ಇಂದು ಬಜಾಜ್ ಬಾಕ್ಸರ್ ರಸ್ತೆಗೆ, ದರ 48 ಸಾವಿರ ರು.

Bajaj Boxer
ಬಜಾಜ್ ಬಾಕ್ಸರ್ ಪ್ರೇಮಿಗಳಿಗಿದು ಸಿಹಿಸುದ್ದಿ. ಬಜಾಜ್ ಆಟೋ ಹೆಚ್ಚು ಸದ್ದಿಲ್ಲದೇ ನೂತನ ಬಾಕ್ಸರ್ ಆವೃತ್ತಿಯೊಂದನ್ನು ಇಂದು ರಸ್ತೆಗಿಳಿಸಲಿದೆ ಎಂದು ವರದಿಗಳು ಹೇಳಿವೆ. ಅದು ಕೂಡ 150 ಸಿಸಿಯ ಬಾಕ್ಸರ್. ದರನೂ ಸುಮಾರು 48 ಸಾವಿರ ರು.ನಿಂದ 50 ಸಾವಿರ ರು.ನ ಆಸುಪಾಸಿನಲ್ಲಿರಲಿದೆ ಎಂದು ಮೂಲಗಳು ಹೇಳಿವೆ.

ಗ್ರಾಮೀಣ ಭಾಗದ ಗ್ರಾಹಕರು ಹೊಸ ಬಾಕ್ಸರಿಗೆ ಪ್ರಮುಖ ಟಾರ್ಗೆಟ್. ರಾಜ್ ದೂತ್, ಯೆಜಿಡಿ ಬೈಕಿನಂತೆ ಬಾಕ್ಸರ್ ಕೂಡ ಗ್ರಾಮೀಣ ಜನತೆಗೆ ಇಷ್ಟವಾಗುವ ನಿರೀಕ್ಷೆಯಿದೆ. ಮೈಲೇಜ್ ಕುರಿತು ಇನ್ನೂ ಗೊತ್ತಾಗಿಲ್ಲ. ಆದರೆ ಫರ್ಫಾಮೆನ್ಸ್ ಸೂಪರ್ಬ್ ಆಗಿರಲಿದೆ ಎಂದು ಹೇಳಲಾಗಿದೆ.

ಬಜಾಜ್ ಬಾಕ್ಸರಿನಲ್ಲಿ ಹುಡುಕಿದರೂ ನಿಮಗಿನ್ನು ಬಜಾಜ್ ಲೊಗೊ ದೊರಕದು. ಕಂಪನಿಯು ಪ್ರತಿಬೈಕು ಬ್ರಾಂಡುಗಳಿಗೆ ಅದರದ್ದೇ ಆದ ಐಡೆಂಟೆಟಿ ನೀಡಲು ನಿರ್ಧರಿಸಿದೆಯಂತೆ. ಅಂದ್ರೆ ಬಜಾಜ್ ಪಲ್ಸರ್ ಹೆಸರು ಬದಲಿಗೆ ಕೇವಲ ಪಲ್ಸರ್ ಮಾತ್ರ ಇರಲಿದೆ. ಹೀಗೆಯೇ ಬಜಾಜ್ ಬಾಕ್ಸರಿನಲ್ಲಿ ಇನ್ನುಮುಂದೆ ಬಜಾಜ್ ಲೊಗೊ ಇರೋದಿಲ್ಲ ಅಂತ ಮೂಲಗಳು ಹೇಳಿವೆ.

ನೂತನ ಬಾಕ್ಸರ್ ದರ ಸುಮಾರು 48 ಸಾವಿರ ರು.ನಿಂದ 50 ಸಾವಿರ ರು.ವರೆಗಿರುವ ನಿರೀಕ್ಷೆಯಿದೆ. ಬಾಕ್ಸರ್ ಒಂದು ವರ್ಷದ ಹಿಂದೆ ರಸ್ತೆಗಿಳಿದ ನಂತರ ಹೆಚ್ಚು ಜನಪ್ರಿಯಗೊಂಡಿತ್ತು. ಕ್ಲಾಸಿಕ್ ಬೈಕಾಗಿ 100 ಸಿಸಿ ಬಾಕ್ಸರ್ ಮಧ್ಯಮವರ್ಗದವರನ್ನು ಸೆಳೆದಿತ್ತು. ಇದರ ಕಾರ್ಯಕ್ಷಮತೆ, ಪವರ್ ಎಲ್ಲವೂ ಬೈಕ್ ಪ್ರೀಯರಿಗೆ ಇಷ್ಟವಾಗುವಂತ್ತಿದೆ. ಇನ್ನಷ್ಟು ಮಾಹಿತಿ ಬಾಕ್ಸರ್ ಅಧಿಕೃತವಾಗಿ ರಸ್ತೆಗಿಳಿದ ನಂತರ ನಿರೀಕ್ಷಿಸಿ..

More from DriveSpark

Article Published On: Friday, August 19, 2011, 12:03 [IST]
English summary
The Bajaj Boxer150 is set to be launched today. The new motorcycle which is reported to have been the brain child of Bajaj Auto chief Rajiv Bajaj is aimed mainly at the rural markets. New Boxer 150 price expected Rs 48,000-Rs 50,000.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+