ್ದು, ಕಂಫರ್ಟ್ ಆಗಿ ರೈಡ್ ಮಾಡಬಹುದಾಗಿದೆ. ಒಂದಿಷ್ಟು ತಗ್ಗಿನಲ್ಲಿ ಕುಳಿತಂತೆ ಅನಿಸಿದರೂ ಅದರಲ್ಲೂ ಒಂದಿಷ್ಟು ಮಜಾ ದೊರಕುತ್ತದೆ. ಸ್ಮೂತ್ ರೈಡ್ ಗೆ ಪೂರಕವಾಗಿ 5 ಸ್ಪೀಡ್ ಗೇರ್ ಬಾಕ್ಸ್ ಇದ್ದರೂ, ಇನ್ನಷ್ಟು ಸುಧಾರಿಸಿದ ಗೇರ್ ಬಾಕ್ಸ್ ಬೇಕಿತ್ತು ಎಂದು ಅನಿಸಿದರೂ ಅನಿಸಬಹುದು.

ಮೈಲೇಜ್ ಎಂಬುದನ್ನು ನೀವು ಗಂಭೀರವಾಗಿ ಪರಿಗಣಿಸುವರಾದರೆ ದಯವಿಟ್ಟು ಅವೆಂಜರ್ ಖರೀದಿಸಬೇಡಿ. ಯಾಕೆಂದರೆ ಅವೆಂಜರ್ ಪ್ರತಿಲೀಟರ್ ಇಂಧನಕ್ಕೆ ನಗರಗಳಲ್ಲಿ ಕಷ್ಟದಲ್ಲಿ ಕೇವಲ 35 ಕಿ.ಮೀ.ಯಷ್ಟು ಮಾತ್ರ ಮೈಲೇಜ್ ನೀಡುತ್ತದೆ. ಇದರ ಇಂಧನ ಟ್ಯಾಂಕ್ 14 ಲೀಟರ್ ಇಂಧನ ಸಂಗ್ರಹ ಸಾಮರ್ಥ್ಯ ಹೊಂದಿದೆ. ಅವೆಂಜರ್ 198.8 ಸಿಸಿ, 4 ಸ್ಟ್ರೋಕ್, ಡಿಟಿಎಸ್-ಐ ಆಯಿಲ್ ಕೂಲ್ಡ್ ಎಂಜಿನ್ ಹೊಂದಿದೆ. ಬಜಾಜ್ ಅವೆಂಜರ್ ನಲ್ಲಿ ಪ್ರತಿಗಂಟೆಗೆ ಗರಿಷ್ಠ 115 ಕಿ.ಮೀ. ವೇಗದಲ್ಲಿ ಸಾಗಬಹುದು.

ಏರ್/ಆಯಿಲ್ ಕೂಲ್ಡ್ ಎಂಜಿನ್ ಹೊಂದಿರುವ ಅವೆಂಜರ್ ತನ್ನ ಅಡ್ವಾನ್ಸ್ ಡ್ ಟೆಕ್ನಾಲಜಿ ಮೂಲಕ ಆಕರ್ಷಕವಾಗಿ ಕಾಣುತ್ತದೆ. ಹರ್ಲೆ ಡೇವಿಡ್ ಸನ್ ಗೆ ಹೋಲಿಸಿದರೆ ಅವೆಂಜರ್ ದರ ಕೂಡ ಕಡಿಮೆ. ಬೆಂಗಳೂರು ಆನ್ ರೋಡ್ ದರ ಸುಮಾರು 77 ಸಾವಿರ ರೂ. ಆಸುಪಾಸಿನಲ್ಲಿದೆ. ಅವೆಂಜರ್ ಸೀಟ್ ಜೋಡಣೆ ಆಕರ್ಷಕವಾಗಿದ್ದು ರೈಡರ್ ಆರಾಮವಾಗಿ ಕುಳಿತುಕೊಳ್ಳಬಹುದು.

ವೃತ್ತಾಕಾರದ ಹೆಡ್ ಲ್ಯಾಂಪ್ ನಿಂದಾಗಿ ಅವೆಂಜರ್ ಗೆ ಕ್ಲಾಸಿಕ್ ಲುಕ್ ಬಂದಿದೆ. ಇಂಡಿಕೇಟರ್ ಕೂಡ ಆಕರ್ಷಕವಾಗಿದೆ. ಇಂಧನ ಟ್ಯಾಂಕ್ ದೊಡ್ಡದಾಗಿದೆ. ಬಜಾಜ್ ಅವೆಂಜರ್ ದೊಡ್ಡದಾದ ವೀಲ್ ಬೇಸ್ ಹೊಂದಿದು ಸುರಕ್ಷತೆಯ ಸವಾರಿಗೆ ಪೂರಕವಾಗಿದೆ. ಬೈಕ್ ಒಟ್ಟು ತೂಕ 154 ಕೆ.ಜಿ ಇದೆ. ಹಿಂಬದಿ ಸವಾರನ ಸೀಟ್ ಚಿಕ್ಕದಾಗಿದೆ ಮತ್ತು ಒಂದಿಷ್ಟು ಎತ್ತರದಲ್ಲಿದೆ. ಇದರಿಂದ ಹಿಂಬದಿ ಸವಾರ ಹೆಚ್ಚು ಕಂಪರ್ಟ್ ಆಗಿ ಕುಳಿತುಕೊಳ್ಳಲು ಸಾಧ್ಯವಿಲ್ಲದೇ ಚಡಪಡಿಸಬಹುದು. ಇನ್ನು ಅವೆಂಜರ್ ಬ್ರೇಕ್ ವಿಷಯದ ಕುರಿತು ಯಾವುದೇ ತಕರಾರಿಲ್ಲ. ಅದು ಸೂಪರ್ಬ್ ಬ್ರೇಕ್. ಆಕರ್ಷಕ ರೈಡಿಂಗ್ ಅನುಭವಕ್ಕೆ ಅದರ ಎರಡು ಅಬ್ಸಾರ್ಬರ್ ಸಪೋರ್ಟ್ ಮಾಡುತ್ತದೆ.

More from DriveSpark

Article Published On: Tuesday, February 22, 2011, 15:13 [IST]
English summary
Bajaj Avenger 220 is powerful, looks strong and one of the most comfortable bikes available in India. The engine of the new bike has been upgraded from 198.8cc of 200 cc to 219.89 cc . Bangalore onroad price around Rs 77,000.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+