ಭಾರತಕ್ಕೆ ಬಂತು ರಕ್ಕಸ ಬೈಕ್ ಡುಕಾಟಿ ಡಯಾವೆಲ್

Ducati Diavel
ದೇಶದ ರಸ್ತೆಗೆ ಮತ್ತೊಂದು ರಕ್ಕಸ ಸೂಪರ್ ಬೈಕನ್ನು ಡುಕಾಟಿ ಪರಿಚಯಿಸಿದೆ. ಇದು ನೋಡಲು ಬಾಲ ಎತ್ತಿ ಬುಸುಗುಡುತ್ತಿರುವ ಗೂಳಿಯಂತೆ ಕಾಣುತ್ತದೆ. ಇದು ಮೂರು ಆವೃತ್ತಿಗಳಲ್ಲಿ ಲಭ್ಯವಿದೆ. ಇದರ ಎಕ್ಸ್ ಶೋರೂಂ ದರ ಇಂತಿದೆ. ಬೇಸ್ ವರ್ಷನ್ ಡಯಾವೆಲ್ ಗೆ 17.06 ಲಕ್ಷ ರು, ಕಾರ್ಬನ್ ವರ್ಷನ್ ಗೆ 22.06 ಲಕ್ಷ ರು. ಮತ್ತು ಟಾಪ್ ಎಂಡ್ ಕಾರ್ಬನ್ ರೆಡ್ ವರ್ಷನ್ ಗೆ 22.43 ಲಕ್ಷ ರು. ಆಗಿದೆ.

ಸಾಕಷ್ಟು ಪ್ರಬಲ ಸ್ನಾಯುಗಳನ್ನು ಹೊಂದಿರುವ ಡಯಾವೆಲ್ 1,198 ಸಿಸಿ ಬೈಕ್. ಜೊತೆಗೆ 4 ಸ್ಟ್ರೋಕ್, ನಾಲ್ಕು ಕವಾಟದ ಸಿಲಿಂಡರ್, ಎಲ್-ಟ್ವಿನ್ ಡುಕಾಟಿ ಟೆಸ್ಟ್ರೆಟಾ ಎಂಜಿನ್ ಹೊಂದಿದೆ. ಇದು 9,500 ಆರ್ಪಿಎಂಗೆ 162 ಹಾರ್ಸ್ ಪವರ್ ನೀಡುತ್ತದೆ. ಡಯಾವೆಲ್ ಸಿಕ್ಸ್ ಸ್ಪೀಡ್ ಗೇರ್ ಬಾಕ್ಸ್ ಹೊಂದಿದೆ. ಒಂದು ಗೇರ್ ಕೆಳಗಡೆಗೆ, ಉಳಿದ 5 ಗೇರುಗಳನ್ನು ಮೇಲಕ್ಕೆ ಸಿಫ್ಟ್ ಮಾಡಿದರಾಯ್ತು.

ಡಯಾವೆಲ್ ಬೈಕ್ ನಲ್ಲಿ ಆಂಟಿ ಲಾಕ್ ಬ್ರೇಕಿಂಗ್ ಸಿಸ್ಟಮ್, ಡುಕಾಟಿ ಟ್ರಾಕ್ಷನ್ ಕಂಟ್ರೊಲ್, ಡುಕಾಟಿ ರೈಡಿಂಗ್ ಮೂಡ್ ಹೆಸರು ಸೂಚಕ ಇತ್ಯಾದಿ ಫೀಚರ್ ಗಳಿವೆ. ಈ ರಕ್ಕಸ ಬೈಕ್ ಸ್ಪೋರ್ಟಿ ಸವಾರಿಗೆ ಸೂಕ್ತವಾದ ಬೈಕ್ ಎಂಬುದರಲ್ಲಿ ಎರಡು ಮಾತಿಲ್ಲ. ಇದರೊಂದಿಗೆ ಡುಕಾಟಿಯು ತನ್ನ ಭಾರತದ ನಾಲ್ಕನೇ ಶೋ ರೂಂನ್ನು ಬೆಂಗಳೂರಿನಲ್ಲಿ ಉದ್ಘಾಟಿಸಿದೆ.

ಈ ಬೈಕ್ ದರಕ್ಕೆ ಎಷ್ಟು ನ್ಯಾನೊ ಕಾರು, ಎಷ್ಟು ಆಲ್ಟೊ ದೊರಕುತ್ತಿದೆ ಎಂಬುದನ್ನು ಲೆಕ್ಕ ಹಾಕಬಹುದು. ಅಥವಾ ಎಷ್ಟು ಹೋಂಡಾ250ಆರ್ ಬೈಕ್ ಖರೀದಿಸಬಹುದು ಅಂತ ಆಲೋಚಿಸಬಹುದು.

More from DriveSpark

Article Published On: Tuesday, June 21, 2011, 12:32 [IST]
English summary
In India, the Italian bike maker Ducati has launched the Diavel superbike. Adding, in three variants it is available and the prices for the Diavel is from Rs 17.06 lakh (ex-showroom) for the base, the Carbon variant retails at Rs 22.06 lakh and the top end Carbon Red variant is priced at Rs 22.43 lakh.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+