ಹಾರುವ ಕನಸಿನ ಮನುಜರು, ಇದು ಹಾರುವ ಬೈಕ್

ವಿಮಾನ, ಹೆಲಿಕಾಫ್ಟರ್, ಜೆಟ್, ಯುದ್ಧವಿಮಾನಗಳು ಎಲ್ಲಕ್ಕೂ ಹಾರುವ ಆವೇಗ. ಆದರೆ ಕೆಲವು ವರ್ಷದ ಹಿಂದೆ ಬಂದ ಹಾರುವ ಕಾರು ಮಾತ್ರ ಒಂದು ಸೋಜಿಗ. ಹಾರುವ ಕಾರನ್ನು ಕಂಡು ಸುಮ್ಮನಿರಲು ಬೈಕ್ ಗೆ ಹೇಗೆ ಸಾಧ್ಯ? ಅದಕ್ಕೂ ಹಕ್ಕಿಯಂತೆ ಹಾರುವ ಆಸೆ.
ಬೈಕನ್ನು ಹಾರಿಸುವ ಕನಸು ಕಂಡವನು ಬ್ರಿಟನಿನ ಪಿಪ್ ಪೌಲಿ ಎಂಬಾ ವಿನ್ಯಾಸಕಾರ. ಆತ ಕೆಲವು ತಿಂಗಳ ಹಿಂದೆ ಹಾರುವ ಬೈಕ್ ಕಾನ್ಸೆಪ್ಟ್ ಮಾಡಿ ಜಗತ್ತಿನ ಮುಂದಿಟ್ಟಿದ್ದಾನೆ. ಇದೀಗ ಅದನ್ನು ಹಾರಿಸುವ ಕುರಿತು ವಾಹನ ಲೋಕದ ಎಂಜಿನಿಯರ್ ಗಳು ಚಿಂತಿಸುತ್ತಿದ್ದಾರೆ.
ಈ ಹಾರುವ ಬೈಕ್ ಗೆ ಪಿಪ್ ಪೌಲಿ "ದಿ ಬುಲೆಟ್" ಎಂದು ನಾಮಕರಣ ಮಾಡಿದ್ದಾನೆ. ಒಂದು ಕಡೆಯಿಂದ ನೋಡಿದರೆ ಸೂಪರ್ ಬೈಕ್ ತರಹ ಕಾಣುತ್ತದೆ. ಆದರೆ ಇದರ ಮುಂಬಾಗ ವಿಮಾನದ ಮೂತಿಯಂತೆ ವಿನ್ಯಾಸ ಮಾಡಲಾಗಿದೆ. ಹಿಂಬಾಗಕ್ಕೆ ಜೆಟ್ ಎಂಜಿನ್ ಅಳವಡಿಸಲಾಗಿದೆ. ಇದರಲ್ಲಿ ಹೆಚ್ಚುವರಿ ಇಂಧನ ತುಂಬಿಸಿಕೊಳ್ಳಲು ಕೂಡ ಸ್ಥಳಾವಕಾಶವಿದೆ. ಇದರ ವೇಗ ಪ್ರತಿಗಂಟೆಗೆ 483 ಕಿ.ಮೀ. ಎಂದು ವಿನ್ಯಾಸಕ ಹೇಳುತ್ತಾನೆ.
ಈ ಕಾನ್ಸೆಪ್ಟ್ ವಿನ್ಯಾಸಕ ಪಿಪ್ ಪೌಲಿಗೆ ಆತನ ಕಾನ್ಸೆಪ್ಟ್ ಕಾರಿನ ಕುರಿತು ಒಂದು ಮಿಂಚಂಚೆ ಕಳುಹಿಸಲಾಯಿತು. ತಕ್ಷಣ ಮಾರುತ್ತರ ಬರೆದು ತನ್ನ ಹಾರುವ ಬೈಕ್ ಕನಸನ್ನು ತೆರೆದಿಟ್ಟ. ಕೊನೆಗೆ I hope that your Indian audience will enjoy my work ಎಂದಿದ್ದಾನೆ. ನಿಮಗೆ ಇಷ್ಟವಾಯಿತೇ?


Click it and Unblock the Notifications








