ಸ್ಟೀಲ್ ಬರ್ಡ್ ಕಾರ್ಬನ್ ಫೈಬರ್ ಹೆಲ್ಮೆಟ್, ಹತ್ತು ಸಾವಿರ ರು.

ದೇಶದ ಪ್ರಮುಖ ಹೆಲ್ಮೆಟ್ ಉತ್ಪಾದನಾ ಕಂಪನಿ ಸ್ಟೀಲ್ ಬರ್ಡ್ ವಿನೂತನವಾದ ನೂತನ ಹೆಲ್ಮೆಟ್ ಗಳನ್ನು ಪರಿಚಯಿಸಿದೆ. ಇದು ದೇಶದ ಮೊದಲ ಕಾರ್ಬನ್ ಫೈಬರ್ ಹೆಲ್ಮೆಟಾಗಿದ್ದು ದರ ಕೂಡ ಹತ್ತು ಸಾವಿರ ರು. ಆಸುಪಾಸಿನಲ್ಲಿದೆ.
ಸ್ಟೀಲ್ ಬರ್ಡ್ ನೂತನ ಹೆಲ್ಮೆಟ್ ಅತ್ಯುತ್ತಮ ಗುಣಮಟ್ಟದಾಗಿದೆ. ಇದು ಫುಲ್ ಫೇಸ್ ಮತ್ತು ಮೋಟರ್ ಕ್ರಾಸ್ ಎಂಬ ಎರಡು ಆಯ್ಕೆಗಳಲ್ಲಿ ದೊರಕುತ್ತಿದೆ.
ಕಾರ್ಬನ್ ಫೈಬರ್ ಎಂಬುದು ಹಗುರ ಮತ್ತು ಸದೃಢ ಕಚ್ಚಾವಸ್ತುವಾಗಿದೆ. ಸ್ಟೀಲ್ ಬರ್ಡ್ ಹೊರತಂದ ಫೈಬರ್ ಹೆಲ್ಮೆಟ್ ಹಗುರವಾಗಿರುವುದರಿಂದ ಬೈಕ್ ಸವಾರರ ಕತ್ತು ಮತ್ತು ಸ್ನಾಯುಗಳಿಗೆ ಹೆಚ್ಚು ತ್ರಾಸ ನೀಡದು.
ಸದ್ಯ ಮಾರುಕಟ್ಟೆಗಳಲ್ಲಿರುವ ಭಾರದ ಹೆಲ್ಮೆಟ್ ಗಳಿಗೆ ಹೋಲಿಸಿದರೆ ಕಾರ್ಬನ್ ಫೈಬರ್ ಹೆಚ್ಚು ಸೂಕ್ತ ಎಂದು ಕಂಪನಿ ಅಭಿಪ್ರಾಯಪಟ್ಟಿದೆ.


Click it and Unblock the Notifications