ಒಂದುವರೆ ಲಕ್ಷದ ಸಿಬಿಆರ್250ಆರ್.. ನಿಮಗೆ ಬೇಕಾ ಸಾರ್!

Honda CBR250R launched
ಹೋಂಡಾ ಫ್ಯಾಕ್ಟರಿಯಿಂದ ಬಹುನಿರೀಕ್ಷಿತ, ಆಕರ್ಷಕ ಬೈಕೊಂದು ದೇಶದ ರಸ್ತೆಗಿಳಿದಿದೆ. ಅದರ ಹೆಸರು ಹೋಂಡಾ ಸಿಬಿಆರ್250ಆರ್. ಇದರ ದರವನ್ನೂ ಕೂಡ ಕಂಪನಿ ಪ್ರಕಟಿಸಿದೆ. ಇದು ಎಬಿಎಸ್ ಇರುವ ಮತ್ತು ಇಲ್ಲದ ಆಯ್ಕೆಗಳಲ್ಲಿ ದೊರಕುತ್ತಿದೆ. ಎಬಿಎಸ್ ಬೇಡವೆಂದರೆ ಈ ಬೈಕ್ ದರ ಸುಮಾರು 1.51 ಲಕ್ಷ ರೂ. ಮತ್ತು ಎಬಿಎಸ್ ಸೌಲಭ್ಯವಿರುವ ಸಿಬಿಆರ್250ಆರ್ ಗೆ 1.77 ಲಕ್ಷ ರೂ. ನೀಡಬೇಕು.

ನೂತನ ಸಿಬಿಆರ್250ಆರ್ ಕಂಪನಿಯ ಆಯ್ದ 400 ಶೋರೂಂಗಳಲ್ಲಿ ಮಾತ್ರ ಲಭ್ಯವಿದೆ. ಇದು ಕೆಂಪು ಕಪ್ಪು ಮತ್ತು ಸಿಲ್ವರ್ ಬಣ್ಣಗಳಲ್ಲಿ ದೊರಕುತ್ತಿದೆ. ಕಂಪನಿ ಕಳೆದ ಜನವರಿಯಲ್ಲಿಯೇ ಈ ಬೈಕ್ ಬುಕ್ಕಿಂಗ್ ಆರಂಭಿಸಿತ್ತು. ಆದರೆ ಅದರ ದರ ಗ್ರಾಹಕರಿಗೆ ಗೊತ್ತಾದದ್ದು ಈಗ. ದರ ಗೊತ್ತಿಲ್ಲದಿದ್ದರೂ ಇಲ್ಲಿವರೆಗೆ ಸುಮಾರು 2,500 ಬುಕ್ಕಿಂಗ್ ಆಗಿದ್ದು ಗ್ರಾಹಕರ ಉತ್ಸಾಹ ಕಂಡು ಕಂಪನಿ ಸಕತ್ ಖುಷಿಯಾಗಿದೆ.

ಸಿಂಗಲ್ ಸಿಲಿಂಡರ್ 250ಸಿಸಿಯ ನಾಲ್ಕು ಕವಾಟದ ಡಿಒಎಚ್ ಸಿಯ ಎಂಜಿನ್, ಫ್ಯೂಯಲ್ ಇಂಜೆಕ್ಷನ್ ಮತ್ತು ಲಿಕ್ವಿಡ್ ಕೂಲಿಂಗ್ ಇತ್ಯಾದಿ ಟೆಕ್ ಫೀಚರ್ ನಿಂದ ಬಂದಿರುವ ಸಿಬಿಆರ್250ಆರ್ ಗ್ರಾಹಕರಲ್ಲಿ ಸಾಕಷ್ಟು ಹೈಪ್ ಕ್ರಿಯೆಟ್ ಮಾಡಿತ್ತು. ಈ ಬೈಕ್ ಪ್ರತಿಗಂಟೆಗೆ ಸುಮಾರು 160 ಕಿ.ಮೀ. ಗರಿಷ್ಠ ವೇಗ ನೀಡಲಿದೆ. ಇದು ನಗರ ಸವಾರಿಗೆ ಸೂಕ್ತ ಬೈಕಾಗಿದ್ದು ಆರಾಮದಾಯಕವಾಗಿ ಕುಳಿತುಕೊಂಡು ರೈಡ್ ಮಾಡಬಹುದಾಗಿದೆ. ಕಂಫರ್ಟ್ ರೈಡಿಂಗ್ ಬಯಸುವರಿಗೆ ಇದು ಸೂಕ್ತ ಆಯ್ಕೆಯಾಗಿದೆ.

Article Published On: Wednesday, March 23, 2011, 16:59 [IST]
English summary
Finally Honda Motorcycle & Scooter India launched CBR250R Bike in India. The non-ABS version of the CBR250R priced at Rs. 1.51 lakh(ex-showroom Delhi ) and Rs. 1.77 lakh for ABS version.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+