ದ್ವಿಚಕ್ರ ವಾಹನ ಖರೀದಿದಾರರಿಗೆ ಆಫರುಗಳ ಸುರಿಮಳೆ

Two Wheeler
ದ್ವಿಚಕ್ರ ವಾಹನ ಮಾರಾಟ ಹೆಚ್ಚಿಸಲು ಡೀಲರ್ ಗಳು ಹಲವು ಕೊಡುಗೆಗಳನ್ನು ನೀಡಲು ಆರಂಭಿಸಿದ್ದಾರೆ. ಉಚಿತ ಆಕ್ಸೆಸರಿ, ಸಾಲಕ್ಕೆ ಕಡಿಮೆ ಬಡ್ಡಿದರ, ಉಚಿತ ಸರ್ವಿಸಸ್ ಇತ್ಯಾದಿ ಕೊಡುಗೆಗಳ ಮೂಲಕ ಗ್ರಾಹಕರನ್ನು ಸೆಳೆಯಲು ಯತ್ನಿಸುತ್ತಿದ್ದಾರೆ.

ಒಟ್ಟಾರೆ ಬೈಕ್ ಮಾರಾಟ ಹೆಚ್ಚಿಸಲು ವಾಹನ ಡೀಲರ್ ಗಳು ಇಂತಹ ಆಮೀಷಗಳನ್ನೊಡ್ಡುತ್ತಿದ್ದಾರೆ. ಹೋಂಡಾ ಸಿಬಿ ಟ್ವಿಸ್ಟರನ್ನೇ ಉದಾಹರಣೆಯಾಗಿ ತೆಗೆದುಕೊಳ್ಳೋಣ. ಈ ಬೈಕ್ ದರ ಸುಮಾರು 49,755 ರುಪಾಯಿ. ಹೀರೋ ಹೋಂಡಾದ ಅತ್ಯಧಿಕ ಮಾರಾಟದ ಬೈಕ್ ಸ್ಪೆಂಡರ್(41,350 ರು.)ಗೆ ಹೋಲಿಸಿದರೆ ಟ್ವಿಸ್ಟರ್ ದುಬಾರಿಯಾಗಿದೆ.

ಈ ರೀತಿ ಬೈಕ್ ಗಳೆರಡರ ನಡುವೆ ದರ ವ್ಯತ್ಯಾಸವಿದ್ದರೆ ಗ್ರಾಹಕರು ಹೆಚ್ಚಾಗಿ ಅಗ್ಗದ ಬೈಕನ್ನೇ ಖರೀದಿಸುತ್ತಾರೆ. ಇಂತಹ ದುಬಾರಿ ಬೈಕ್ ನಿಂದ ಗ್ರಾಹಕರು ದೂರ ಸರಿಯುವುದನ್ನು ಕಂಪನಿಗಳು ಅರಿತಿವೆ. ಹೀಗಾಗಿ ದೆಹಲಿಯ ಹೋಂಡಾ ಡೀಲರ್ ಗಳು ಟ್ವಿಸ್ಟರ್ ಬೈಕನ್ನು 3,500 ರು. ಕಡಿಮೆಗೆ ನೀಡುತ್ತಿದ್ದಾರೆ.

ತಮ್ಮ ಸಂಗ್ರಹದಲ್ಲಿರುವ ಬೈಕ್ ಸಂಖ್ಯೆಗಳನ್ನು ಕಡಿಮೆ ಮಾಡಲು ಕೂಡ ಬೈಕ್ ಡೀಲರ್ ಗಳು ಇಂತಹ ವಿನಾಯಿತಿ ನೀಡುತ್ತಾರೆ. ಆದರೆ ಗಮನಿಸಬೇಕಾದ ಸಂಗತಿಯೆಂದರೆ ಬೈಕ್ ಮಾರಾಟ ಪ್ರಗತಿ ಕಾಣುವ ನಿರೀಕ್ಷೆಯನ್ನು ಹೊಂದಿರುವುದರಿಂದ ಬೈಕ್ ಕಂಪನಿಗಳು ಇಂತಹ ವಿನಾಯಿತಿಯನ್ನು ನೀಡುತ್ತಿಲ್ಲ. ಆದರೆ ಕಡಿಮೆ ಮಾರಾಟದ ಇಂತಹ ಸ್ಟಾಕ್ ಗಳು ಬೇಗ ಮಾರಾಟವಾಗಲಿ ಎಂಬ ಉದ್ದೇಶದಿಂದ ಡೀಲರುಗಳು ಕೊಡುಗೆಗಳನ್ನು ನೀಡುತ್ತಿದ್ದಾರೆ.

"ದ್ವಿಚಕ್ರ ವಾಹನ ಮಾರುಕಟ್ಟೆಯು ಈಗಲೂ ಸದೃಢವಾಗಿದೆ. ಹೀಗಾಗಿ ಯಾವುದೇ ಕೊಡುಗೆ, ಆಫರುಗಳನ್ನು ನೀಡುವ ಅವಶ್ಯಕತೆ ಕಾಣುತ್ತಿಲ್ಲ" ಎಂದು ಬಜಾಜ್ ಆಟೋ ಮಾರುಕಟ್ಟೆ ಮುಖ್ಯಸ್ಥ ಮಿಲಂದ್ ಬಾಡೆ ಹೇಳಿದ್ದಾರೆ. ಆದರೆ ಗಮನಿಸಿ. ಬಜಾಜ್ ಡೀಲರ್ ಗಳು ಝೀರೋ ಪರ್ಸೆಂಟ್ ಬಡ್ಡಿದರದಲ್ಲಿ 100 ಸಿಸಿಯ ಬಜಾಜ್ ಡಿಸ್ಕವರ್ ಬೈಕ್ ಮಾರಾಟ ಮಾಡುತ್ತಿದ್ದಾರೆ.

ಟಿವಿಎಸ್ ಮೋಟರ್ಸ್ ಡೀಲರುಗಳು ಕೂಡ ಬೈಕ್ ಖರೀದಿದಾರರಿಗೆ ಹಲವು ವಿನಾಯಿತಿಗಳನ್ನು ನೀಡುತ್ತಿದ್ದಾರೆ. ಕಂಪನಿಯ 110 ಸಿಸಿ ಸ್ಟಾರ್ ಸಿಟಿ ಕಮ್ಯೂಟರ್ ಬೈಕ್ ಖರೀದಿದಾರರಿಗೆ ವಿಮೆ ಮತ್ತು ರಸ್ತೆ ತೆರಿಗೆಯಲ್ಲಿ 1,500 ರು. ವಿನಾಯಿತಿ ನೀಡುತ್ತಿವೆ.

Article Published On: Monday, July 18, 2011, 16:52 [IST]
English summary
Two wheeler dealers are offering several freebies to attract buyers despite of the two wheeler market showing a two digit growth rate. Two wheeler dealers are offering special schemes such as free accessories, lowered interest rates for loans and free service to buyers to increase sales. However it is a known fact that two wheeler sales in India continues to grow at a double digit rate.
Read more on ಬೈಕ್ bike
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+