ರಸ್ತೆಗಿಳಿಯಲಿದೆ ಹೋಂಡಾದ 100 ಸಿಸಿ ಬೈಕ್

Honda
ಹೋಂಡಾ ಮತ್ತು ಹೀರೋ ಗ್ರೂಪ್ ನ ಮೈತ್ರಿ ಔಪಚಾರಿಕವಾಗಿ ಕೊನೆಗೊಂಡಿದೆ. ಪೂರ್ಣಪ್ರಮಾಣದಲ್ಲಿ ಇನ್ನೂ ಸಹಭಾಗಿತ್ವ ಕೊನೆಗೊಂಡಿಲ್ಲ. ಆದರೆ ಜಪಾನಿನ ಕಂಪನಿ ದೇಶದಲ್ಲಿ ತನ್ನದೇ ಕಾರ್ಯತಂತ್ರಗಳ ಮೂಲಕ ಮುಂದುವರೆಯಲು ನಿರ್ಧರಿಸಿದೆ. ಇದಕ್ಕೆ ಪೂರಕವಾಗಿ ಕಂಪನಿಯು ದೇಶದಲ್ಲಿ 100 ಸಿಸಿ ಬೈಕ್ ನ್ನು ಪರಿಚಯಿಸಲಿದೆ. ಇದನ್ನು ಕಂಪನಿಯು ಭಾರತದಲ್ಲಿ ಉತ್ಪಾದಿಸಲಿದ್ದು ಇದಕ್ಕಾಗಿ ಬೃಹತ್ ಪ್ರಮಾಣದಲ್ಲಿ ಹೂಡಿಕೆ ಮಾಡಲು ನಿರ್ಧರಿಸಿದೆ. ಅಂದಹಾಗೇ ನೂತನ 100 ಸಿಸಿ ಬೈಕ್ ಮುಂದಿನ ವರ್ಷ ರಸ್ತೆಗಿಳಿಯುವ ನಿರೀಕ್ಷೆಯಿದೆ.

ದೇಶದ ಬೈಕ್ ಮಾರುಕಟ್ಟೆಯಲ್ಲಿ ಮುಂದಿನ 10 ವರ್ಷಗಳ ಕಾಲ ಅಗ್ರಸ್ಥಾನ ಮುಂದುವರೆಸುವ ಗುರಿ ಹೊಂದಿರುವುದಾಗಿ ಕಂಪನಿಯ ಅಧ್ಯಕ್ಷರು ಹೇಳಿದ್ದಾರೆ. ದೇಶದ ದ್ವಿಚಕ್ರ ಮಾರುಕಟ್ಟೆಯಲ್ಲಿ ಹೋಂಡಾ ಕಂಪನಿಯು ಅಗ್ರಸ್ಥಾನದಲ್ಲಿದೆ. ಆದರೆ ಜಂಟಿ ಉದ್ಯಮ ಕೊನೆಗೊಂಡರೂ ಮುಂದಿನ 2014ರವರೆಗೆ ಹೀರೋ ಗ್ರೂಪ್ ಗೆ ಹೋಂಡಾ ತಂತ್ರಜ್ಞಾನ ಸವಲತ್ತು ನೀಡುವ ಪರವಾನಗಿಯ ಒಪ್ಪಂದ ಹೊಂದಿದೆ. ಹೀರೋ ಹೋಂಡಾ ಮತ್ತು ಹೀರೋ ಗ್ರೂಪ್ ಮುಂದಿನ ದಿನಗಳಲ್ಲಿ ಪೈಪೋಟಿಯಲ್ಲಿ ಬೈಕ್ ಗಳನ್ನು ಹೊರತರುವ ನಿರೀಕ್ಷೆಯಿದೆ.

Article Published On: Tuesday, March 22, 2011, 16:02 [IST]
English summary
The formal split between Honda and Hero Group from the Hero Honda Motors has envisaged the Japanese company to go ahead with its own strategies. Now the time has come for it to launch its 100 cc bikes to be made in India.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+