ಪ್ರತ್ಯೇಕಗೊಂಡ ಮೈಟಿವಿಎಸ್, 500 ಕೋಟಿ ರೂ. ಹೂಡಿಕೆ

ಇದು ಟಿವಿಎಸ್ ಫ್ಯಾಮಿಲಿಯಿಂದ ರೂಪಿಸಲಾಗಿರುವ ಎರಡನೇ ಪ್ರಮುಖ ಸಂಸ್ಥೆಯಾಗಲಿದೆ. ಇದಕ್ಕೂ ಮುನ್ನ, 2008ರಲ್ಲಿ ಕಂಪನಿಯ ಟಿವಿಎಸ್ ಲಾಜಿಸ್ಟಿಕ್ ಸರ್ವಿಸ್ ಆರಂಭವಾಗಿತ್ತು. ನೂತನ ಟಿವಿಎಸ್ ಆಟೋಮೊಬೈಲ್ ಸೊಲ್ಯುಷನ್ ಗೆ ಮುಂದಿನ ಮೂರು ವರ್ಷಗಳಲ್ಲಿ ಸುಮಾರು 250 ಕೋಟಿ ರೂ. ಹೂಡಿಕೆ ಮಾಡಲಿದೆ. ಇದನ್ನು ಮುಂದೆ ಜಂಟಿ ಉದ್ಯಮವಾಗಿ ರೂಪಿಸುವ ಯೋಜನೆ ಕಂಪನಿಗಿದ್ದು ಅದಕ್ಕಾಗಿ ಪ್ರತ್ಯೇಕ 250 ಕೋಟಿ ರೂ. ಹೂಡಿಕೆ ಮಾಡಲಾಗುವುದು ಎಂದು ಕಂಪನಿ ಹೇಳಿದೆ.
ಕಂಪನಿಯು ನಾಲ್ಕು ಕಂಪನಿಗಳಲ್ಲಿ ಜಂಟಿ ಉದ್ಯಮಕ್ಕಾಗಿ ಮಾತುಕತೆ ನಡೆಸುತ್ತಿದ್ದು ಇದು ಮುಂದಿನ 6 ತಿಂಗಳಲ್ಲಿ ಕೊನೆಗೊಳ್ಳುವ ನಿರೀಕ್ಷೆಯಿದೆ. ಕಂಪನಿ ಈಗ ಸುಮಾರು 120 ಕೋಟಿ ರೂ. ಬಂಡವಾಳ ಹೊಂದಿದ್ದು 30 ಕೋಟಿ ರೂ.ನಷ್ಟು ಲಾಭ ಗಳಿಸುತ್ತಿದೆ. ಸದ್ಯ ಕಂಪನಿಯು ಶ್ರೀಲಂಕದಲ್ಲೂ ವಹಿವಾಟು ನಡೆಸುತ್ತಿದ್ದು, ಬಾಂಗ್ಲಾ, ಗಲ್ಫ್ ರಾಷ್ಟ್ರಗಳಿಗೂ ವಹಿವಾಟು ವಿಸ್ತರಿಸುವ ಯೋಜನೆ ಹೊಂದಿದೆ.


Click it and Unblock the Notifications








