ನಾನು ಮತ್ತು ನನ್ನ ಬೈಕ್: ಸಿಡಿ 100 ಅಂದ್ರೆ ನನ್ನ ಬದುಕು

Hero Honda CD Dawn
ಸ್ನೇಹಿತರೇ ನಾನು ಭುವನ್. ಮೈಸೂರಿನವನು. ಸದ್ಯ ಕೆಲಸ ಬೆಂಗಳೂರಿನಲ್ಲಿ. ನಾನು ನನ್ನ ಪ್ರೀತಿಯ ಬೈಕೊಂದರ ಕತೆ ನಿಮಗೆ ಹೇಳುತ್ತಿದ್ದೇನೆ. ಸಹನೆಯಿಟ್ಟು ಕೇಳುವಂತರಾಗಿ. ನಾನು ಎಂಎ ಮುಗಿಸಿ ಬಂದಾಗ ಬೆಂಗಳೂರಿನಲ್ಲಿ ನನಗೆ ಕೆಲಸ ನೀಡಿದ್ದು ಫಾರ್ಮಾ ಕಂಪನಿಯೊಂದು. ಅಲ್ಲಿ ನನಗೆ ದೊರಕಿದ ಕೆಲಸ ಮೆಡಿಕಲ್ ರೆಪ್ರಸೆಂಟೆಟಿವ್. ನಿಮಗೆ ಗೊತ್ತಿರಬಹುದು. ಮೆಡಿಕಲ್ ರೆಪ್ರಸೆಂಟಿಟಿವ್ ಬಳಿ ಬೈಕೊಂದು ಇರಲೇ ಬೇಕು ಅಂತ.

ಆದರೆ ನನ್ನ ಪ್ರಮುಖ ಸಮಸ್ಯೆ. ಬಡತನ. ನಾನು ಶ್ರೀಮಂತ ಕುಟುಂಬದಿಂದ ಬಂದವನಲ್ಲ. ಹೀಗಾಗಿ ಅಪ್ಪನಲ್ಲಿ ಬೈಕ್ ತೆಗೆದುಕೊಡು ಅಂತ ಡಿಮಾಂಡ್ ಮಾಡುವುದು ಸಾಧುವಲ್ಲ ಅಂತ ನಂಗೆ ಗೊತ್ತು. ಸರಿ ಏನು ಮಾಡೋದು ಅಂತ ಯೋಚಿಸಿದೆ. ನನಗೆ ಇಂಧನ ದಕ್ಷತೆಯ ಮತ್ತು ನನ್ನ ಬಜೆಟ್ ಗೆ ಸೂಕ್ತವಾದ ಬೈಕೊಂದು ಅವಶ್ಯಕತೆಯಿತು.

ಇದೇ ಸಮಯಕ್ಕೆ ನನ್ನ ಬಾಸ್ "ಬೈಕ್ ತಗೋ... ಬೈಕ್ ತಗೋ" ಅಂತ ಒತ್ತಡ ಜಾಸ್ತಿ ಮಾಡುತ್ತಿದ್ದರು. ಅದೊಂದು ಮುಂಜಾನೆ ಅವನಿಗಾಗಿಯಾದರೂ ಒಂದು ಬೈಕ್ ಖರೀದಿಸಲೇಬೇಕು ಅಂತ ನಿರ್ಧರಿಸಿ ಸೆಕೆಂಡ್ ಹ್ಯಾಂಡ್ ಮಳಿಗೆಯೊಂದಕ್ಕೆ ಬಲಗಾಲಿಟ್ಟು ಪ್ರವೇಶಿಸಿದೆ. . ಮನಸ್ಸಿನಲ್ಲಿ ದೇವರಿಗೆ ನೂರು ನಮಸ್ಕಾರ ಹೇಳುತ್ತಿದ್ದೆ. ಯಾಕೆಂದರೆ ಮೊದಲೇ ದುಡ್ಡಿನ ಸಮಸ್ಯೆ. ಸೆಕೆಂಡ್ ಹ್ಯಾಂಡ್ ಖರೀದಿಸಿ ಪಾಪರ್ ಆಗಬಾರದಲ್ವ. ಆ ಭೀತಿ ನನಗಿತ್ತು.

