ಬ್ಯಾಟರಿ ರೈಡ್: ಭಾರತಕ್ಕೆ ಯಮಾಹ ಎಲೆಕ್ಟ್ರಿಕ್ ಬೈಕ್
"ಇಂಧನ ದರಗಳು ಏರಿಕೆ ಕಾಣುತ್ತಿರುವುದರಿಂದ ಎಲೆಕ್ಟ್ರಿಕ್ ಬೈಕ್ ಗಳು ಸೂಕ್ತ ಆಯ್ಕೆಯಾಗಿದೆ. ಈಗ ಕಂಪನಿಯು ಜಪಾನ್ ಮತ್ತು ಯುರೋಪ್ ದೇಶಗಳಲ್ಲಿ ಎಲೆಕ್ಟ್ರಿಕ್ ಬೈಕ್ ಮಾರಾಟ ಮಾಡುತ್ತಿದ್ದು, ಶೀಘ್ರದಲ್ಲಿ ಭಾರತದ ಮಾರುಕಟ್ಟೆಗೂ ಇಂತಹ ಬೈಕ್ ಗಳನ್ನು ಪರಿಚಯಿಸಲಾಗುವುದು" ಎಂದು ಇಂಡಿಯಾ ಯಮಾಹ ಮೋಟರ್ ನ ಮಾರಾಟ ವಿಭಾಗದ ನಿರ್ದೇಶಕ ಜನ್ ನಕಾಟ ಸುದ್ದಿ ಸಂಸ್ಥೆಯೊಂದಕ್ಕೆ ಹೇಳಿದ್ದಾರೆ. ಆದರೂ ಕಂಪನಿ ನೂತನ ಎಲೆಕ್ಟ್ರಿಕ್ ಬೈಕ್ ನ ವಿಶೇಷತೆ ಮತ್ತು ದರದ ಕುರಿತು ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಿಲ್ಲ.
ಹೂಡಿಕೆ ಹೆಚ್ಚಿಸುವ ಮೂಲಕ ಭಾರತದ ಮಾರುಕಟ್ಟೆಗೆ ಹೆಚ್ಚಿನ ಒತ್ತು ನೀಡುವುದಾಗಿ ಕಂಪನಿ ಕಳೆದ ವರ್ಷ ಪ್ರಕಟಿಸಿತ್ತು. ಮುಂದಿನ 3-4 ವರ್ಷಗಳಲ್ಲಿ ಒಟ್ಟಾರೆ ಜಾಗತಿಕ ಮಾರುಕಟ್ಟೆಯ ಪಾಲಿನಲ್ಲಿ ಕಂಪನಿಯ ಭಾರತದ ಪಾಲು ಶೇ. 10ರಷ್ಟಿರುವ ಗುರಿಯನ್ನು ಕಂಪನಿ ಹೊಂದಿದೆ. ಕಂಪನಿ ಈ ಹಿಂದೆ ತಿಳಿಸಿದ ಸ್ಕೂಟರ್ ಬಗ್ಗೆ ಕೇಳಿದ ಪ್ರಶ್ನೆಗೆ ನಕಾಟ " ಆ ಸ್ಕೂಟರ್ ಇನ್ನೂ ಜಪಾನಿನಲ್ಲಿ ಅಭಿವೃದ್ಧಿ ಹಂತದಲ್ಲಿದೆ" ಎಂದಿದ್ದಾರೆ.


Click it and Unblock the Notifications
