ರಸ್ತೆಗಿಳಿಯಲಿವೆ ಇನ್ನಷ್ಟು ಹೋಂಡಾ ಗೇರ್ ಲೆಸ್ ಸ್ಕೂಟರ್

"ಗೇರ್ ಲೆಸ್ ಸ್ಕೂಟರ್ ಮಾರುಕಟ್ಟೆಯಲ್ಲಿ ಕಂಪನಿಯು ಅಗ್ರಸ್ಥಾನದಲ್ಲಿದ್ದೇವೆ. ಸದ್ಯ ದೇಶದ ಮಾರುಕಟ್ಟೆಯಲ್ಲಿ ಇಂತಹ ಸ್ಕೂಟರ್ ಗಳಿಗೆ ಬೇಡಿಕೆ ಏರಿಕೆ ಕಾಣುತ್ತಿರುವುದರಿಂದ ಇನ್ನಷ್ಟು ಉತ್ಪನ್ನಗಳನ್ನು ಹೊರತರಲಿದ್ದೇವೆ. ಎಚ್ಎಂಎಸ್ಐ ಶೇ. 40ರಷ್ಟು ಸ್ಕೂಟರ್ ಮತ್ತು ಶೇ. 60ರಷ್ಟು ಮೋಟರ್ ಸೈಕಲ್ ವಹಿವಾಟು ಹೊಂದಿದೆ" ಎಂದು ಕಂಪನಿಯ ಅಧ್ಯಕ್ಷರಾದ ಶಿಂಜಿ ಆಯೊಮಾ ಹೇಳಿದ್ದಾರೆ.
ಎರಡನೇ ಮತ್ತು ಮೂರನೇ ಶ್ರೇಣಿಯ ನಗರಗಳಲ್ಲಿ ಗೇರ್ ಲೆಸ್ ಸ್ಕೂಟರ್ ಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಗ್ರಾಮೀಣ ಮಾರುಕಟ್ಟೆಯಲ್ಲೂ ಕಂಪನಿ ಡೀಲರ್ ಷಿಪ್ ಕೇಂದ್ರಗಳನ್ನು ವಿಸ್ತರಿಸಲು ಕಂಪನಿ ನಿರ್ಧರಿಸಿದೆ ಎಂದು ಅವರು ಹೇಳಿದ್ದಾರೆ. ಕಂಪನಿಯು ಈಗ ಸುಮಾರು 1,200 ಡೀಲರ್ ಷಿಪ್ ಕೇಂದ್ರಗಳನ್ನು ಹೊಂದಿದ್ದು, 2012ಕ್ಕೆ ನೂತನ 100 ಡೀಲರ್ ಕೇಂದ್ರಗಳನ್ನು ತೆರೆಯಲು ನಿರ್ಧರಿಸಿರುವುದಾಗಿ ಅವರು ಹೇಳಿದ್ದಾರೆ.


Click it and Unblock the Notifications