ನನ್ನ ಬಜೆಟ್ ಸುಮಾರು 10 ಸಾವಿರ ರೂ. ಗ್ಯಾರೇಜ್ ಮಾಲೀಕ ಸಲೀಂ ನನಗೆ ಮೂರು ಬೈಕ್ ತೋರಿಸಿಕೊಟ್ಟ. ಹೀರೋ ಹೋಂಡಾ ಸಿಡಿ 100, ಬಜಾಜ್ ಕ್ಯಾಲಿಬಾರ್ ಮತ್ತು ಸುಜುಕಿ ಮ್ಯಾಕ್ಸ್ 100. ನನಗೆ ಡೀಸಂಟ್ ಮೈಲೇಜ್ ಅಗತ್ಯವಿತ್ತು. ಹಾಗಾಗಿ ಸಿಡಿ100 ಖರೀದಿಸಿದೆ. ಅದು 1991ರ ಮಾಡೆಲ್ ನದ್ದು. ಆದರೆ ಅದರ ಎಂಜಿನ್ ನಲ್ಲಿ ಏನೋ ಚೂರು ಸಮಸ್ಯೆ ಇದೆ ಅಂತ ಸಲೀಂ ಹೇಳಿದ.

ಆತನೊಂದಿಗೆ ಎಲ್ಲಾ ಡೀಲ್ ಮುಗಿಸಿ ಅದನ್ನು ಪೇಂಟ್ ಮಾಡಿ ಸ್ಟೈಲ್ ಹೆಚ್ಚಿಸುವ ಕುರಿತು ನಾನು ಯೋಚಿಸಿದ್ದೆ. ಆದರೆ ಸಲೀಂನನಗೆ "ಪೂರ್ತಿ ಎಂಜಿನ್ ಸರ್ವಿಸ್ ಮಾಡು" ಅಂತ ಸಲಹೆ ನೀಡಿದ. ಹೀಗಾಗಿ ಆತನ ಗ್ಯಾರೇಜ್ ನಲ್ಲಿ ಆಕೆಯನ್ನು(ನನ್ನ ಮೊದಲ ಬೈಕ್ ಅದು) ಬಿಟ್ಟು ಬಂದೆ. ಆ ಬೈಕ್ ಟೆಕ್ ಮಾಹಿತಿ ಒಂಚೂರು ನಿಮಗೆ ಹೇಳಬೇಕು. ಅದು 97.2ಸಿಸಿ 4 ಸ್ಟ್ರೋಕ್ ಎಂಜಿನ್, 4 ಸ್ಪೀಡ್ ಗೇರ್ ಬಾಕ್ಸ್ ಬೈಕ್.

ಸಿಡಿ 100 ಎಂಬುದು ರಫ್ ಬಳಕೆಗೆ ಸೂಕ್ತ ಅಂತ ನನ್ನ ಅಭಿಪ್ರಾಯ. ಗ್ರಾಮೀಣ ಪ್ರದೇಶಗಳಲ್ಲಿ, ಹಳ್ಳಿಗಾಡಿನಲ್ಲಿ ಬಳಸಲು ಅತ್ಯಂತ ಬೆಸ್ಟ್ ಬೈಕ್. ಸುಮಾರು 10.1 ಲೀಟರ್ ಇಂಧನ ಟ್ಯಾಂಕ್ ಸಾಮರ್ಥ್ಯ ಹೊಂದಿರುವ ಆ ಬೈಕ್ ತೂಕ ಕೇವಲ 103 ಕೆ.ಜಿ. ಬೈಕ್ ಹಿಂಬಾಗ ಮತ್ತು ಮುಂಬಾಗದಲ್ಲಿ ಟೆಲ್ ಹೈಡ್ರಾಲಿಕ್ ಫೋಕ್ ಆಂಡ್ ಸ್ವಿಂಗ್ ಆರ್ಮ್ ನ ಸಸ್ಪೆನ್ಷನ್ ಹೊಂದಿದೆ. ಎಂತಹ ಪರಿಸ್ಥಿಯಲ್ಲೂ ಸ್ಟಾಪ್ ಮಾಡಲು ಸಾಧ್ಯವಾಗುವಂತಹ ಡ್ರಮ್ ಬ್ರೇಕ್ ಅದರ ಎರಡೂ ಚಕ್ರಕ್ಕೂ ಇದೆ.

ಗ್ಯಾರೇಜ್ ಮಾಲೀಕ ಎಂಜಿನ್ ಸರ್ವಿಸ್ ಮಾಡಿದ್ದಕ್ಕೆ 9 ಸಾವಿರ ರೂ. ಬಿಲ್ ನೊಂದಿಗೆ ನನಗೆ ಬೈಕ್ ಕೀ ನೀಡಿದ. ಒಟ್ಟು ನನ್ನ ಬೈಕ್ ಗೆ 19 ಸಾವಿರ ರೂ. ಆಯ್ತು ನೋಡಿ. ಆದರೆ ಆ ಬೈಕ್ ಸ್ಟಾರ್ಟ್ ಮಾಡಿ ರೈಡ್ ಮಾಡಿದಾಗ ನನಗೆ ಅನಿಸಿತು. 19 ಸಾವಿರ ಇದಕ್ಕೆ ಹೆಚ್ಚಾಗಿಲ್ಲ ಅಂತ. ಅದರ ಹೆಚ್ಚಿನ ಬಿಡಿಭಾಗ ಜಪಾನ್ ನದು. ಹೀಗಾಗಿ ಒಂದಿಷ್ಟು ಸ್ಟೈಲ್ ಕಡಿಮೆ ಎಂದೆನಿಸಿದರೂ, ಸಹಜ ಸುಂದರಿ ತರಹ ಆಕರ್ಷಕ.

