ಟಿವಿಎಸ್ ಸ್ಪೋರ್ಟ್ಸ್ ಬೈಕ್ ಗೆ ಕೋಹ್ಲಿ ರಾಯಭಾರಿ

Virat Kohli
ಕ್ರಿಕೆಟ್ ನಲ್ಲಿ ಒಮ್ಮೊಮ್ಮೆ ವಿರಾಟ ರೂಪವನ್ನು ತೋರಿಸಿ ಎದುರಾಳಿಗಳನ್ನು ಬೆಚ್ಚಿಬೀಳಿಸೋ ವಿರಾಟ್ ಕೋಹ್ಲಿ ಟಿವಿಎಸ್ ಸ್ಪೋರ್ಟ್ಸ್ ಬೈಕೊಂದಕ್ಕೆ ಇನ್ನು ಮುಂದೆ ರಾಯಭಾರಿ. ಸಾಕಷ್ಟು ಕ್ರೀಡಾ ಅಭಿಮಾನಿಗಳನ್ನು ಹೊಂದಿರುವ ಕೋಹ್ಲಿಯನ್ನು ತನ್ನ ಸ್ಪೋರ್ಟ್ಸ್ ಬೈಕ್ ಬ್ರಾಂಡ್ ರಾಯಬಾರಿಯಾಗಿ ನೇಮಕಮಾಡಿಕೊಳ್ಳುವ ಮೂಲಕ ಗ್ರಾಹಕರನ್ನು ಸೆಳೆಯಲು ಟಿವಿಎಸ್ ಯತ್ನಿಸಿದೆ.

"ದೇಶದ ಜನಪ್ರಿಯ ಕ್ರಿಕೆಟ್ ಆಟಗಾರ, ಅದರಲ್ಲೂ ಯುವಕರ ಮೆಚ್ಚಿನ ಕೋಹ್ಲಿ ಜೊತೆಗೆ ಕಂಪನಿ ಒಪ್ಪಂದವೊಂದನ್ನು ಮಾಡಿಕೊಂಡಿದೆ. ಕಂಪನಿಯ ಸ್ಪೋರ್ಟ್ಸ್ ಬೈಕ್ ಗೆ ಇನ್ನು ಮುಂದೆ ವಿರಾಟ್ ರಾಯಭಾರಿಯಾಗಿದ್ದಾರೆ. ಬೈಕ್ ಜಾಹೀರಾತು ಮತ್ತು ರಿಟೇಲ್ ವಹಿವಾಟಿಗೆ ಇವರನ್ನು ಬ್ರಾಂಡ್ ಅಂಬಾಸಿಡರ್ ಆಗಿ ನೇಮಕಮಾಡಿಕೊಳ್ಳಲಾಗಿದೆ" ಎಂದು ಚೆನ್ನೈನ ಟಿವಿಎಸ್ ಮೋಟರ್ ಕಂಪನಿ ಪ್ರಕಟಿಸಿದೆ.

ಕಂಪನಿಯ ಹೊಸೂರು ಘಟಕದಲ್ಲಿ ನೂತನ ಸ್ಪೋರ್ಟ್ಸ್ ಬೈಕನ್ನು ಉತ್ಪಾದಿಸಲಾಗುವುದೆಂದು ಕಂಪನಿ ತಿಳಿಸಿದೆ. ನೂತನ ಬೈಕ್ ಡ್ಯೂಯಲ್ ಟೋನ್ ಕಲರ್, ಎಲ್ ಇಡಿ ಟೇಲ್ ಲ್ಯಾಂಪ್, ಎಲೆಕ್ಟ್ರಿಕ್ ಸ್ಟಾರ್ಟ್ ಇತ್ಯಾದಿ ಫೀಚರ್ ಗಳನ್ನು ಹೊಂದಿರಲಿದೆ. ಹೊಸ ಸ್ಪೋರ್ಟ್ಸ್ ಬೈಕ್ ದರ ಬೆಂಗಳೂರು ಎಕ್ಸ್ ಶೋರೂಂನಲ್ಲಿ ಶೋರೂಂನಲ್ಲಿ ಸುಮಾರು 38,600 ರೂ. ಆಗಿದೆ.

ಬ್ರಾಂಡ್ ಅಂಬಾಸಿಡರ್ ಆಗಿ ನೇಮಕವಾಗಿರುವುದಕ್ಕೆ ಹರ್ಷ ವ್ಯಕ್ತಪಡಿಸಿದ ಕೋಹ್ಲಿ "ಕಂಪನಿಯ ಬ್ರಾಂಡ್ ಪ್ರಗತಿಗೆ" ಶ್ರಮಿಸುವುದಾಗಿ ಹೇಳಿದ್ದಾರೆ. ಫೆಬ್ರವರಿ 2011ರಲ್ಲಿ ಕಂಪನಿಯು ಸುಮಾರು 1,77,412 ಯೂನಿಟ್ ವಾಹನ ಮಾರಾಟ ಮಾಡಿದ್ದು, ಕಳೆದ ವರ್ಷದ ಇದೇ ತಿಂಗಳ 1,42,676 ಯೂನಿಟ್ ಮಾರಾಟಕ್ಕೆ ಹೋಲಿಸಿದರೆ ಶೇ. 24ರಷ್ಟು ಪ್ರಗತಿ ದಾಖಲಿಸಿದೆ.

More from DriveSpark

Article Published On: Thursday, March 10, 2011, 10:19 [IST]
English summary
TVS Motor Company has roped in Indian star cricketer Virat Kohli as Brand Ambassador for its all new Sport range of motorcycles. Virat Kohli will feature on all advertising and retail material related to TVS Sport.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+