ಟಿವಿಎಸ್ ಮಾರಾಟ ಶೇ. 17ರಷ್ಟು ಹೆಚ್ಚಳ

ಪ್ರಸಕ್ತ ವರ್ಷದ ಏಪ್ರಿಲ್ ನಿಂದ ಸೆಪ್ಟಂಬರ್ ವರೆಗೆ ಕಂಪನಿಯ ಸಂಚಿತ ಮಾರಾಟ ಶೇಕಡ 15ರಷ್ಟು ಏರಿಕೆ ಕಂಡಿದೆ. ಕಂಪನಿಯು ಈ ಅವಧಿಯಲ್ಲಿ 11,40,359 ವಾಹನ ಮಾರಾಟ ಮಾಡಿದ್ದು, 2010ರ ಇದೇ ಅವಧಿಯಲ್ಲಿ ಒಟ್ಟಾರೆ ಮಾರಾಟ 9,88,764 ಯೂನಿಟ್ ಆಗಿತ್ತು.
ಸೆಪ್ಟಂಬರ್ 2011ರಲ್ಲಿ ಕಂಪನಿಯ ಒಟ್ಟಾರೆ ದ್ವಿಚಕ್ರ ವಾಹನ ಮಾರಾಟ ಶೇಕಡ 17ರಷ್ಟು ಪ್ರಗತಿ ಕಂಡಿದೆ. ಸ್ಕೂಟರ್ ಮಾರಾಟ ಶೇಕಡ 30ರಷ್ಟು ಏರಿಕೆ ಕಂಡಿದೆ. ಕಂಪನಿಯು ಕಳೆದ ತಿಂಗಳು 55,879 ಯೂನಿಟ್ ಮಾರಾಟ ಮಾಡಿತ್ತು.
ಕಳೆದ ತಿಂಗಳು ಕಂಪನಿಯ ಬೈಕ್ ಮಾರಾಟ ಶೇಕಡ 12ರಷ್ಟು ಪ್ರಗತಿ ಕಂಡಿದೆ. ಕಂಪನಿಯು ಸೆಪ್ಟಂಬರ್ ನಲ್ಲಿ 90,848 ಯೂನಿಟ್ ಮೋಟರ್ ಸೈಕಲ್ ಮಾರಾಟ ಮಾಡಿತ್ತು.


Click it and Unblock the Notifications