ಮುಂದಿನ ದಿನದಿಂದಲೇ ಅದನ್ನು ನಿಯಮಿತವಾಗಿ ನನ್ನ ಕೆಲಸಕ್ಕೆ ಬಳಸತೊಡಗಿದೆ. ನೀವು ನಂಬ್ತಿರೋ ಬಿಡ್ತಿರೋ. ಅಷ್ಟು ಹಳೆಯ ಮಾಡೆಲ್ ಆದರೂ ಅದು ಪ್ರತೀಲೀಟರ್ ಇಂಧನಕ್ಕೆ ಸಿಟಿಯಲ್ಲಿ 60 ಕಿ.ಮೀ. ಹೈವೆನಲ್ಲಿ 70 ಕಿ.ಮೀ. ಮೈಲೇಜ್ ನೀಡುತ್ತಿತ್ತು. ನಾನು ನನ್ನ ಉದ್ಯೋಗಕ್ಕೆ ಆ ಬೈಕನ್ನೇ ಬಳಸುತ್ತಿದ್ದೆ. ಇಷ್ಟು ಸಮಯವಾದರೂ ನನಗೆ ಎಂದೂ ಆ ಬೈಕ್ ಡಿಸ್ ಅಪೊಂಯಿಟ್ಮೆಂಟ್ ಮಾಡಿಲ್ಲ ಅನ್ನೋದು ಸತ್ಯ.

ಅವಳು ಮುಂದಿನ ದಿನಗಳಲ್ಲಿ ನನಗೆ ತುಂಬಾ ಇಷ್ಟವಾಗತೊಡಗಿದಳು. ಕ್ಷಮಿಸಿ. ನನ್ನ ಪಾಲಿಗೆ ಆ ಬೈಕ್ ಪುಟ್ಟ ಹುಡುಗಿ ತರಹ. ಅಷ್ಟು ಜತನದಿಂದ ನೋಡಿಕೊಳ್ಳುತ್ತಿದ್ದೆ. ಅವಳೂ ಅಷ್ಟೇ. ಎಂದು ನನಗೆ ಮೋಸ ಮಾಡಿಲ್ಲ. ಇನ್ನೂ ಆ ಬೈಕ್ ಹಾಗೇ ಇದೆ. ನನ್ನ ಕೊನೆ ಉಸಿರಿರುವರೆಗೂ ಆಕೆಯನ್ನು ಜತನದಿಂದ ನೋಡಿಕೊಳ್ಳಬೇಕು ಅಂತ ನಾನ್ಯಾವತ್ತೋ ತೀರ್ಮಾನಿಸಿಬಿಟ್ಟಿದ್ದೇನೆ.

ನಾನು ಚಾಲೆಂಜ್ ಹಾಕಿ ಹೇಳುತ್ತೇನೆ. ಈಗಿನ ಯಾವುದೇ ಲೇಟೆಸ್ಟ್ ಬೈಕ್ ಖರೀದಿಸಿದರೂ ನನಗೆ ನನ್ನ ಮುದ್ದಿನ ಸಿಡಿ100ನಷ್ಟು ಬೇರೆ ಯಾವುದೂ ಇಷ್ಟವಾಗದು. ಆ ಬೈಕ್ ನೊಂದಿಗಿನ ನನ್ನ ಉತ್ಕಟಪ್ರೇಮ ಇಲ್ಲಿ ಪದಗಳಿಗೆ ನಿಲುಕುತ್ತಿಲ್ಲ. ಆದರೆ ನನಗೊತ್ತು. ಅದನ್ನು ಎಷ್ಟು ಅಕ್ಕರೆಯಿಂದ ನೋಡಿಕೊಳ್ಳುತ್ತೇನೆ ಎಂದು. ಕ್ಷಮಿಸಿ ಇದನ್ನೇಲ್ಲ ನಿಮ್ಮಲ್ಲಿ ಹೇಳಬೇಕೆನಿಸಿತು...!

More from DriveSpark

Article Published On: Monday, March 21, 2011, 11:33 [IST]
English summary
Hi Friends this is Bhuvan. From mysore. I am going to share my biking story with all of my bike advice friends. I bought CD 100 second hand bike. There is interesting story...
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+