ಹಳ್ಳಿ ಸವಾರಿಗೆ ಸೂಕ್ತ ಟಿವಿಎಸ್ ಮ್ಯಾಕ್ಸ್ 4ಆರ್ ಎಲ್ಎಕ್ಸ್

ನೂತನ ಆವೃತ್ತಿ 109.7 ಸಿಸಿ ಎಂಜಿನ್ ಹೊಂದಿದ್ದು ಅತ್ಯಧಿಕ ಟಾರ್ಕ್ ಪವರ್ ಮತ್ತು ಪಿಕ್ ಅಪ್ ನೀಡುತ್ತದೆ. ಟಿವಿಎಸ್ ನ ಈ ಅಗ್ಗದ ಬೈಕ್ ಇಂಧನ ದಕ್ಷತೆಯನ್ನೂ ನೀಡುತ್ತದೆ. ಟಿವಿಎಸ್ ಮ್ಯಾಕ್ಸ್4ಆರ್ ಎಲ್ಎಕ್ಸ್ ಎಕ್ಸ್ ಶೋರೂಂ ದರ ಸುಮಾರು 39,090 ರು.
ಟಿವಿಎಸ್ ಮ್ಯಾಕ್ಸ್4ಆರ್ ಎಲ್ ಎಕ್ಸ್ ಬೈಕನ್ನು ಗ್ರಾಮೀಣ ಮತ್ತು ಅರೆಪಟ್ಟಣಗಳಲ್ಲಿ ಮಾರಾಟ ಮಾಡುವ ಗುರಿಯನ್ನು ಕಂಪನಿ ಹೊಂದಿದೆ. ಷಾಕ್ಸ್ ಅಬ್ಸಾರ್ಬರ್, ಸದೃಢ ಫ್ರೇಮ್, ದೊಡ್ಡ ಬ್ರೇಕ್, ದೊಡ್ಡ ಟೈರ್ ಇರುವುದರಿಂದ ಈ ಬೈಕ್ ಹಳ್ಳಿ ಸವಾರಿಗೆ ಸೂಕ್ತವಾಗಿದೆ ಎಂದು ಕಂಪನಿ ಹೇಳಿದೆ.


Click it and Unblock the Notifications








