ಕಲಾವಿದನ ಕೈಚಳಕದಿಂದ ಸೃಷ್ಟಿಯಾಯ್ತು ರಾಕ್ಷಸ ಬೈಕ್

ಕಲಾವಿದರ ಕಲ್ಪನೆಗೆ, ಸೃಜನಶೀಲತೆಗೆ, ಕೈಚಳಕಕ್ಕೆ ಎಲ್ಲೆ ಎಲ್ಲಿದೆ? ಕಸವನ್ನು ರಸ ಮಾಡುವ ಕಲೆ ಅವರಿಗೆ ಹೇಳಿಕೊಡಬೇಕೆ? ಆದರೆ ಈ ಕಲಾವಿದ ಕಸದಿಂದ ರಸ ಮಾಡಿಲ್ಲ. ರಾಕ್ಷಸ ಬೈಕ್ ಆಕೃತ್ತಿಯನ್ನೇ ಸೃಷ್ಟಿಸಿಬಿಟ್ಟಿದ್ದಾನೆ. ವಾಹನ ವಿನ್ಯಾಸ ಲೋಕವೇ ಮೂಗಿನ ಮೇಲೆ ಬೆರಳಿಟ್ಟು ನೋಡುವಂತಹ ಈ ವಿಚಿತ್ರ ಬೈಕ್ ಮತ್ತು ಸೃಷ್ಟಿಕರ್ತನ ಬಗ್ಗೆ ಕೊಂಚ ಮಾಹಿತಿ ಇಲ್ಲಿದೆ.
ಈ ಬೈಕಿನಂತೆ ಆತನ ಹೆಸರೇ ವಿಚಿತ್ರವಾಗಿದೆ. ಬ್ಯಾಂಕಾಂಕಿನ 54 ವರ್ಷದ ವ್ಯಕ್ತಿಯ ಹೆಸರು ರೂಂಗ್ರೋಜಾ ಸ್ಯಾಂಗ್ ವೊನ್ ಪ್ರಿಸರನ್. ಆತ ಸೈಕಲ್, ಬೈಕ್, ಸೆಕೆಂಡ್ ಹ್ಯಾಂಡ್ ಕಾರುಗಳ ವ್ಯರ್ಥ ಬಿಡಿಭಾಗಗಳನ್ನು ಮರುಬಳಕೆ ಮಾಡಿ ಈ ಬೈಕ್ ಸೃಷ್ಟಿಸಿ ಸೃಜನಶೀಲತೆ ಮೆರೆದಿದ್ದಾನೆ.
ಈತನಿಗೆ ಬ್ಯಾಂಕಾಂಕಿನಲ್ಲಿ "ಕೊ ಆರ್ಟ್ ಶಾಪ್" ಎಂಬ ಅಂಗಡಿಯಿದೆ. ಅಲ್ಲಿ ಗ್ರಾಹಕರ ಬೇಡಿಕೆಗೆ ತಕ್ಕಂತೆ ಇಂತಹ ಕಲಾತ್ಮಕ ವಾಹನಗಳನ್ನು ವಿನ್ಯಾಸ ಮಾಡಿಕೊಡುತ್ತಾನೆ. ಸಾಕಷ್ಟು ದೇಶಗಳಿಗೆ ಇವನ ವಾಹನಕೃತಿಗಳು ರಫ್ತಾಗಿವೆ. ಅವನಿಗೆ ಇಡೀ ಜಗತ್ತಿನಲ್ಲಿ ಗ್ರಾಹಕರಿದ್ದಾರಂತೆ!


Click it and Unblock the Notifications