ಟಿವಿಎಸ್ ಮೋಟರ್ ಗೆ ಆಗಸ್ಟ್ ಲಾಭದಾಯಕ

ಕಂಪನಿಯು ಆಗಸ್ಟ್ 2011ರಲ್ಲಿ ಒಟ್ಟು 1,94,898 ವಾಹನ ಮಾರಾಟ ಮಾಡಿದೆ. ಕಳೆದ ವರ್ಷ ಇದೇ ತಿಂಗಳಲ್ಲಿ ಕಂಪನಿಯ ಮಾರಾಟ 1,70,735 ಯೂನಿಟ್ ಆಗಿತ್ತು.
ಟಿವಿಎಸ್ ಏಪ್ರಿಲ್ ನಿಂದ ಆಗಸ್ಟ್ ವರೆಗೆ ಒಟ್ಟು 9,20,990 ಯೂನಿಟ್ ವಾಹನ ಮಾರಾಟ ಮಾಡಿದೆ. ಕಳೆದ ವರ್ಷದ ಇದೇ ಅವಧಿಯ 8,00,789 ಯೂನಿಟ್ ಮಾರಾಟಕ್ಕೆ ಹೋಲಿಸಿದರೆ ಶೇ. 15ರಷ್ಟು ಏರಿಕೆ ಕಂಡಿದೆ.
ಆಗಸ್ಟ್ ನಲ್ಲಿ ಕಂಪನಿಯು 1,90,184 ಯೂನಿಟ್ ದ್ವಿಚಕ್ರ ವಾಹನ ಮಾರಾಟ ಮಾಡಿದೆ. ಕಳೆದ ವರ್ಷದ ಆಗಸ್ಟ್ ನಲ್ಲಿ ದ್ವಿಚಕ್ರ ವಾಹನ ಮಾರಾಟ 1,67,109 ಯೂನಿಟ್ ಆಗಿತ್ತು.
ಕಳೆದ ತಿಂಗಳು ಕಂಪನಿಯು 52,253 ಸ್ಕೂಟರ್ ಮಾರಾಟ ಮಾಡಿದ್ದು, ಕಳೆದ ವರ್ಷದ ಇದೇ ತಿಂಗಳ 40,913 ಯೂನಿಟ್ ಮಾರಾಟಕ್ಕೆ ಹೋಲಿಸಿದರೆ ಶೇಕಡ 28ರಷ್ಟು ಏರಿಕೆ ಕಂಡಿದೆ.
ಇದೇ ಸಮಯದಲ್ಲಿ ಕಂಪನಿಯ ಬೈಕ್ ಮಾರಾಟ 77,726 ಯೂನಿಟ್ ಗೆ ತಲುಪಿದ್ದು ಕಳೆದ ವರ್ಷದ ಆಗಸ್ಟ್ ತಿಂಗಳಿಗಿಂತ ಶೇ. 17ರಷ್ಟು ಏರಿಕೆ ಕಂಡಿದೆ. ಕಂಪನಿಯ ದೇಶಿಯ ಮಾರಾಟ ಶೇಕಡ 11ರಷ್ಟು ಮತ್ತು ರಫ್ತು ವಹಿವಾಟು ಶೇಕಡ 48ರಷ್ಟು ಏರಿಕೆ ಕಂಡಿದೆ. ಮೂರು ಚಕ್ರದ ವಾಹನ ಮಾರಾಟ ಶೇಕಡ 30ರಷ್ಟು ಹೆಚ್ಚಾಗಿದೆ.


Click it and Unblock the Notifications








