ಯಮಹಾ ಸ್ಕೂಟರ್ ನಿಮಗೆ ಬೇಕಾ ಸಾರ್!!

Yamaha India
ದೇಶದ ರಸ್ತೆಯಲ್ಲಿ ಯಮಹಾ ಸ್ಕೂಟರ್ ಗಳು ರೈಡ್ ಮಾಡುವ ನಿರೀಕ್ಷೆಗಳಿವೆ. ಜಪಾನಿನ ಕಂಪನಿಯ ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗವು ಭಾರತದ ರಸ್ತೆಗೆ ಸೂಕ್ತವಾಗುವ ಸ್ಕೂಟರ್ ವಿನ್ಯಾಸದಲ್ಲಿ ತೊಡಗಿರುವುದಾಗಿ ಯಮಹಾ ಮೋಟರ್ಸ್ ಇಂಡಿಯಾದ ಮುಖ್ಯಸ್ಥರು ಹೇಳಿದ್ದಾರೆ.

ನೂತನ ಸ್ಕೂಟರ್ ಗೇರ್ ಲೆಸ್ ಫೀಚರ್ ಹೊಂದಿರಲಿದ್ದು, ಈ ವರ್ಷದ ಅಂತ್ಯದ ವೇಳೆಗೆ ರಸ್ತೆಗಿಳಿಯುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ. ಆದರೆ ಈ ಕುರಿತು ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸಿದ್ದಾರೆ. ಒಟ್ಟಾರೆ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಭಾರತದ ಸ್ಕೂಟರ್ ಮಾರುಕಟ್ಟೆ ಶೇ. 18ರಷ್ಟು ಪಾಲು ಹೊಂದಿರುವುದರಿಂದ ಕಂಪನಿ ಈ ನಿರ್ಧಾರಕ್ಕೆ ಬಂದಿದೆ ಎನ್ನಲಾಗಿದೆ. ಇದರೊಂದಿಗೆ ಕಂಪನಿಯು ಎರಡು ಹೊಸ ಪರಿಷ್ಕೃತ ಬೈಕ್ ಗಳನ್ನು ಭಾರತದ ಮಾರುಕಟ್ಟೆಗೆ ಪರಿಚಯಿಸಲಿದೆ.

ಕಂಪನಿಯು ಕಳೆದ ವರ್ಷ 2.5 ಲಕ್ಷ ಬೈಕ್ ಮಾರಾಟ ಮಾಡಿದ್ದು, ಪ್ರಸಕ್ತ ವರ್ಷ ಮಾರಾಟದಲ್ಲಿ ಸುಮಾರು ಶೇ. 50ರಷ್ಟು ಪ್ರಗತಿ ಕಾಣುವ ನಿರೀಕ್ಷೆಯಲ್ಲಿರುವುದಾಗಿ ಅವರು ಹೇಳಿದ್ದಾರೆ. ಜನವರಿ 2011ರಲ್ಲಿ ಯಮಹಾಾ ಇಂಡಿಯಾ ಮಾರಾಟ ಹಿಂದಿನ ವರ್ಷದ ಇದೇ ಅವಧಿಗಿಂತ ಶೇ. 21.28ರಷ್ಟು ಏರಿಕೆ ಕಂಡಿದೆ. ದೇಶದ ಬೈಕ್ ಮಾರುಕ್ಟೆಯಲ್ಲಿ ಕಂಪನಿಯು 10 ಬೈಕ್ ಮಾರಾಟ ಮಾಡುತ್ತಿದ್ದು, ಮುಂದಿನ 2-3 ವರ್ಷಗಳಲ್ಲಿ ಶೇ. 10ರಷ್ಟು ಪಾಲು ಹೊಂದುವ ನಿರೀಕ್ಷೆಯನ್ನು ಅವರು ವ್ಯಕ್ತಪಡಿಸಿದ್ದಾರೆ.

Article Published On: Friday, March 11, 2011, 14:53 [IST]
English summary
The mean segment of scooters in India is growing in a silent manner and in addition to the local players, the Japanese giant Yamaha is making a close feasibility study. The company’s apex body in Japan is sketching the scooter from its R& D wing which would meet the design of the Indian scooter market.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+