ಇಷ್ಟು ಬೈಕ್ ಗಳಲ್ಲಿ ನಿಮಗ್ಯಾವುದು ಇಷ್ಟ?

ಯಾವುದೇ ಕಂಪನಿ ಕೂಡ ಕೆಟ್ಟ ಬೈಕ್ ಹೊರತರುವುದಿಲ್ಲ. ಆದರೆ ಕೆಲವು ಬೈಕ್ ಹೆಚ್ಚು ಜನಪ್ರಿಯಗೊಳ್ಳುತ್ತದೆ. ಉಳಿದವು ಮೂಲೆ ಸೇರುತ್ತವೆ ಹಳೆಯ ಚಪ್ಪಲಿ ತರಹ. ನಿಮ್ಮ ಸ್ನೇಹಿತ ಪಲ್ಸರ್ ಅಥವಾ ಸಿಬಿಝಡ್ ಖರೀದಿಸಿದರೆ ನೀವು ಅದನ್ನೇ ಖರೀದಿಸಬೇಕೆಂದೆನಿಲ್ಲ.
ಸದ್ಯ ಹೆಚ್ಚು ಜನರು ಇಷ್ಟಪಟ್ಟಿರುವ ಒಂದಿಷ್ಟು ಬೈಕ್ ಗಳನ್ನು ಹೆಕ್ಕಿ ನಿಮ್ಮ ಮುಂದಿರಿಸಿದ್ದೇವೆ. ಮೈಲೇಜ್ ಮತ್ತು ಆನ್ ರೋಡ್ ದರ ಕೂಡ ನೀಡಲಾಗಿದೆ. ಆದರೆ ಅದು ನಿಖರ ದರ ಮತ್ತು ಮೈಲೇಜ್ ಅಂತ ಹೇಳುವುದಿಲ್ಲ. 70 ಸಾವಿರ ರು. ಅಂತ ಇದ್ದರೆ ಅದರು 69,900 ರು. ಅಥವಾ 71 ಸಾವಿರ ರು. ಆಗಿರಬಹುದು. ಅಜೆಸ್ಟ್ ಮಾಡಿಕೊಳ್ಳಿ.
ಹೋಂಡಾ ಸಿಬಿಆರ್250ಆರ್:ಇದರ ದರ ಸುಮಾರು ಒಂದುವರೆ ಲಕ್ಷ ರು. ಎಬಿಎಸ್ ಸಿಸ್ಟಮ್ ಇರುವ ಆವೃತ್ತಿ ಕೂಡ ದೊರಕುತ್ತದೆ.
ಹೀರೋ ಹೋಂಡಾ ನ್ಯೂ ಸಿಬಿಝಡ್ ಎಕ್ಸ್-ಟ್ರಿಮ್: ಇದರ ದರ 72 ಸಾವಿರ ರು. ಆಸುಪಾಸಿನಲ್ಲಿದೆ. ಗರಿಷ್ಠ ವೇಗ ಪ್ರತಿಗಂಟೆಗೆ 115 ಕಿ.ಮೀ. ಸಿಸಿ: 149.2cc, ಮೈಲೇಜ್: ಪ್ರತಿಲೀಟರ್ ಗೆ ಸುಮಾರು 48 ಕಿ.ಮೀ.
ಹೀರೋ ಹೋಂಡಾ 2011 ನ್ಯೂ ಕರಿಜ್ಮಾ ಝಡ್ಎಂಆರ್: ದರ ಸುಮಾರು 1.09 ಲಕ್ಷ ರು. ಗರಿಷ್ಠ ವೇಗ ಪ್ರತಿಗಂಟೆಗೆ 124 ಕಿ.ಮೀ. ಮೈಲೇಜ್ ಪ್ರತಿಲೀಟರ್ ಇಂಧನಕ್ಕೆ ಸುಮಾರು 37 ಕಿ.ಮೀ.
ಯಮಾಹ ವೈಝಡ್ಎಫ್ ಆರ್15: ದರ ಸುಮಾರು 1,11,600 ಲಕ್ಷ ರು. ಗರಿಷ್ಠ ವೇಗ: ಪ್ರತಿಗಂಟೆಗೆ 135 ಕಿ.ಮೀ. ಮೈಲೇಜ್: ಪ್ರತಿಲೀಟರ್ ಗೆ ಸುಮಾರು 35 ಕಿ.ಮೀ.
ಯಮಾಹ ಎಫ್ ಝಡ್16: ದರ ಸುಮಾರು 75 ಸಾವಿರ ರು. ಗರಿಷ್ಠ ವೇಗ: ಗಂಟೆಗೆ 134 ಕಿ.ಮೀ. ಮೈಲೇಜ್: ಪ್ರತಿಲೀಟರ್ ಗೆ 35 ಕಿ.ಮೀ.
