150 ಸಿಸಿಯ ಸ್ಪೋರ್ಟಿ ಬೈಕ್ ಯಮಹಾ ಆರ್15 ರಸ್ತೆಗೆ

Yamaha all new R15 Launched
ಯಮಹಾ ಫ್ಯಾಕ್ಟರಿಯಿಂದ ಹೊಸದೊಂದು ಸ್ಪೋರ್ಟ್ಸ್ ಬೈಕ್ ರಸ್ತೆಗಿಳಿಸಿದೆ. ಇದರ ಹೆಸರು ಆರ್15 ವರ್ಷನ್ 2.0. ಈಗಾಗಲೇ ರಸ್ತೆಯಲ್ಲಿರುವ ಆರ್15 ಬೈಕ್ ನ ರೂಪಾಂತರಗೊಂಡ ಹೊಸ ಆವೃತ್ತಿಯಾಗಿದೆ.

150 ಸಿಸಿಯ ಈ ಆರ್15 ಸ್ಪೋರ್ಟಿ ರೈಡಿಗೆ ಸೂಕ್ತ. ಆಕರ್ಷಕ ವಿನ್ಯಾಸ, ಅನನ್ಯ ಕಾರ್ಯಕ್ಷಮತೆ ಮತ್ತು ಅತ್ಯುತ್ತಮ ಹಿಡಿತ ಇದರ ಪ್ರಮುಖ ಆಕರ್ಷಣೆ. ಇದರ ದೆಹಲಿ ಎಕ್ಸ್ ಶೋರೂಂ ದರ 1.07 ಲಕ್ಷ ರುಪಾಯಿ.

ಈಗಾಗಲೇ ಆರ್15 ಬೈಕ್ ರಸ್ತೆಯಲ್ಲಿದೆ. ಆದರೆ ಗ್ರಾಹಕರು ಕ್ರೀಡಾ ಸವಾರಿ ಬಯಸಿದ್ದರಿಂದ ನೂತನ ಪರಿಷ್ಕೃತ ಆವೃತ್ತಿ ಹೊರತಂದಿರುವುದಾಗಿ ಕಂಪನಿ ಹೇಳಿದೆ. ನೂತನ ಆರ್15 ಸ್ಪೋರ್ಟಿ ಲುಕ್ ಮತ್ತು ವಿನ್ಯಾಸ ಸೂಪರ್.

ಅಗಲ ಟೈರ್ ಬೈಕ್ ಪ್ರೇಮಿಗಳನ್ನು ಸೆಳೆಯುತ್ತದೆ. ವಾರೆಯಾಗಿ ಭಯವಿಲ್ಲದೇ ರೈಡ್ ಮಾಡಬಹುದು. ಯಾಕೆಂದರೆ ಇದರ ವಿಸ್ತಾರವಾದ ಟೈರ್ ರಸ್ತೆಯಲ್ಲಿ ಹೆಚ್ಚು ಹಿಡಿತ ನೀಡುತ್ತದೆ. ಈ ಬೈಕಿನಲ್ಲಿ ಯಮಹಾ ಆರ್1 ಮತ್ತು ಆರ್6 ಸ್ಪೋರ್ಟ್ಸ್ ಬೈಕಿನಲ್ಲಿರುವ ಆಕರ್ಷಕ ಫೀಚರುಗಳೆಲ್ಲವನ್ನು ಅಳವಡಿಸಲಾಗಿದೆ.

ಒಟ್ಟಾರೆ ಸ್ಪೋರ್ಟಿ ಸವಾರಿ ಮಾಡಬಯಸುವ ಜನರಿಗೆ ಇಷ್ಟವಾಗುವಂತೆ ನೂತನ ಬೈಕನ್ನು ಕಂಪನಿ ಹೊರತಂದಿದೆ. ಇತರ ಸೂಪರ್ ಬೈಕುಗಳಿಗೆ ಹೋಲಿಸಿದರೆ ಇದು ಹೆಚ್ಚು ದುಬಾರಿಯಲ್ಲ.

More from DriveSpark

Article Published On: Wednesday, September 7, 2011, 10:25 [IST]
English summary
Yamaha Motor India has launched the all new R15 sports bike. The second generation model of the R15 has been aptly called the R15 Version 2.0 and will be available with a starting price of Rs.1.07 lakhs (ex-showroom Delhi).
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+