ಮುಂದಿನ ವರ್ಷ ರಸ್ತೆಗಿಳಿಯಲಿದೆ ಬಜಾಜ್ ಕೆಟಿಎಂ

KTM bike
ಬಹುನಿರೀಕ್ಷಿತ ಸ್ಪೋರ್ಟ್ಸ್ ಬೈಕ್ ದೇಶದ ರಸ್ತೆಗೆ ಮುಂದಿನ ವರ್ಷ ಬರಲಿದೆ. ಭಾರತದಲ್ಲಿ ಮುಂದಿನ ವರ್ಷದ ಆರಂಭದಲ್ಲಿ ನಡೆಯಲಿರುವ ವಾಹನ ಪ್ರದರ್ಶನದಲ್ಲಿ ಕೆಟಿಎಂ ಬೈಕನ್ನು ಪ್ರದರ್ಶಿಸುವುದಾಗಿ ಆಸ್ಟ್ರೀಯದ ಸ್ಪೋರ್ಟ್ಸ್ ಬೈಕ್ ತಯಾರಿಕಾ ಕಂಪನಿ ಕೆಟಿಎಂ ಹೇಳಿದೆ.

ಕೆಟಿಎಂ ಕಂಪನಿಯು ಭಾರತದ ಬಜಾಜ್ ನೊಂದಿಗೆ ಸಹಭಾಗಿತ್ವ ಹೊಂದಿದೆ. ಈ ಜಂಟಿ ಉದ್ಯಮದಲ್ಲಿ ಶೇಕಡಾ 40ರಷ್ಟು ಪಾಲನ್ನು ಬಜಾಜ್ ಹೊಂದಿದೆ. "ಮುಂದಿನ ವರ್ಷ ಭಾರತಕ್ಕೆ ಮೊದಲ 200ಸಿಸಿಯ ಡ್ಯೂಕ್ ಬೈಕನ್ನು ಪರಿಚಯಿಸಲಿದ್ದೇವೆ" ಎಂದು ಜಂಟಿ ಕಂಪನಿಯ ಸಿಇಒ ಸ್ಟಿಫನ್ ಪಿಯೆರ್ ಹೇಳಿದ್ದಾರೆ. ನೂತನ ಬೈಕನ್ನು ಪುಣೆಯಲ್ಲಿರುವ ಬಜಾಜ್ ಘಟಕದಲ್ಲಿ ಉತ್ಪಾದಿಸಲು ಕಂಪನಿ ನಿರ್ಧರಿಸಿದೆ.

"ನೂತನ ಬೈಕ್ ರಸ್ತೆಗಿಳಿದ ಒಂದು ವರ್ಷದಲ್ಲಿ ಸುಮಾರು 25 ಸಾವಿರದಿಂದ 30 ಸಾವಿರದಷ್ಟು ಬೈಕ್ ಮಾರಾಟದ ಗುರಿಯನ್ನು ಹೊಂದಿದ್ದೇವೆ. ಒಂದು ವರ್ಷ ಕಳೆದ ನಂತರ 350 ಸಿಸಿಯ ಡ್ಯೂಕ್ ಬೈಕನ್ನು ಪರಿಚಯಿಸಲಿದ್ದೇವೆ" ಎಂದು ಅವರು ಹೇಳಿದ್ದಾರೆ.

ಕೆಟಿಎಂ ಕಳೆದ ಮಾರ್ಚ್ ತಿಂಗಳಲ್ಲಿ ಯುರೋಪ್ ನಲ್ಲಿ 125 ಸಿಸಿಯ ಡ್ಯೂಕ್ ಬೈಕನ್ನು ಪರಿಚಯಿಸಿತ್ತು. "ಈಗಾಗಲೇ ಯುರೋಪ್ ನಲ್ಲಿ 7 ಸಾವಿರದಷ್ಟು 125 ಸಿಸಿ ಡ್ಯೂಕ್ ಬೈಕ್ ಮಾರಾಟವಾಗಿದೆ" ಎಂದು ಸ್ಟಿಫನ್ ಹೇಳಿದ್ದಾರೆ. "ಎಲ್ಲಾ ಬೈಕ್ ಗಳನ್ನು ಬಜಾಜ್ ಘಟಕದಲ್ಲಿ ಉತ್ಪಾದಿಸಲಾಗುವುದು. ಇಲ್ಲಿಂದಲೇ ಥೈಲಾಂಡ್, ಮಲೇಷಿಯಾ ಮತ್ತು ಬ್ರೆಜಿಲ್ ದೇಶಗಳಿಗೆ ರಫ್ತು ಮಾಡಲು ಯೋಜಿಸಿದ್ದೇವೆ" ಎಂದು ಅವರು ಹೇಳಿದ್ದಾರೆ.

More from DriveSpark

Article Published On: Wednesday, July 13, 2011, 18:00 [IST]
English summary
Austrian sports bike maker KTM today said it would launch its first motorcycle, jointly developed with Bajaj Auto Ltd, in India at the Auto Expo to be held in the capital early next year.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+