ಯಮಾಹ ಒಂದು ಮಿಲಿಯನ್ ಬೈಕ್ ಮಾರಾಟದ ಕನಸು

ಈ ಎಲ್ಲಾ ಕಂಪನಿಗಳೊಂದಿಗೆ ಪೈಪೋಟಿ ನಡೆಸಲು ಯಮಹಾ ಕೂಡ ಮುಂದಾಗಿದೆ. ಮುಂದಿನ ಎರಡು ವರ್ಷಗಳಲ್ಲಿ ಹತ್ತು ಲಕ್ಷ ಯುನಿಟ್ ಮಾರಾಟ ಮಾಡುವ ಗುರಿಯನ್ನು ಕಂಪನಿ ಹೊಂದಿದೆ ಎಂದು ಯಮಹಾದ ಸಿಇಒ ಹಿರೊಯುಕಿ ಸುಜುಕಿ ಹೇಳಿದ್ದಾರೆ. ಕಂಪನಿಯು ಈ ವರ್ಷ ದೇಶಿ ಮಾರುಕಟ್ಟೆಯಲ್ಲಿ 3.5 ಲಕ್ಷ ಕಾರುಗಳನ್ನು ಮತ್ತು ಜಾಗತಿಕ ಮಾರುಕಟ್ಟೆಗೆ 1.5 ಕಾರುಗಳನ್ನು ರಫ್ತು ಮಾಡಲು ಯೋಜಿಸಿದೆ.
ಇದರೊಂದಿಗೆ ಕಂಪನಿಯು 2012ಕ್ಕೆ ಸುಮಾರು ಒಂದು ಕೋಟಿ ಡಾಲರ್ ಹೂಡಿಕೆ ಮಾಡಲು ಯೋಜಿಸಿದೆ. ಕಂಪನಿಯು ಇದೇ ಸಮಯದಲ್ಲಿ ದೇಶದ ರಸ್ತೆಗೆ ಸ್ಕೂಟರ್ ಗಳನ್ನು ಪರಿಚಯಿಸುವ ಯೋಜನೆಯನ್ನೂ ಹೊಂದಿದೆ ಎಂದು ಹಿರೊಯುಕಿ ಹೇಳಿದ್ದಾರೆ.


Click it and Unblock the Notifications