ಬಜಾಜ್ ನ್ಯೂ ಪಲ್ಸರ್ 220 ಎಫ್: ದರ ಸುಮಾರು 84 ಸಾವಿರ ರು. ಗರಿಷ್ಠ ವೇಗ: ಗಂಟೆಗೆ 144 ಕಿ.ಮೀ. ಮೈಲೇಜ್: ಲೀಟರ್ ಗೆ 50-60 ಕಿ.ಮೀ.
ಕವಾಸಕಿ ನಿಂಜಾ 250 ಆರ್: ದರ ಸುಮಾರು 3 ಲಕ್ಷ ರು. ಗರಿಷ್ಠ ವೇಗ: ಗಂಟೆಗೆ 176 ಕಿ.ಮೀ. ಮೈಲೇಜ್: ಲೀಟರ್ ಗೆ ಸುಮಾರು 42 ಕಿ.ಮೀ.
ಟಿವಿಎಸ್ ಅಪಾಚಿ ಆಟಿಆರ್ 180: ದರ 78,900 ರು. ಮೈಲೇಜ್: ಲೀಟರ್ ಗೆ 42 ಕಿ.ಮೀ.
ಯಮಹಾ ಫೇಜರ್: ದರ ಸುಮಾರು 82 ಸಾವಿರ ರು. ಮೈಲೇಜ್: ಲೀಟರ್ ಗೆ 40(ಸಿಟಿ)-50(ಹೆದ್ದಾರಿ) ಕಿ.ಮೀ.
ಹೀರೋ ಹೋಂಡಾ ನ್ಯೂ ಕರಿಜ್ಮಾ: ದರ ಸುಮಾರು 88 ಸಾವಿರ ರು. ಮೈಲೇಜ್: 35(ಸಿಟಿ)-45(ಹೆದ್ದಾರಿ) ಕಿ.ಮೀ.
ಬಜಾಜ್ ನ್ಯೂ ಪಲ್ಸರ್ 150: ದರ ಸುಮಾರು 70 ಸಾವಿರ ರು. 51(ಸಿಟಿ)- 61(ಹೆದ್ದಾರಿ) ಕಿ.ಮೀ.
ಬಜಾಜ್ ಪಲ್ಸರ್ 135: ದರ ಸುಮಾರು 61 ಸಾವಿರ ರು. ಮೈಲೇಜ್: 50(ಸಿಟಿ)-65(ಹೆದ್ದಾರಿ) ಕಿ.ಮೀ.
ಯಮಾಹಾ ಎಫ್ ಝಡ್ಎಸ್: ದರ: 77 ಸಾವಿರ ರು. ಮೈಲೇಜ್: 36(ಸಿಟಿ)-47(ಹೈವೇ) ಕಿ.ಮೀ.
ಟಿವಿಎಸ್ ಅಪಾಚೆ ಆರ್ಟಿಆರ್: ದರ ಸುಮಾರು 75 ಸಾವಿರ ರು. ಮೈಲೇಜ್: 42(ಸಿಟಿ)- 54(ಹೆದ್ದಾರಿ)
ಇನ್ನಷ್ಟು ಬೈಕ್ ಗಳು: ಯಮಹಾ ಎಸ್ ಝಡ್-ಆರ್, ಯಮಾಹಾ ಆರ್125, ಕವಾಸಕಿ ನಿಂಜಾ 650 ಆರ್, ಪಲ್ಸರ್ 180, ಸಿಬಿ ಯುನಿಕಾರ್ನ್ ಡಾಜ್ಲರ್, ಸಿಬಿ ಟ್ವಿಸ್ಟರ್, ಬಜಾಜ್ ಡಿಸ್ಕವರ್ 150, ಹೋಂಡಾ ಫ್ಯಾಷನ್ ಪ್ರೊ, ಟಿವಿಎಸ್ ಅಪಾಚಿ ಆರ್ಟಿಆರ್(ಎಬಿಎಸ್), ಪಲ್ಸರ್ 220 ಎಸ್, ಹೋಂಡಾ ಶೈನ್.
ಇದೀಗ ಇಷ್ಟು ಬೈಕ್ ಗಳ ಪಟ್ಟಿ ನೋಡಿ ಯಾವುದನ್ನು ಆಯ್ಕೆ ಮಾಡಿಕೊಳ್ಳುವುದೆಂಬ ಸಂದಿಗ್ಧತೆ ಹೆಚ್ಚಾದರೆ ನಾವು ಜವಾಬ್ದಾರರಲ್ಲ.


Click it and Unblock the Notifications








