ಹೋಂಡಾ ವಿರುದ್ಧ ಬಜಾಜ್ ಸ್ವದೇಶಿ ಚಳವಳಿ

ಕಂಪನಿಯು ಟೆಲಿವಿಷನ್ ಜಾಹೀರಾತಿನಲ್ಲಿ "ಜಪಾನಿನ ಯಾವುದೇ ಸ್ಪೋರ್ಟ್ಸ್ ಬೈಕ್ ಗಿಂತ ಕಂಪನಿಯ ಪಲ್ಸರ್ ಐದು ಪಟ್ಟು ಹೆಚ್ಚು ಮಾರಾಟವಾಗುತ್ತಿದೆ. ಪಲ್ಸರ್ ಭಾರತದ ನಂಬರ್ ಒನ್ ಸ್ಪೋರ್ಟ್ಸ್ ಬೈಕ್" ಎಂದು ಗ್ರಾಹಕರಿಗೆ ತಿಳಿಹೇಳುವ ಕೆಲಸಕ್ಕೆ ಕೈಹಾಕಿದೆ.
"ಹೋಂಡಾದಂತಹ ಕಂಪನಿಗಳಿಗೆ ಹೋಲಿಸಿದರೆ ಕಂಪನಿಯ ಪಲ್ಸರ್ ಮಾರಾಟವೇ ಅತ್ಯಧಿಕವಾಗಿದೆ. ಆದರೆ ಜನರಿಗೆ ನಮ್ಮ ನಾಯಕತ್ವದ ಕುರಿತು ಇನ್ನೂ ತಿಳಿದಿಲ್ಲ. ಅದಕ್ಕಾಗಿ ಜಾಹೀರಾತು ಮೂಲಕ ನಮ್ಮ ಪ್ರಾಬಲ್ಯವನ್ನು ಜನರ ಮುಂದಿಡುತ್ತಿದ್ದೇವೆ" ಎಂದು ಕಂಪನಿಯ ಅಧಿಕಾರಿಯೊಬ್ಬರು ಹೇಳುತ್ತಾರೆ.
"ಸದ್ಯ ಬೈಕ್ ಮಾರುಕಟ್ಟೆಯಲ್ಲಿ ಬಜಾಜ್ ಗೆ ಹೀರೋ ಯಾವುದೇ ಪೈಪೋಟಿ ನೀಡುತ್ತಿಲ್ಲ. ಬಜಾಜ್ ಗೆ ಪ್ರತಿಸ್ಪರ್ಧಿ ಅಂದರೆ ಹೋಂಡಾ ಮಾತ್ರ" ಎಂದು ಅರ್ನೆಸ್ಟ್ ಆಂಡ್ ಯೊಂಗೊ ಆಟೊ ವಿಶ್ಲೇಷಕರಾದ ರಾಕೇಶ್ ಬಾತ್ರಾ ಅಭಿಪ್ರಾಯಪಡುತ್ತಾರೆ.
ಬಜಾಜ್ ಕಂಪನಿಯು ಗ್ರಾಹಕರಿಗೆ ಮಾರುಕಟ್ಟೆ ಟ್ರೆಂಡ್ ಕುರಿತು ಹೇಳುವ ಮೂಲಕ ಹೊಸ ಅವಕಾಶದ ಹುಡುಕಾಟದಲ್ಲಿದೆ ಎಂದು ಕೆಲವು ವಿಶ್ಲೇಷಕರು ಅಭಿಪ್ರಾಯಪಡುತ್ತಾರೆ.
6 ತಿಂಗಳ ಹಿಂದೆ ಹೀರೋದಿಂದ ಹೋಂಡಾ ಪ್ರತ್ಯೇಕವಾಗಿತ್ತು. ಈಗ ಕಂಪನಿಯು ದೇಶಕ್ಕೆ ಕೆಲವು ಮಾದರಿಗಳನ್ನು ಪರಿಚಯಿಸಲು ಯೋಜಿಸುತ್ತಿದೆ.
ಅಂದಹಾಗೆ ಬಜಾಜ್ ನ ಈ ಜಾಹೀರಾತು ಯುದ್ದದ ಕುರಿತು ಹೋಂಡಾ ಮೋಟರ್ಸ್ ಇಂಡಿಯಾ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದೆ. " ನಮಗೆ ರಿಯಾಕ್ಷನ್ ನಲ್ಲಿ ನಂಬಿಕೆಯಿಲ್ಲ, ಕೇವಲ ಆಕ್ಷನ್" ಎಂದು ಹೇಳಿದೆ. ಈ ಮೂಲಕ ಬಜಾಜ್ ವಿರುದ್ಧ ಹೊಸ ಕಾರ್ಯತಂತ್ರ ರೂಪಿಸುವ ಮುನ್ಸೂಚನೆ ನೀಡಿದೆ.


Click it and Unblock the Notifications