ಹೋಂಡಾ ಷೇರುಪತ್ರಗಳನ್ನು ಅಡವಿಟ್ಟ ಹೀರೋ ಗ್ರೂಪ್

Hero Group
ಹೀರೋ ಗ್ರೂಪ್ ಷೇರು ಅಡವಿಕ್ಕಿ ಸುಮಾರು 3,500 ಕೋಟಿ ರೂ. ಬಂಡವಾಳ ಸಂಗ್ರಹಿಸಲು ಮುಂಜಾಲ್ ಗ್ರೂಪ್ ನ ಹಣಕಾಸು ವಿಭಾಗವಾದ ಹೀರೋ ಇನ್ ವೆಸ್ಟ್ ಮೆಂಟ್ ನಿರ್ಧರಿಸಿದೆ. ಹೋಂಡಾ ಮೋಟರ್ಸ್ ನ ಷೇರುಗಳ ಮೂಲಕ ಸಾಂಸ್ಥಿಕ ಹೂಡಿಕೆ ದಾರರಿಂದ ತಾತ್ಕಾಲಿಕ ಅವಧಿಯ ಸಾಲವೆತ್ತಲು ಕಂಪನಿ ನಿರ್ಧರಿಸಿದೆ.

ಪರಿವರ್ತಿಸಲಾಗದ ಸಾಲಪತ್ರಗಳ ವ್ಯಾಲಿಡಿಟಿ ಮೂರು ತಿಂಗಳಾಗಿದೆ. ಸಾಂಸ್ಥಿಕ ಷೇರು ಮೌಲ್ಯ 5,250 ಕೋಟಿ ರೂ. ಆಗಿದ್ದು, ಇದರಲ್ಲಿ 3,500 ಕೋಟಿ ರೂ.ನಷ್ಟು ಬಂಡವಾಳ ಸಂಗ್ರಹಿಸಲು ಕಂಪನಿ ನಿರ್ಧರಿಸಿದೆ. ಆದರೆ ಈ ಕುರಿತು ಹೀರೋ ಗ್ರೂಪ್ ನ ಅಧಿಕೃತವಾಗಿ ಸ್ಪಷ್ಟಪಡಿಸಿಲ್ಲ. ಬ್ರೈನ್ ಕ್ಯಾಪಿಟಲ್ ಮತ್ತು ಸಿಂಗಾಪುರ ಸರಕಾರದ ನೆರವಿನಿಂದ ಹೀರೋ ಗ್ರೂಪ್ ಬಂಡವಾಳ ಸಂಗ್ರಹಿಸುವ ನಿರೀಕ್ಷೆಯನ್ನು ಮೂಲಗಳು ವ್ಯಕ್ತಪಡಿಸಿವೆ.

ಜಂಟಿ ಉದ್ಯಮ ಕೊನೆಗೊಳ್ಳುವ ಎಲ್ಲ ಪ್ರಕ್ರಿಯೆ ಮುಗಿದ ನಂತರ ಹೋಂಡಾ ಮೋಟರ್ಸ್ ನ ಶೇ. 26ರಷ್ಟು ಷೇರನ್ನು 4,500 ಕೋಟಿ ರೂ.ಗೆ ಹೀರೋ ಗ್ರೂಪ್ ಸ್ವಾಧೀನಪಡಿಸಿಕೊಳ್ಳಲಿದೆ.ಇದಕ್ಕಾಗಿ ಕಂಪನಿಯು ಸಾಲಪತ್ರಗಳ ಮೂಲಕ ಬಂಡವಾಳ ಸಂಗ್ರಹಿಸಲು ಉದ್ದೇಶಿಸಿದೆ ಎಂದು ಮ್ಯೂಚುಯಲ್ ಫಂಡ್ ಏಜೆನ್ಸಿ ಮೂಲಗಳು ತಿಳಿಸಿವೆ.

ಹೀರೋ ಇನ್ ವೆಸ್ಟ್ ಮೆಂಟ್ ಮೂಲಕ ಶೇ. 26ರಷ್ಟು, ಬಹುದ್ದೂರ್ ಚಾಂದ್ ಹೂಡಿಕೆಯಿಂದ ಶೇ. 8.67ರಷ್ಟು ಮತ್ತು ತಾತ್ಕಾಲಿಕ ಅವಧಿಯ ಸಾಲಪತ್ರಗಳ ಮೂಲಕ ಸುಮಾರು 3,700 ಕೋಟಿ ರೂ. ಮತ್ತು ದೀರ್ಘಕಾಲದ ಸಾಲವೆತ್ತುವ ಮೂಲಕ ಸುಮಾರು 800 ಕೋಟಿ ರೂ.ವಿನಷ್ಟು ಬಂಡವಾಳ ಕ್ರೋಡೀಕರಿಸಲು ಕಂಪನಿ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.

Article Published On: Wednesday, March 2, 2011, 11:53 [IST]
English summary
The financial wing of Munjal group, Hero Investments is on the verge of accruing funds to the tune of Rs3500 crore by pledging the shares of Hero Honda.
Read more on ಬೈಕ್ bike
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+