ಯೆಸ್ ಯೆಸ್ ಇದು ಯಮಾಹ ಎಸ್ಎಸ್125

ಇದು ಗ್ಲಾಡಿಯೇಟರ್ ಬೈಕಿನ ಇನ್ನೊಂದು ಆವೃತ್ತಿ. ಇದು 4 ಸ್ಟ್ರೋಕ್, ಏರ್ ಕೂಲ್ಡ್ 124 ಸಿಸಿ ಎಂಜಿನ್ ಹೊಂದಿದೆ. ಇದರ ಬೆಂಗಳೂರು ಎಕ್ಸ್ ಶೋರೂಂ ದರ 50 ಸಾವಿರ ರು.ನ ಆಸುಪಾಸಿನಲ್ಲಿದೆ. ಕಡಿಮೆ ದರದ ಬೈಕ್ ಹುಡುಕುವರಿಗೆ ಇದು ಸೂಕ್ತ ಆಯ್ಕೆ ಆಗಬಹುದು.
ಹಗುರ ಅಲ್ಯುಮಿನಿಯಂ ಅಲಾಯ್ ವೀಲ್, ಎದುರಿನ ಚಕ್ರಕ್ಕೆ ಡಿಸ್ಕ್ ಬ್ರೇಕ್, ಟೆಕ್ನೊಮೀಟರ್ ಇತ್ಯಾದಿ ಫೀಚರ್ ಗಳು ಗಮನ ಸೆಳೆಯುತ್ತವೆ. ಇದು ಪ್ರತಿಲೀಟರ್ ಪೆಟ್ರೊಲ್ ಗೆ ಸುಮಾರು 55 ಕಿ.ಮೀ.ಯಿಂದ 70 ಕಿ.ಮೀ. ಮೈಲೇಜ್ ನೀಡುತ್ತದೆ. ಹೀಗಾಗಿ ಇದು ಬೆಸ್ಟ್ ಮೈಲೇಜ್ ಬೈಕ್ ಕೂಡ ಹೌದು.
ಸದ್ಯ ಈ ಬೈಕ್ ಬೇಕಾದರೆ ಡೀಲರ್ ಬಳಿ ವಿಚಾರಿಸಬೇಕು. ಆರ್ಡರ್ ಕೊಟ್ಟರೆ ಮಾತ್ರ ನಿಮಗೆ ಬೈಕ್ ದೊರಕುತ್ತದೆ. ಯಾಕೆಂದರೆ ಕಂಪನಿ ಇದರ ಉತ್ಪಾದನೆಯನ್ನು ಈಗಾಗಲೇ ಸ್ಥಗಿತಗೊಳಿಸಿದೆ.
ಯಮಹಾ ಎಸ್ಎಸ್ 125 ಬೈಕ್ ಫೀಚರ್ಸ್
* ಸ್ಪೋರ್ಟಿ ಟೆಕ್ನೊಮೀಟರ್
* ಹಗುರ ಅಲ್ಯುಮಿನಿಯಂ ವೀಲ್ಸ್
* ಎದುರಿನ ಚಕ್ರಕ್ಕೆ ಡಿಸ್ಕ್ ಬ್ರೇಕ್
* ಹೈಫ್ಲೋ ಏರ್ ಫಿಲ್ಟರ್
* ಸ್ಮೂತಾಗಿರುವ ಷಾಕ್ ಅಬ್ಸಾರ್ಬರ್
* ಆಕರ್ಷಕ ಗ್ರಾಫಿಕ್ಸ್ ಗಳು
* ಟ್ರಾನ್ಸ್ ಮಿಷನ್: 5 ಗೇರ್
* ತೂಕ: 125 ಕೆ.ಜಿ.


Click it and Unblock the Notifications