ಟಿವಿಎಸ್ ಬೈಕ್ ಬೇಗ ಖರೀದಿಸಿ, ದರ ಹೆಚ್ಚಾಗುತ್ತೆ!

"ಕಚ್ಚಾ ಸಾಮಾಗ್ರಿಗಳ ದರ ಏರಿಕೆಯಿಂದ ಈಗಲೂ ನಾವು ತೊಂದರೆ ಅನುಭವಿಸುತ್ತಿದ್ದೇವೆ. ಇದಕ್ಕಾಗಿ ಈ ತಿಂಗಳ ಅಂತ್ಯಕ್ಕೆ ದರ ಹೆಚ್ಚಿಸುವ ಕುರಿತು ನಿರ್ಧಾರ ಪ್ರಕಟಿಸಲಿದ್ದೇವೆ" ಎಂದು ಟಿವಿಎಸ್ ಮೋಟರ್ ಕಂಪನಿ ಅಧ್ಯಕ್ಷ ಎಚ್ ಎಸ್ ಗೋಯಿಂಡಿ ತಿಳಿಸಿದ್ದಾರೆ. ಕಂಪನಿಯು ಕಳೆದ ಜನವರಿಯಲ್ಲಿ ಬೈಕ್ ದರಗಳನ್ನು ಶೇ 1-2ರಷ್ಟು ಹೆಚ್ಚಿಸಿತ್ತು
ಕಂಪನಿಯು ಇತ್ತೀಚೆಗೆ ಪ್ರೀಮಿಯಂ ಅಪಾಚಿ ಆರ್ ಟಿಆರ್ 180 ಬೈಕನ್ನು ಹೊರತಂದಿದೆ. ಇದು ಆಂಟಿ ಲಾಕ್ ಬ್ರೇಕಿಂಗ್ ಸಿಸ್ಟಮ್ ಹೊಂದಿದ್ದು ದೆಹಲಿ ಎಕ್ಸ್ ಶೋರೂಂ ದರ ಸುಮಾರು 78,880 ರೂ. ಆಗಿದೆ. ಇದು ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್ ನೊಂದಿಗೆ ಬಂದಿರುವ ಕಂಪನಿಯ ಮೊದಲ ಬೈಕಾಗಿದೆ.


Click it and Unblock the Notifications








